ಆ್ಯಪ್ನಗರ

‘ಮಂಗನಕಾಯಿಲೆ ನಿರ್ಮೂಲನೆಗೆ ಶ್ರಮಿಸಿ’

ಆರೋಗ್ಯ ಇಲಾಖೆ ಅಧಿಕಾರಿಗಳು ತಾಲೂಕಿನ ಗಡಿಪ್ರದೇಶದಲ್ಲಿ ಕಂಡು ಬಂದ ಮಂಗನ ಕಾಯಿಲೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಗಂಭೀರ ಯತ್ನ ಮಾಡಬೇಕು. ಆರೋಗ್ಯ ಇಲಾಖೆ ರೋಗ ನಿಯಂತ್ರಣಕ್ಕೆ ತುರ್ತು ಗಮನ ಹರಿಸಬೇಕೆಂದು ಶಾಸಕ ಎಚ್‌.ಹಾಲಪ್ಪ ಸೂಚನೆ ನೀಡಿದರು.

Vijaya Karnataka 23 Dec 2018, 5:00 am
ಸಾಗರ : ಆರೋಗ್ಯ ಇಲಾಖೆ ಅಧಿಕಾರಿಗಳು ತಾಲೂಕಿನ ಗಡಿಪ್ರದೇಶದಲ್ಲಿ ಕಂಡು ಬಂದ ಮಂಗನ ಕಾಯಿಲೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಲು ಗಂಭೀರ ಯತ್ನ ಮಾಡಬೇಕು. ಆರೋಗ್ಯ ಇಲಾಖೆ ರೋಗ ನಿಯಂತ್ರಣಕ್ಕೆ ತುರ್ತು ಗಮನ ಹರಿಸಬೇಕೆಂದು ಶಾಸಕ ಎಚ್‌.ಹಾಲಪ್ಪ ಸೂಚನೆ ನೀಡಿದರು.
Vijaya Karnataka Web smr-22sgr3


ಇಲ್ಲಿನ ಉಪವಿಭಾಗೀಯ ಆಸ್ಪತ್ರೆಯಲ್ಲಿ ಶನಿವಾರ ತಾಲೂಕಿನ ಅರಲಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹರಡುತ್ತಿರುವ ಮಂಗನ ಕಾಯಿಲೆ ತಡೆಗಟ್ಟುವ ಕುರಿತು ವೈದ್ಯಾಧಿಕಾರಿಗಳ ಸಭೆ ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು.

ಸುಮಾರು 45 ವರ್ಷದ ಹಿಂದೆ ಹೊಳೆಕೊಪ್ಪದ ಕ್ಯಾಸನೂರು ಅರಣ್ಯ ವ್ಯಾಪ್ತಿಯ ಸರ್ವೇ ನಂ.14ರಲ್ಲಿ ಮೊದಲ ಬಾರಿಗೆ ಮಂಗನಕಾಯಿಲೆ ಪತ್ತೆಯಾಗಿತ್ತು. ಅಂದು ಆಧುನಿಕ ಸೌಲಭ್ಯ ಇಲ್ಲದಿದ್ದಾಗ್ಯೂ ರೋಗ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿತ್ತು. ಇದೀಗ ಸಾಗರ ತಾಲೂಕಿನ ಅರಲಗೋಡು ಭಾಗದಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ವಿಧಾನಸಭೆಯಲ್ಲಿ ಸಹ ಕಾಯಿಲೆ ಗಂಭೀರತೆ ಕುರಿತು ಪ್ರಸ್ತಾಪ ಮಾಡಿ ಸರಕಾರದ ಗಮನ ಸೆಳೆದಿದ್ದೇನೆ. ವಿಧಾನಸಭಾಧ್ಯಕ್ಷ ರು ಸೂಕ್ತ ನಿಗಾವಹಿಸುವಂತೆ ಸರಕಾರಕ್ಕೆ ಸೂಚನೆ ನೀಡಿದ್ದಾರೆ ಎಂದರು.

ಕಾಡಿನಲ್ಲಿ ಮಂಗಗಳು ಸತ್ತು ಬೀಳುತ್ತಿರುವ ಮಾಹಿತಿ ಇದೆ. ಸತ್ತ ಮಂಗಗಳನ್ನು ತಕ್ಷ ಣ ಸುಟ್ಟು ಹಾಕಬೇಕು. ಜತೆಗೆ ಸತ್ತ ಮಂಗಗಳ ಬಗ್ಗೆ ಮಾಹಿತಿ ನೀಡಲು ಸ್ಥಳೀಯರಿಗೆ ಸೂಚನೆ ನೀಡಿ. ಮಾಹಿತಿ ನೀಡುವ ಸಾರ್ವಜನಿಕರಿಗೆ ಪ್ರೋತ್ಸಾಹಧನ ನೀಡುವ ಚಿಂತನೆ ಅಗತ್ಯ. ಕಾಯಿಲೆ ವ್ಯಾಪಿಸಿರುವ ಅರಲಗೋಡು ವ್ಯಾಪ್ತಿಯಲ್ಲಿ ಗ್ರಾಮಸ್ಥರ ಸಭೆ ಕರೆದು ಜಾಗೃತಿ ಮೂಡಿಸುವ ಕೆಲಸವನ್ನು ಇಲಾಖೆಗಳು ಮಾಡಬೇಕು ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌, ಸಿವಿಲ್‌ ಸರ್ಜನ್‌ ಡಾ.ಪ್ರಕಾಶ್‌ ಬೋಸ್ಲೆ, ಡಾ.ಕಿಶನ್‌, ಡಾ.ರಶ್ಮಿ, ತಾಲೂಕು ಆರೋಗ್ಯಾಧಿಕಾರಿ ಡಾ.ಮುನಿರಾಜು ಇತರರು ಇದ್ದರು.


==================================
ಆರೋಗ್ಯಸಚಿವರ ಭೇಟಿ
ಈಗಾಗಲೇ ಮಂಗನಕಾಯಿಲೆ ನಿಯಂತ್ರಣ ಸಂಬಂಧ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ಆರೋಗ್ಯ ಸಚಿವರು ಸೋಮವಾರ ಮಧ್ಯಾಹ್ನ 2-30ಕ್ಕೆ ಸ್ಥಳಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ. ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಪಶುವೈದ್ಯಕೀಯ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ರೋಗ ನಿಯಂತ್ರಣಕ್ಕೆ ತರಲು ಎಲ್ಲ ಸೌಲಭ್ಯ ಸರಕಾರದ ಕಡೆಯಿಂದ ಕಲ್ಪಿಸಲಾಗುತ್ತದೆ.
-ಎಚ್‌.ಹಾಲಪ್ಪ , ಶಾಸಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ