ಆ್ಯಪ್ನಗರ

ಮತದಾನದಲ್ಲಿಶಿವಮೊಗ್ಗ ನಂಬರ್ 1 ಮಾಡಿ

ಬಲಿಷ್ಠ ಭಾರತ ನಿರ್ಮಾಣ ಮತ್ತು ರಾಷ್ಟ್ರದ ಅಭಿವೃದ್ಧಿಗಾಗಿ ದೇಶದ ಪ್ರತಿಯೊಬ್ಬರೂ ಮತದಾನದ ಪಾವಿತ್ರ್ಯತೆ ಅರಿತು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಜಿಪಂ ಸಿಇಓ ಎಂ.ಎಲ್‌. ವೈಶಾಲಿ ಹೇಳಿದರು.

Vijaya Karnataka 28 Sep 2019, 5:00 am
ಶಿವಮೊಗ್ಗ : ಬಲಿಷ್ಠ ಭಾರತ ನಿರ್ಮಾಣ ಮತ್ತು ರಾಷ್ಟ್ರದ ಅಭಿವೃದ್ಧಿಗಾಗಿ ದೇಶದ ಪ್ರತಿಯೊಬ್ಬರೂ ಮತದಾನದ ಪಾವಿತ್ರ್ಯತೆ ಅರಿತು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಜಿಪಂ ಸಿಇಓ ಎಂ.ಎಲ್‌. ವೈಶಾಲಿ ಹೇಳಿದರು.
Vijaya Karnataka Web 27ganesh2


ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿಶುಕ್ರವಾರ ಜಿಲ್ಲಾಚುನಾವಣಾ ಶಾಖೆ, ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ವಿದ್ಯಾರ್ಥಿ ಚುನಾವಣಾ ರಾಯಭಾರಿಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದ ಯಶಸ್ಸಿಗೆ ಹಾಗೂ ದೇಶದ ವ್ಯವಸ್ಥೆ ಸದೃಢಗೊಳಿಸುವಲ್ಲಿನಡೆಯುವ ಚುನಾವಣಾ ಪ್ರಕ್ರಿಯೆಯಲ್ಲಿಅರ್ಹರೆಲ್ಲರೂ ಮತದಾನ ಪ್ರಕ್ರಿಯೆಯಲ್ಲಿಸಕ್ರಿಯವಾಗಿ ಪಾಲ್ಗೊಳ್ಳುವ ಅನಿವಾರ‍್ಯವಿದೆ ಎಂದರು.

ವಿದ್ಯಾರ್ಥಿಗಳು ಮೊದಲು ತಮ್ಮ ಕುಟುಂಬದ ಸದಸ್ಯರಿಗೆ ಮತ್ತು ತಮ್ಮ ಕಾಲೇಜು ತರಗತಿ ವಿದ್ಯಾರ್ಥಿಗಳಿಗೆ ಚುನಾವಣೆ ಬಗ್ಗೆ ಜಾಗೃತಿ, ಅರಿವು ಮೂಡಿಸುವ ಮೂಲಕ ಮತದಾನದಲ್ಲಿಎಲ್ಲರೂ ಭಾಗಿಯಾಗುವಂತೆ ಮಾಡಬೇಕು ಎಂದರು.

ಈ ಅವಕಾಶ ಸದುಪಯೋಗಪಡಿಸಿಕೊಂಡು ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಸಂಕಲ್ಪ ಮಾಡಬೇಕು. ಜತೆಗೆ, ಕಾಲೇಜು ರಾಯಭಾರಿಗಳು ಮತದಾನ ಪ್ರಕ್ರಿಯೆ ಹಾಗೂ ಹೆಸರು ನೋಂದಾಯಿಸುವ ಪ್ರಕ್ರಿಯೆಯಲ್ಲಿಕಾರ್ಯೋನ್ಮುಖರಾಗಿ ಶಿವಮೊಗ್ಗ ಜಿಲ್ಲೆಅತಿ ಹೆಚ್ಚು ಮತದಾನ ಮಾಡಿರುವ ದೇಶದ ನಂಬರ್‌ ಒನ್‌ ಜಿಲ್ಲೆಯಾಗಿಸಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅನುರಾಧ ಮಾತನಾಡಿ, ಕಳೆದ ಚುನಾವಣೆಯಲ್ಲಿಜಿಲ್ಲೆಯ ಎಲ್ಲನಾಗರಿಕರು ನಿಷ್ಠೆಯಿಂದ ಮತದಾನ ಮಾಡಿದ್ದರಿಂದ ನಮ್ಮ ಜಿಲ್ಲೆಮೊದಲ ಸ್ಥಾನದಲ್ಲಿದೆ. ಈ ಬಾರಿಯೂ ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದರು. ಕಾಲೇಜು ಶಿಕ್ಷಣ ಇಲಾಖೆಯ ಮಂಜುನಾಥ, ನಗರದ ವಿವಿಧ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು ಮತ್ತಿತರರು ಪಾಲ್ಗೊಂಡಿದ್ದರು.

----
ಭಾರತ ಸಂವಿಧಾನವು ಪ್ರತಿಯೊಬ್ಬ ನಾಗರಿಕರಿಗೂ ಮತದಾನ ಮಾಡುವ ಅವಕಾಶ ಕಲ್ಪಿಸಿಕೊಟ್ಟಿದ್ದು, ಮತದಾನ ಮಾಡಲು ನಾಗರಿಕರಲ್ಲಿರುವ ಹಿಂಜರಿಕೆ ಮನೋಭಾವ ತೊಡೆದು ಹಾಕಲು ಕಾಲೇಜು ವಿದ್ಯಾರ್ಥಿಗಳು ತಮ್ಮ ಪಾತ್ರ ನಿರ್ವಹಿಸಬೇಕು. ಸಮರ್ಥ ನಾಯಕರನ್ನು ಆಯ್ಕೆ ಮಾಡುವ ಹಕ್ಕು ಮತದಾರರಿಗೆ ಇದೆ. ಆದರೆ, ಮತದಾನ ಮಾಡದೇ ಆಡಳಿತ ವ್ಯವಸ್ಥೆ ಟೀಕೆ ಮಾಡುವುದು ಸರಿಯಲ್ಲ.
- ಎಂ.ಎಲ್‌.ವೈಶಾಲಿ, ಜಿ.ಪಂ ಸಿಇಒ



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ