ಆ್ಯಪ್ನಗರ

ಎಂಪಿಎಂಗೆ 12 ಮಂದಿ ಕಾರ್ಮಿಕರು ಪುನರ್‌ ನೇಮಕ

ಎಂಪಿಎಂ ಕಾರ್ಖಾನೆಯಲ್ಲಿ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸದೆ ಹೊರಗುಳಿದಿದ್ದ 12 ಮಂದಿ ಕಾರ್ಮಿಕರು, ಕಾರ್ಮಿಕ ನ್ಯಾಯಾಲಯದ ಆದೇಶದ ಮೇರೆಗೆ ಶುಕ್ರವಾರ ಕರ್ತವ್ಯಕ್ಕೆ ಪುನರ್‌ ನೇಮಕಗೊಂಡಿದ್ದಾರೆ.

Vijaya Karnataka 29 Jun 2019, 5:00 am
ಭದ್ರಾವತಿ: ಎಂಪಿಎಂ ಕಾರ್ಖಾನೆಯಲ್ಲಿ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸದೆ ಹೊರಗುಳಿದಿದ್ದ 12 ಮಂದಿ ಕಾರ್ಮಿಕರು, ಕಾರ್ಮಿಕ ನ್ಯಾಯಾಲಯದ ಆದೇಶದ ಮೇರೆಗೆ ಶುಕ್ರವಾರ ಕರ್ತವ್ಯಕ್ಕೆ ಪುನರ್‌ ನೇಮಕಗೊಂಡಿದ್ದಾರೆ.
Vijaya Karnataka Web mpm to recruit 12 workers
ಎಂಪಿಎಂಗೆ 12 ಮಂದಿ ಕಾರ್ಮಿಕರು ಪುನರ್‌ ನೇಮಕ


ಎಂಪಿಎಂ ಆಡಳಿತ ಮಂಡಳಿ 3 ವರ್ಷಗಳ ಹಿಂದೆ ಕಾರ್ಖಾನೆಯನ್ನು ಸಂಪೂರ್ಣ ಸ್ಥಗಿತಗೊಳಿಸಿ ಕಾರ್ಮಿಕರಿಗೆ ಸ್ವಯಂ ನಿವೃತ್ತಿ ಘೋಷಣೆ ಮಾಡಿತ್ತು. ಇದರಲ್ಲಿ 12 ಮಂದಿ ಕಾರ್ಮಿಕರಾದ ಎಚ್‌.ತಿಮ್ಮಪ್ಪ, ಟಿ.ಜಿ.ಬಸವರಾಜಯ್ಯ, ಎಸ್‌.ಚಂದ್ರಶೇಖರ್‌, ಚನ್ನಿಗಪ್ಪ, ದಾದಾಪೀರ್‌, ಸಿ.ವೈ.ಪಾಲ್‌, ಉಮೇಶ್‌, ವೆಂಕಟೇಶ್‌ ಮೂರ್ತಿ, ಸಣ್ಣಮಂಜಾನಾಯ್ಕ, ಯೋಗರಾಜ್‌, ಶಿವಯೋಗಿ ಹಾಗು ಸುರೇಶ್‌ ತಮ್ಮ ಹಕ್ಕನ್ನು ಪ್ರತಿಪಾದಿಸಿ ನ್ಯಾಯ ಒದಗಿಸಬೇಕೆಂದು ಹಾಗು ಉದ್ಯೋಗಕ್ಕೆ ಪುನರ್‌ ನೇಮಕಗೊಳಿಸುವಂತೆ ಹಾಸನದ ಕಾರ್ಮಿಕ ಆಯುಕ್ತರು ಹಾಗು ಕಾರ್ಮಿಕ ನ್ಯಾಯಾಲಯದ ಮೊರೆ ಹೋಗಿದ್ದರು.

ನ್ಯಾಯಾಲಯವು ಈ 12 ಮಂದಿ ಕಾರ್ಮಿಕರಿಗೆ ಕರ್ತವ್ಯಕ್ಕೆ ಪುನರ್‌ ನೇಮಕ ಮಾಡಿಕೊಳ್ಳುವಂತೆ ನೀಡಿದ ಆದೇಶದ ಮೇರೆಗೆ ಕಾರ್ಖಾನೆ ಮುಖ್ಯ ಆಡಳಿತಾಧಿಕಾರಿ ಜಿ.ಎಸ್‌.ಶ್ರೀನಿವಾಸ್‌ ಅನುಮತಿ ಮೇರೆಗೆ ಹಿರಿಯ ವ್ಯವಸ್ಥಾಪಕ ಎಂ.ಶ್ರೀನಿವಾಸ್‌ ಅವರ ಬಳಿ ಕರ್ತವ್ಯಕ್ಕೆ ಪುನರ್‌ ನೇಮಕಗೊಂಡರು. ಇದು ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಕಾರ್ಮಿಕರು ಪತ್ರಿಕೆಗೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ