ಆ್ಯಪ್ನಗರ

ಹುಚ್ಚು ನರಿ ಕಚ್ಚಿ ಮೂವರಿಗೆ ಗಾಯ

ಸಾಗರ ತಾಲೂಕಿನ ತ್ಯಾಗರ್ತಿ ಸಮೀಪದ ಹುತ್ತಾದಿಂಬ ಗ್ರಾಮದಲ್ಲಿಶುಕ್ರವಾರ ಸಂಜೆ ಹುಚ್ಚು ನರಿ ಕಚ್ಚಿ ಮೂವರು ರೈತರು ಗಾಯಗೊಂಡಿದ್ದಾರೆ.

Vijaya Karnataka 18 Jul 2020, 5:00 am
ತ್ಯಾಗರ್ತಿ: ಸಾಗರ ತಾಲೂಕಿನ ತ್ಯಾಗರ್ತಿ ಸಮೀಪದ ಹುತ್ತಾದಿಂಬ ಗ್ರಾಮದಲ್ಲಿಶುಕ್ರವಾರ ಸಂಜೆ ಹುಚ್ಚು ನರಿ ಕಚ್ಚಿ ಮೂವರು ರೈತರು ಗಾಯಗೊಂಡಿದ್ದಾರೆ.
Vijaya Karnataka Web mad fox bites and injures three
ಹುಚ್ಚು ನರಿ ಕಚ್ಚಿ ಮೂವರಿಗೆ ಗಾಯ


ಹಿರೇಬಿಲಗುಂಜಿ ಗ್ರಾ.ಪಂ. ಮಾಜಿ ಅಧ್ಯಕ್ಷ ಎಚ್‌.ಆರ್‌.ಲಿಂಗಪ್ಪ ಸೇರಿ ಮೂವರು ಶುಕ್ರವಾರ ಸಂಜೆ ಕೃಷಿ ಚಟುವಟಿಕೆಯಲ್ಲಿತೊಡಗಿದ್ದಾಗ ಜೋಳದ ಬೆಳೆ ಮಧ್ಯದಿಂದ ಹುಚ್ಚು ನರಿ ಬಂದು ಕಚ್ಚಿದ್ದು, ಗಾಯಾಳುಗಳನ್ನು ಸಾಗರದ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದೊಯ್ಯಲಾಗಿದೆ.

ನರಿಯು ಅಲ್ಲಿಯ ಅರಣ್ಯದ ಮಧ್ಯೆ ಬೀಡು ಬಿಟ್ಟಿದ್ದು, ಆ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ಜನರ ಆತಂಕವನ್ನು ಹೆಚ್ಚಿಸಿದೆ.

ಸೂಕ್ತ ಲಸಿಕೆ ಲಭ್ಯವಿಲ್ಲ:
ಸಾಗರದ ಸರಕಾರಿ ಆಸ್ಪತ್ರೆಯಲ್ಲಿಇದಕ್ಕೆ ಸಂಬಂಧಪಟ್ಟ ಯಾವುದೇ ಲಸಿಕೆ ಸಿಗುವುದಿಲ್ಲಎಂದು ವೈದ್ಯರು ತಿಳಿಸಿದ್ದರಿಂದ ಖಾಸಗಿ ಔಷಧ ಅಂಗಡಿಯಿಂದ ದುಬಾರಿ ಬೆಲೆಗೆ ಚುಚ್ಚುಮದ್ದು ತಂದು ತೆಗೆದುಕೊಳ್ಳಲಾಗಿದೆ ಎಂದು ಎಚ್‌.ಆರ್‌.ಲಿಂಗಪ್ಪ ದೂರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ