ಆ್ಯಪ್ನಗರ

ಕೆಂಚನಾಲದಲ್ಲಿ ವಿಜೃಂಭಣೆ ಮಾರಿಕಾಂಬ ಜಾತ್ರೆ

ಇತಿಹಾಸ ಪ್ರಸಿದ್ಧ ಕೆಂಚನಾಲ ಮಾರಿಕಾಂಬ ದೇವಿಯ ಮಳೆಗಾಲದ ಜಾತ್ರಾ ಮಹೋತ್ಸವವು ಮಂಗಳವಾರ ವಿಜೃಂಭಣೆಯಿಂದ ಭಕ್ತಸಾಗರದ ನಡುವೆ ನಡೆಯಿತು.

Vijaya Karnataka 31 Jul 2019, 5:00 am
ರಿಪ್ಪನ್‌ಪೇಟೆ: ಇತಿಹಾಸ ಪ್ರಸಿದ್ಧ ಕೆಂಚನಾಲ ಮಾರಿಕಾಂಬ ದೇವಿಯ ಮಳೆಗಾಲದ ಜಾತ್ರಾ ಮಹೋತ್ಸವವು ಮಂಗಳವಾರ ವಿಜೃಂಭಣೆಯಿಂದ ಭಕ್ತಸಾಗರದ ನಡುವೆ ನಡೆಯಿತು.
Vijaya Karnataka Web SMR-30,RPT1


ಮಳೆ ಇದ್ದರು ಭಕ್ತಾಧಿಗಳು ಬೆಳಗ್ಗೆಯಿಂದಲೆ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ವರ್ಷದಲ್ಲಿ ಎರಡು ಭಾರಿ ಅಚರಿಸುವ ಈ ಜಾತ್ರಾ ಮಹೋತ್ಸವವು ಮಳೆಗಾಲದಲ್ಲಿ ಮಂಗಳವಾರ ಬೇಸಿಗೆಯಲ್ಲಿ ಬುಧುವಾರದೊಂದು ಆಚರಣೆಗೊಳ್ಳುತ್ತದೆ. ಜಾತ್ರೆಗೆ ಸುತ್ತಮುತ್ತಲಿನ ರೈತರು ಸೇರಿದಂತೆ ಅಪಾರ ಭಕ್ತರು ನಾಡಿನ ವಿವಿಧಡೆಯಿಂದ ಬಂದು ಹರಕೆ ಕಾಣಿಕೆಯನ್ನು ದೇವಿಗೆ ಸಮರ್ಪಿಸುತ್ತಾರೆ.

ಮಳೆಗಾಲದಲ್ಲಿ ತಮ್ಮ ಹೊಲದಲ್ಲಿ ಹಾಕಲಾದ ಬೆಳೆಗಳಿಗೆ ರೋಗ ರುಜಜ ಹರಡದಂತೆ ಮತ್ತು ಕಾಡು ಪ್ರಾಣಿಗಳಿಂದ ರಕ್ಷ ಣೆ ಮಾಡುವಂತೆ, ಜಾನುವಾರುಗಳಿಗೆ ಕಾಲುಬಾಯಿ ರೋಗ ಬರದಂತೆ ದೇವಿ ರಕ್ಷಿಸುವಂತೆ ಹರಿಕೆ ಇಡುತ್ತಾರೆ. ಇನ್ನೂ ಹೊಸದಾಗಿ ವಿವಾಹವಾದ ದಂಪತಿಗಳು ಮಕ್ಕಳಾಗಲೆಂದು, ಯುವಜನರು ಮದುವೆಯಾಗಲೆಂದು ದೇವಿಗೆ ಹರಕೆ ಮಾಡಿಕೊಳ್ಳುವುದು ವಾಡಿಕೆಯಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯದಿಂದಲೂ ಮಾರಿಕಾಂಬ ದೇವಿಯ ಭಕ್ತರು ಜಾತ್ರಗೆ ಆಗಮಿಸಿ ದೇವಿಯ ದರ್ಶನವನ್ನು ಪಡೆಯುತ್ತಾರೆ. 15 ಸಾವಿರಕ್ಕಿಂತಲೂ ಅಧಕ ಭಕ್ತರು ಈ ಬಾರಿಯ ಜಾತ್ರೆಗೆ ಆಗಮಿಸಿ ದೇವಿಯ ದರ್ಶನವನ್ನು ಪಡೆದರು ಎಂದು ದೇವಸ್ಥಾನ ಧರ್ಮದರ್ಶಿ ಸಮಿತಿಯ ಅದ್ಯಕ್ಷ ಕೆ.ಎಂ.ಬಸವರಾಜ್‌ ಪತ್ರಿಕೆಗೆ ಮಾಹಿತಿ ನೀಡಿದರು. ಧರ್ಮದರ್ಶಿ ಸಮಿತಿಯ ಸದಸ್ಯರಾದ ಪರಮೇಶ್‌ ಹೊನ್ನಕೊಪ್ಪ .ಚಂದ್ರಪ್ಪ, ಮಾಣಿಕೆರೆ ಉಮೇಶ್‌,ಸಜ್ಜಿದ್‌ ಇನ್ನಿತರರು ಮಾರಿಕಾಂಬ ದೇವಿಯ ಜಾತ್ರೆಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ