ಆ್ಯಪ್ನಗರ

ಮರೆಯಲಾಗದ ಮಾಸ್ತರ್‌ ಕೊಡುಗೆ

ಮಲೆನಾಡಿನ ಜಾನಪದ ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಜಾನಪದ ಲೋಕದ ದಿಗ್ಗಜ ಹುಚ್ಚಪ್ಪ ಮಾಸ್ತರ್‌ ಅವರ ಸೇವೆ ಅಪಾರ ಎಂದು ಸಮಾಜ ಚಿಂತಕ ರಾಜಪ್ಪ ಮಾಸ್ತರ್‌ ಹೇಳಿದರು.

Vijaya Karnataka 20 Jul 2019, 5:00 am
ಸೊರಬ: ಮಲೆನಾಡಿನ ಜಾನಪದ ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಜಾನಪದ ಲೋಕದ ದಿಗ್ಗಜ ಹುಚ್ಚಪ್ಪ ಮಾಸ್ತರ್‌ ಅವರ ಸೇವೆ ಅಪಾರ ಎಂದು ಸಮಾಜ ಚಿಂತಕ ರಾಜಪ್ಪ ಮಾಸ್ತರ್‌ ಹೇಳಿದರು.
Vijaya Karnataka Web master contribution immortal
ಮರೆಯಲಾಗದ ಮಾಸ್ತರ್‌ ಕೊಡುಗೆ


ಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಜಾನಪದ ವಿದ್ವಾಂಸ ಹುಚ್ಚಪ್ಪ ಮಾಸ್ತರ್‌ ನಿಧನದ ನಿಮಿತ್ತ ಗುರುವಾರ ಸಂಜೆ ಏರ್ಪಡಿಸಿದ್ದ ಸಂತಾಪ ಸೂಚನಾ ಸಭೆಯಲ್ಲಿ ಅವರು ಮಾತನಾಡಿದರು.

ಬುಡಕಟ್ಟು ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುವ ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿ ರಂಗತಂಡ ಕಟ್ಟುವ ಮೂಲಕ ಬುಡಕಟ್ಟು ಸಮುದಾಯದ ಯುವಕರು ಜಾನಪದ ರಂಗಭೂಮಿಯಲ್ಲಿ ತೊಡಗುವಂತೆ ಮಾಡಿದ್ದ ಕೀರ್ತಿ ಮಾಸ್ತರ್‌ಗೆ ಸಲ್ಲುತ್ತದೆ. ಜಾನಪದ ಲೋಕದ ಕಣಜ ಎಂದೇ ಹೆಸರಾದ ಮಾಸ್ತರ್‌ ನಿಧನದಿಂದ ಜಾನಪದ ಲೋಕಕ್ಕೆ ನಷ್ಟವಾಗಿದೆ. ಅವರ ಕುಟುಂಬಕ್ಕೆ ಅಗಲಿಕೆ ನೋವು ಸಹಿಸಿಕೊಳ್ಳುವ ಶಕ್ತಿ ದೊರೆಯಲಿ ಎಂದರು.

ಪ.ಪಂ ಸದಸ್ಯ ಮಧುರಾಯ್‌ ಜಿ.ಶೇಟ್‌ ಮಾತನಾಡಿ, ತಾಲೂಕಲ್ಲಿ ಹುಚ್ಚಪ್ಪ ಮಾಸ್ತರ್‌ ಅವರು ಅಭಿರುಚಿ ವೇದಿಕೆ ಹುಟ್ಟುಹಾಕಿ ಯುವಕರು ಜಾನಪದ ಕಲೆ, ಸಂಸ್ಕೃತಿ ಬಗ್ಗೆ ಒಲವು ತೋರುವಂತೆ ಮಾಡಿದರು ಎಂದರು. ಕಸಾಪ ಅಧ್ಯಕ್ಷ ಹಾಲೇಶ್‌ ನವುಲೆ, ಬಿಎಸ್‌ಎನ್‌ಡಿಪಿ ಸಂಘಟನೆಯ ಪ್ರವೀಣ್‌ ಹಿರೇಇಡಗೋಡು, ತಾಲೂಕು ಅಧ್ಯಕ್ಷ ಶಿವಕುಮಾರ್‌ ಬೀಳವಗೋಡು, ಎಸ್‌.ಕೃಷ್ಣಾನಂದ್‌, ಮೋಹನ್‌ ಸುರಭಿ, ಪತ್ರಕರ್ತರಾದ ಜಿ.ಎಂ.ತೋಟಪ್ಪ, ಶಿವಪ್ಪ ಹಿತ್ಲರ್‌, ರವಿ ಕಲ್ಲಂಬಿ, ಸೈಯದ್‌ ಅನ್ಸರ್‌ ಹಾಗೂ ವಿವಿಧ ಸಂಘ-ಸಂಸ್ಥೆಯವರು ಭಾಗವಹಿಸಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ