ಆ್ಯಪ್ನಗರ

ಅಲ್ಪಸಂಖ್ಯಾತರ ಯೋಜನೆ ಸದ್ಬಳಕೆ ಆಗಲಿ

ಚುನಾವಣಾ ಸಂದರ್ಭ ಅಲ್ಪಸಂಖ್ಯಾತರ ಸಮುದಾಯದವರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಬದ್ಧ ಎಂದು ಶಾಸಕ ಹಾಗೂ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಅಧ್ಯಕ್ಷ ಬಿ.ಕೆ.ಸಂಗಮೇಶ್ವರ್‌ ಹೇಳಿದರು.

Vijaya Karnataka 30 Jun 2019, 5:00 am
ಭದ್ರಾವತಿ: ಚುನಾವಣಾ ಸಂದರ್ಭ ಅಲ್ಪಸಂಖ್ಯಾತರ ಸಮುದಾಯದವರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಬದ್ಧ ಎಂದು ಶಾಸಕ ಹಾಗೂ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಅಧ್ಯಕ್ಷ ಬಿ.ಕೆ.ಸಂಗಮೇಶ್ವರ್‌ ಹೇಳಿದರು.
Vijaya Karnataka Web SMR-26BDVT3


ಅವರು ಬುಧವಾರ ಹಳೇನಗರದ ಜಾಮಿಯಾ ಶಾದಿ ಮಹಲ್‌ ಸಭಾಂಗಣದಲ್ಲಿ ಕೆಆರ್‌ಐಡಿಎಲ್‌ ವತಿಯಿಂದ 10 ಲಕ್ಷ ರೂ. ಚೆಕ್‌ ವಿತರಿಸಿ ನಂತರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸರಕಾರ ಅಲ್ಪಸಂಖ್ಯಾತರ ಇಲಾಖೆಗೆ ಅನೇಕ ಯೋಜನೆ ಜಾರಿ ಮಾಡಿದೆ. ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕೆಂದರು. ಈ ಸಂದರ್ಭ ಮಸೀದಿ ಅಧ್ಯಕ್ಷ ಸಯ್ಯಾದ್‌ ಗೌಸ್‌, ಪದಾಧಿಕಾರಿಗಳಾದ ದಿಲ್ದಾರ್‌, ಇಮ್ತಿಯಾಜ್‌ ಅಹಮದ್‌, ಅಂಜುಮಾನ್‌ ಅಧ್ಯಕ್ಷ ಸಿ.ಎಂ.ಖಾದರ್‌, ಮಾಜಿ ಅಧ್ಯಕ್ಷ ಶೇಖ್‌ ಮಹಬೂಬ್‌, ಮುಖಂಡರಾದ ಎಂಡಿ. ಗೌಸ್‌, ರಹಮತುಲ್ಲಾ ಬೇಗ್‌ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ