ಆ್ಯಪ್ನಗರ

ಡಿಸಿ ನಿವಾಸದ ಪಕ್ಕ ಸೈನಿಕ ಪಾರ್ಕ್‌

ಹಾಳುಕೊಂಪೆ, ಪುಂಡಪೋಕರಿಗಳ ಅಡ್ಡೆಯಂತಾಗಿದ್ದ ನಗರದ ಮಧ್ಯ ಭಾಗದ ಪಾರ್ಕ್‌ ಈಗ ಸೈನಿಕ ಪಾರ್ಕ್‌ ಆಗಿ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ.

Vijaya Karnataka 19 Jul 2019, 5:00 am
ಶಿವಮೊಗ್ಗ : ಹಾಳುಕೊಂಪೆ, ಪುಂಡಪೋಕರಿಗಳ ಅಡ್ಡೆಯಂತಾಗಿದ್ದ ನಗರದ ಮಧ್ಯ ಭಾಗದ ಪಾರ್ಕ್‌ ಈಗ ಸೈನಿಕ ಪಾರ್ಕ್‌ ಆಗಿ ಹೊಸ ರೂಪ ಪಡೆದುಕೊಳ್ಳುತ್ತಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ.
Vijaya Karnataka Web SMG-1807-2-15-18 SMG SYNIKA 3


ಜಿಲ್ಲಾಡಳಿತ, ಸೈನಿಕ ಕಲ್ಯಾಣ ಇಲಾಖೆ ಹಾಗೂ ರಾಜ್ಯ ಶಿಲ್ಪಕಲಾ ಅಕಾಡೆಮಿ ಒಗ್ಗೂಡಿಕೊಂಡು ನಗರದ ಸರಕಾರಿ ನೌಕರರ ಭವನದ ಎಡ ಬದಿ, ಜಿಲ್ಲಾಧಿಕಾರಿ ನಿವಾಸ ಸಮೀಪವಿರುವ ಉದ್ಯಾನವನಕ್ಕೆ ಹೊಸ ಜೀವಕಳೆ ಬಂದಿದೆ. ದೇಶ ಕಾಯುವ ಸೈನಿಕರ ತ್ಯಾಗ, ಬಲಿದಾನ, ದೇಶ ಪ್ರೇಮ ಬಿಂಬಿಸುವ ಹಲವು ಕಲಾಕೃತಿಗಳು ಸಿದ್ಧಗೊಳ್ಳುತ್ತಿದ್ದು, ಇನ್ನೊಂದು ವಾರದೊಳಗೆ ಉದ್ಯಾನವನ ವಿಶೇಷ ತಾಣವಾಗಿ ಮಾರ್ಪಾಡಾಗಲಿದೆ. ಕಲಾಕೃತಿಗಳನ್ನು ಸಿಮೆಂಟ್‌, ಮರಳು ಹಾಗೂ ಪುಡಿ ಇಟ್ಟಿಗೆಗಳಿಂದ ನಿರ್ಮಾಣ ಮಾಡಲಾಗುತ್ತಿದೆ.

ವಾಯುಸೇನೆ, ನೌಕಾಸೇನೆ, ಭೂ ಸೇನೆ ಅಧಿಕಾರಿಗಳು, ಸೈನ್ಯದ ಸಂಕೇತ ಅಮರ್‌ ಜವಾನ್‌, ಅಧಿಕಾರಿಗಳು ಸೆಲ್ಯೂಟ್‌ ಹೊಡೆಯುತ್ತಿರುವುದು,ಯುದ್ಧದಲ್ಲಿ ಗಾಯಗೊಂಡ ಸೈನಿಕರನ್ನು ರಕ್ಷಣೆ ಮಾಡುತ್ತಿರುವುದು, ಕಾರ್ಗಿಲ್‌ ಧ್ವಜಾರೋಹಣ, ನೇವಿ ಅಧಿಕಾರಿ, ಗನ್‌ಮ್ಯಾನ್‌, ಆರ್ಮಿ ಆಫೀಸರ್‌, ಸೈನಿಕರಿಗೆ ಮನೆಯಿಂದ ಬೀಳ್ಕೊಡುಗೆ, ಗಾಯಗೊಂಡ ಯೋಧÜರ ರಕ್ಷಣೆ, ಯೋಧರಿಗೆ ಚಿಕಿತ್ಸೆ, ನಾಗರಿಕರ ರಕ್ಷಣೆ ಹಾಗೂ ಏಕತೆ ಸಾರುವ ಕಲಾಕೃತಿಗಳು ಕಣ್ಮನ ಸೆಳೆಯುತ್ತಿವೆ. ಶಿವಮೊಗ್ಗ, ಭದ್ರಾವತಿ, ಶಿಕಾರಿಪುರ, ದಾವಣಗೆರೆ, ರಾಯಚೂರು, ಉಡುಪಿ ಹಾಗೂ ಬೆಂಗಳೂರಿನಿಂದ ಆಗಮಿಸಿರುವ ಹಿರಿ-ಕಿರಿಯ ಕಲಾವಿದರಿಗೆ ಜಿಲ್ಲಾಡಳಿತವೇ ಊಟ, ವಸತಿ ವ್ಯವಸ್ಥೆ ಮಾಡಿಕೊಟ್ಟಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 30 ಕಲಾವಿದರ ಕೈ ಚಳಕದಲ್ಲಿ ಕಲಾಕೃತಿಗಳು ಅರಳುತ್ತಿವೆ. ಸೈನಿಕರು ಹಗೂ ಕಾರ್ಗಿಲ್‌ ಯುದ್ಧದ ವಿಜಯೋತ್ಸವ ಆಚರಿಸುವುದು ಸೇರಿ 20 ಕಲಾಕೃತಿಗಳು ಅಂದಾಜು 12ರಿಂದ 15 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಸಿದ್ಧಗೊಳ್ಳುತ್ತಿವೆ.

ಈಗಾಗಲೇ ಅರಸೀಕೆರೆ, ಕಾಗಿನೆಲೆ, ಆಗುಂಬೆಯ ಉದ್ಯಾನವನ ಹಾಗೂ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಮರದಿಂದ ಕಲಾಕೃತಿಗಳನ್ನು ನಿರ್ಮಾಣ ಮಾಡಲಾಗಿದೆ. ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಹಿರಿಯ ಕಲಾವಿದರಾದ ರಾಮಕೃಷ್ಣ, ನಾರಾಯಣ, ಶಿಲ್ಪಕಲಾ ಅಕಾಡೆಮಿ ಸದಸ್ಯ ಎಂ. ರಘು ಅವರ ನೇತೃತ್ವದಲ್ಲಿ ಶಿಬಿರ ನಡೆಯತ್ತಿದೆ. ಜು. 25ರಂದು ಪಾರ್ಕ್‌ ಉದ್ಘಾಟನೆ ಮಾಡಲು ಜಿಲ್ಳಾಡಳಿತ ಹಾಗೂ ಸೈನಿಕ ಕಲ್ಯಾಣ ಇಲಾಖೆ ಸಿದ್ಧತೆ ನಡೆಸಿದೆ.

----------------
ಕಳೆದ ವಾರದಿಂದ ಕಲಾಕೃತಿಗಳನ್ನು ನಿರ್ಮಿಸಲಾಗುತ್ತಿದೆ. ಜಿಲ್ಲಾಡಳಿತ ಕಲಾವಿದರಿಗೆ ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಟ್ಟಿದೆ. ಇನ್ನೊಂದು ವಾರದಲ್ಲಿ ನಿರ್ಮಾಣ ಕಾರ‍್ಯ ಮುಗಿಯಲಿದೆ.
- ಎಂ. ರಘು, ಶಿಲ್ಪ ಕಲಾ ಅಕಾಡೆಮಿ ಸದಸ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ