ಆ್ಯಪ್ನಗರ

ಮಕ್ಕಳಿಗೆ ಪರಿಸರ ಅರಿವು ಮೂಡಿಸಿ

ಮಕ್ಕಳಲ್ಲಿ ಪರಿಸರ ಜಾಗೃತಿ ಕುರಿತು ಅರಿವು ಮೂಡಿಸುವುದು ಹೆಚ್ಚು ಪ್ರಯೋಜನಕಾರಿ ಎಂದು ಶಿಕ್ಷ ಕಿ ಸಾವಕ್ಕ ಮೆಣಸಿನಹಾಳ ಹೇಳಿದರು.

Vijaya Karnataka 30 Jul 2019, 5:00 am
ಶಿರಾಳಕೊಪ್ಪ: ಮಕ್ಕಳಲ್ಲಿ ಪರಿಸರ ಜಾಗೃತಿ ಕುರಿತು ಅರಿವು ಮೂಡಿಸುವುದು ಹೆಚ್ಚು ಪ್ರಯೋಜನಕಾರಿ ಎಂದು ಶಿಕ್ಷ ಕಿ ಸಾವಕ್ಕ ಮೆಣಸಿನಹಾಳ ಹೇಳಿದರು.
Vijaya Karnataka Web SMR-29SLKP01 PHOTO 01


ಬೆಲವಂತನಕೊಪ್ಪದ ಸ್ಮಾರ್ಟ್‌ ಕಿಡ್ಸ್‌ ಫ್ರೀ ಸ್ಕೂಲ್‌ನಲ್ಲಿ ಶನಿವಾರ ನಡೆದ ಪರಿಸರ ಉಡುಗೆ ಸ್ಪರ್ಧೆ ಉದ್ದೇಶಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಒಂದು ಗಿಡ ಬೆಳೆಸಲು ಪ್ರೇರೇಪಿಸಿದರೆ ಪರಿಸರ ಉಳಿಸಬಹುದು. ಇಂದು ಮಳೆಗಾಲ ಎನಿಸುತ್ತಿಲ್ಲ, ಕಾರಣ ವಿಪರೀತ ಅರಣ್ಯ ನಾಶದಿಂದ ಸಾಂಪ್ರದಾಯಿಕ ಮಳೆ ಬೀಳುತ್ತಿಲ್ಲ. ಕೆರೆಗಳು ತುಂಬದೆ ಇನ್ನೂ ಬರಿದಾಗಿವೆ. ಈ ಕಾರಣಕ್ಕೆ ಪರಿಸರ ಉಳಿಸುವುದು ಅನಿವಾರ‍್ಯ ಎಂದರು. ಸ್ಪರ್ಧೆಯ ಮುಖ್ಯ ಅತಿಥಿ ಆಶಾ ಮಂಜುನಾಥ್‌ ಮಾತನಾಡಿ, ಛದ್ಮ ವೇಷ ಸ್ಪರ್ಧೆಯಲ್ಲಿ ರಾಧೆ-ಕೃಷ್ಣರ ವೇಷ ಎಲ್ಲೆಡೆ ನಡೆಯುತ್ತವೆ. ಪರಿಸರಕ್ಕೆ ಸಂಬಂಧಿಸಿದ ಉಡುಗೆ ಸ್ಪರ್ಧೆ ಮಕ್ಕಳಿಗಲ್ಲದೆ ಪೋಷಕರಿಗೂ ಕೆಲಸ ಕೊಡುತ್ತದೆ. ಆಗ ಹೆಚ್ಚು ಪರಿಸರದ ಅರಿವು ಮೂಡುತ್ತದೆ. ಮಕ್ಕಳನ್ನು ಮರ, ಬಳ್ಳಿ, ತರಕಾರಿ, ಹೂಗಳ ವೇಷದಲ್ಲಿ ನೋಡುವುದು ಮನಸ್ಸಿಗೆ ಮುದ ನೀಡುತ್ತದೆ ಎಂದರು.

ಶಾಲೆ ಆಡಳಿತಾಧಿಕಾರಿ ಸೋಮಶೇಖರ್‌ ಸ್ವಾಮಿ, ಶಿಕ್ಷ ಕಿಯರಾದ ಪೂರ್ಣಿಮಾ, ಶಶಿಕಲಾ, ವಿನೂತ, ಶಿಲ್ಪ, ಪ್ರಭಾವತಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ