ಆ್ಯಪ್ನಗರ

ಮಲೆನಾಡಲ್ಲಿ ಬಿಟ್ಟೂಬಿಡದ ಮಳೆ

ಎರಡೂ ಜಿಲ್ಲೆಯಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ. ಮೂಡಿಗೆರೆ, ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ, ಹೊಸನಗರ ತಾಲೂಕುಗಳಲ್ಲಿ ಬಿಟ್ಟೂಬಿಡದೆ ಮಳೆ ಸುರಿಯುತ್ತಿದೆ. ತೊರೆ, ಹಳ್ಳ, ನದಿಗಳು ತುಂಬಿ ಹರಿಯುತ್ತಿವೆ.

Vijaya Karnataka 5 Aug 2019, 5:00 am
ಶಿವಮೊಗ್ಗ/ ಚಿಕ್ಕಮಗಳೂರು : ಎರಡೂ ಜಿಲ್ಲೆಯಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ. ಮೂಡಿಗೆರೆ, ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ, ಹೊಸನಗರ ತಾಲೂಕುಗಳಲ್ಲಿ ಬಿಟ್ಟೂಬಿಡದೆ ಮಳೆ ಸುರಿಯುತ್ತಿದೆ. ತೊರೆ, ಹಳ್ಳ, ನದಿಗಳು ತುಂಬಿ ಹರಿಯುತ್ತಿವೆ.
Vijaya Karnataka Web CKM-04KTG6


ಸಾಗರ, ಸೊರಬ, ಶಿಕಾರಿಪುರ, ಶಿವಮೊಗ್ಗ, ನರಸಿಂಹರಾಜಪುರ, ಚಿಕ್ಕಮಗಳೂರು, ತರೀಕೆರೆ ತಾಲೂಕು ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗಿದೆ. ಮಾನ್ಸೂನ್‌ ಮಳೆಗಳಲ್ಲಿ ಮೃಗಶಿರ ಮತ್ತು ಪುನರ್ವಸು ಹೇಳಿಕೊಳ್ಳುವ ಉತ್ಸಾಹವೇನೂ ತರಲಿಲ್ಲ. ಆದರೆ, ಆರಿದ್ರ ಮತ್ತು ಪುಷ್ಯ ಮಲೆನಾಡಿಗರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿವೆ. ಜೋಗದಲ್ಲಿ ಜಲಪಾತ ವೀಕ್ಷಿಸಲು ಭಾನುವಾರ ಪ್ರವಾಸಿಗರ ದಟ್ಟಣೆಯೇ ನೆರೆದಿತ್ತು.

ನೆಲಕ್ಕೊರಗಿದ ವಿದ್ಯುತ್‌ ಕಂಬ: ಮೂಡಿಗೆರೆ ತಾಲೂಕು ಕೊಟ್ಟಿಗೆಹಾರ, ಬಣಕಲ್‌, ಬಾಳೂರು ಸುತ್ತಮುತ್ತ ಭಾನುವಾರ ಸುರಿದ ಭಾರಿ ಮಳೆಗೆ ಅಲ್ಲಲ್ಲಿ ವಿದ್ಯುತ್‌ ಕಂಬಗಳು ನೆಲಕುರುಳಿದ್ದು, ವಿದ್ಯುತ್‌ ಸೌಲಭ್ಯ ಕಡಿತಗೊಂಡಿದೆ. ಕೊಟ್ಟಿಗೆಹಾರದಲ್ಲಿ 101 ಮಿ.ಮೀ. ಮಳೆಯಾಗಿದೆ. ಮೆಸ್ಕಾಂ ಸಿಬ್ಬಂದಿ ವಿದ್ಯುತ್‌ ಮಾರ್ಗ ದುರಸ್ತಿಯಲ್ಲಿ ತೊಡಗಿದ್ದಾರೆ. ಹೊಸನಗರದಲ್ಲಿ ಅತ್ಯಧಿಕ 198 ಮಿ.ಮೀ. ಮಳೆ ದಾಖಲಾಗಿದೆ. ತೀರ್ಥಹಳ್ಳಿ 30.4, ಸೊರಬ 16.2, ಸಾಗರ 12.2, ಶಿವಮೊಗ್ಗದಲ್ಲಿ 7.2, ಭದ್ರಾವತಿಯಲ್ಲಿ 3.4, ಶಿಕಾರಿಪುರ 2.4 ಮಿ.ಮೀ. ಮಳೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ