ಆ್ಯಪ್ನಗರ

ನಿಷ್ಠುರ ಮೌಲ್ಯಮಾಪನ ಅಗತ್ಯ

ನಮ್ಮ ಶಿಕ್ಷ ಣ ಪದ್ಧತಿ ಕುರಿತು ಸರಕಾರ ಮರುಚಿಂತನೆ ನಡೆಸಬೇಕಾಗಿದೆ ಎಂದು ಸಾಗರದ ಜೋಶಿ ಫೌಂಡೇಷನ್‌ ಅಧ್ಯಕ್ಷ ಅಬಸೆ ದಿನೇಶ್‌ಕುಮಾರ್‌ ಜೋಶಿ ಹೇಳಿದರು.

Vijaya Karnataka 5 Jul 2019, 5:00 am
ಸಾಗರ: ನಮ್ಮ ಶಿಕ್ಷ ಣ ಪದ್ಧತಿ ಕುರಿತು ಸರಕಾರ ಮರುಚಿಂತನೆ ನಡೆಸಬೇಕಾಗಿದೆ ಎಂದು ಸಾಗರದ ಜೋಶಿ ಫೌಂಡೇಷನ್‌ ಅಧ್ಯಕ್ಷ ಅಬಸೆ ದಿನೇಶ್‌ಕುಮಾರ್‌ ಜೋಶಿ ಹೇಳಿದರು.
Vijaya Karnataka Web SMR-28SGR6


ಎಡಜಿಗಳೇಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾರದಾಪುರದ ಇಕ್ಕೇರಿ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ದಿನೇಶ್‌ ಜೋಶಿ ಫೌಂಡೇಷನ್‌ ಉಚಿತವಾಗಿ ಒದಗಿಸಿದ ನೋಟ್‌ಪುಸ್ತಕಗಳನ್ನು 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು.

ಉತ್ತರ ಪತ್ರಿಕೆಯ ಮೌಲ್ಯಮಾಪನ ಎನ್ನುವುದು ಉದಾರತೆಯಿಂದ ಕೂಡಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಬಹುಸಂಖ್ಯಾತ ವಿದ್ಯಾರ್ಥಿಗಳು ಶೇ. 99-100ರ ಪ್ರತಿಶತದಲ್ಲಿ ಅಂಕಗಳಿಸುತ್ತಿರುವುದನ್ನು ಗಮನಿಸಬಹುದಾಗಿದೆ. ಪ್ರಶ್ನೆ ಪತ್ರಿಕೆ ಕಠಿಣವಿದ್ದಾಗ ಮೌಲ್ಯಮಾಪನ ತುಸು ಉದಾರತೆಯಿದ್ದರೆ ತಪ್ಪಿಲ್ಲ. ಸ್ಪರ್ಧಾಯಗದ ಸಂದರ್ಭದಲ್ಲಿ ಮೌಲ್ಯಮಾಪನ ಹೆಚ್ಚು ನಿಷ್ಠುರವಾಗಿರಬೇಕೆಂದರು.

ಸೇವಾಸಾಗರ ಶಾಲೆ ನಿವೃತ್ತ ಮುಖ್ಯ ಶಿಕ್ಷ ಕ ನಾರಾಯಣಮೂರ್ತಿ ಕಾನುಗೋಡು ಮಾತನಾಡಿ, ಅತಿಯಾದ ಮೊಬೈಲ್‌ ಬಳಕೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ನಾಶಮಾಡುತ್ತಿದೆ ಎಂದರು. ಇಕ್ಕೇರಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್‌.ಟಿ.ರತ್ನಾಕರ್‌ ಅಧ್ಯಕ್ಷ ತೆ ವಹಿಸಿದ್ದರು. ವಿದ್ಯಾಸಂಸ್ಥೆ ಪ್ರಧಾನ ಕಾರ‍್ಯದರ್ಶಿ ಜೆ.ಆರ್‌.ವೆಂಕಟೇಶ್‌, ಉಪಾಧ್ಯಕ್ಷ ರಾಮಚಂದ್ರರಾವ್‌ ಜನ್ನೆ, ಮುಖ್ಯ ಶಿಕ್ಷ ಕ ಸಿ.ರಜನೀಶ್‌ ಇದ್ದರು. ಯು.ವಿ.ರಶ್ಮಿ ಹೆಗಡೆ ಪ್ರಾರ್ಥಿಸಿ, ಬಿ.ಸಿ. ಮಮತಾ ಸ್ವಾಗತಿಸಿದರು. ಸಂಕೇತ್‌ ಹುಲಿಮನೆ ವಂದಿಸಿ, ಎಸ್‌.ಜಿ.ಶ್ರೀಕಾಂತ್‌ ಶೆಡ್ತಿಕೆರೆ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ