ಆ್ಯಪ್ನಗರ

ಸಾಹಿತ್ಯಾಸಕ್ತಿಯಿಂದ ಭಾಷಾಭಿಮಾನ ಸಾಧ್ಯ

ಮಕ್ಕಳಲ್ಲಿಸಾಹಿತ್ಯ ಆಸಕ್ತಿ ಬೆಳೆಸುವ ಕಾರ‍್ಯಕ್ರಮಗಳನ್ನು ಶಿಕ್ಷಣ ಸಂಸ್ಥೆಗಳು ಆಯೋಜಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್‌. ಬಿಂಬ ಹೇಳಿದರು.

Vijaya Karnataka 9 Dec 2019, 10:00 pm
ಸಾಗರ : ಮಕ್ಕಳಲ್ಲಿಸಾಹಿತ್ಯ ಆಸಕ್ತಿ ಬೆಳೆಸುವ ಕಾರ‍್ಯಕ್ರಮಗಳನ್ನು ಶಿಕ್ಷಣ ಸಂಸ್ಥೆಗಳು ಆಯೋಜಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್‌. ಬಿಂಬ ಹೇಳಿದರು.
Vijaya Karnataka Web 05SGR4_46
ಸಾಗರದ ಮಂಕಳಲೆಯ ಸಂತ ಜೋಸೆಫ್‌ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿಗುರುವಾರ ಏರ್ಪಡಿಸಿದ್ದ ಕಥೆ, ಕಾವ್ಯ, ಪ್ರಬಂಧ ರಚನಾ ಕಮ್ಮಟವನ್ನು ಬಿಇಒ ಕೆ.ಆರ್‌.ಬಿಂಬ ಉದ್ಘಾಟಿಸಿದರು.


ಇಲ್ಲಿನ ಮಂಕಳಲೆಯ ಸಂತ ಜೋಸೆಫ್‌ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿಗುರುವಾರ ಕರ್ನಾಟಕ ಜಾನಪದ ಪರಿಷತ್‌ ಮತ್ತು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಏರ್ಪಡಿಸಿದ್ದ ಕಥೆ-ಕಾವ್ಯ-ಪ್ರಬಂಧ ರಚನಾ ಕಮ್ಮಟ ಉದ್ಘಾಟಿಸಿ ಅವರು ಮಾತನಾಡಿದರು.

ಸಾಹಿತ್ಯ ಆಸಕ್ತಿ ಮೂಲಕ ಭಾಷೆ ಬಗ್ಗೆ ಅಭಿಮಾನ ಬೆಳೆಸಲು ಸಾಧ್ಯ. ಪ್ರೌಢಶಾಲೆ ಹಂತದ ವಿದ್ಯಾರ್ಥಿಗಳಲ್ಲಿಓದುವ ಹವ್ಯಾಸ ರೂಢಿಸಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ್‌ ಮಾತನಾಡಿ, ನಮ್ಮ ವೇದಿಕೆಯಿಂದ ಜಿಲ್ಲಾದ್ಯಂತ ಕಥೆ, ಕಾವ್ಯ, ಪ್ರಬಂಧ ಸೇರಿದಂತೆ ವಿವಿಧ ಕಮ್ಮಟ ಆಯೋಜಿಸಿ, ಮಕ್ಕಳಲ್ಲಿಆಸಕ್ತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಕಥಾ ರಚನೆ ಕುರಿತು ಸಾಹಿತಿ ಡಾ.ನಾ.ಡಿಸೋಜ, ಕಾವ್ಯ ರಚನೆ ಕುರಿತು ಲೇಖಕ ವಿಲಿಯಂ, ಪ್ರಬಂಧ ರಚನೆ ಕುರಿತು ಲೇಖಕ ಜಿ.ನಾಗೇಶ್‌ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿಮುಖ್ಯ ಶಿಕ್ಷಕಿ ಸಿಸ್ಟರ್‌ ಬಿ.ಎಸ್‌.ಪ್ರಿಯಲತಾ , ವಿ.ಟಿ.ಸ್ವಾಮಿ, ಉಮೇಶ ಹಿರೆನೆಲ್ಲೂರ್‌ ಇದ್ದರು. ಅಮೂಲ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸ್ಟಾತ್ರ್ಯನ್ಲಿಲೋಪಿಸ್‌ ಸ್ವಾಗತಿಸಿ, ಪರಮೇಶ್ವರ ಕರೂರು ಪ್ರಾಸ್ತಾವಿಕ ಮಾತನಾಡಿದರು. ಸತ್ಯನಾರಾಯಣ ಸಿರವಂತೆ ವಂದಿಸಿ, ಮನಸ್ವಿನಿ ಮತ್ತು ಗ್ರೀಷ್ಮಾ ನಿರೂಪಿಸಿದರು.

========
ನಮ್ಮ ವೇದಿಕೆಯಿಂದ ಜಿಲ್ಲಾದ್ಯಂತ ಕಥೆ, ಕಾವ್ಯ, ಪ್ರಬಂಧ ಸೇರಿದಂತೆ ವಿವಿಧ ಕಮ್ಮಟ ಆಯೋಜಿಸಿ, ಮಕ್ಕಳಲ್ಲಿಆಸಕ್ತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.
-ಡಿ.ಮಂಜುನಾಥ್‌

(5ಎಸ್‌ಜಿಆರ್‌4) ಸಾಗರದ ಮಂಕಳಲೆಯ ಸಂತ ಜೋಸೆಫ್‌ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿಗುರುವಾರ ಏರ್ಪಡಿಸಿದ್ದ ಕಥೆ, ಕಾವ್ಯ, ಪ್ರಬಂಧ ರಚನಾ ಕಮ್ಮಟವನ್ನು ಬಿಇಒ ಕೆ.ಆರ್‌.ಬಿಂಬ ಉದ್ಘಾಟಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ