ಆ್ಯಪ್ನಗರ

ಪಹಣಿ ಪಡೆಯಲು ನೆಟ್‌ವರ್ಕ್ ಪ್ರಾಬ್ಲಂ

ತಾಲೂಕಿನ ಆನವೇರಿ ನಾಡಕಚೇರಿಯಲ್ಲಿನೆಟ್‌ವರ್ಕ್ ಪ್ರಾಬ್ಲಂನಿಂದಾಗಿ ಪಹಣಿ ಮತ್ತಿತರೆ ಪಡೆಯಲು ಹರ ಸಾಹಸ ಪಡುವಂತಾಗಿದೆ. ವಿದ್ಯುತ್‌ ಸಮಸ್ಯೆ ಕೂಡ ಎದುರಾಗಿದ್ದು, ಕೂಡಲೇ ಸಮಸ್ಯೆ ಬಗೆಹರಿಸುವಂತೆ ತಾಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪೇಶ್‌ರಾವ್‌ ಕಿಡಿಕಾರಿದರು.

Vijaya Karnataka 27 Aug 2019, 5:00 am
ಸದಸ್ಯರ ಒತ್ತಾಯ :
Vijaya Karnataka Web SMR-26BDVT1


* ರಾಷ್ಟ್ರೀಯ ಹಬ್ಬಕ್ಕೆ ಆಹ್ವಾನ ಕಡ್ಡಾಯ

*ನಾಡಕಚೇರಿಯಲ್ಲಿವಿಎ, ಆರ್‌ಐ ಸಿಗಲಿ
---
ಭದ್ರಾವತಿ: ತಾಲೂಕಿನ ಆನವೇರಿ ನಾಡಕಚೇರಿಯಲ್ಲಿನೆಟ್‌ವರ್ಕ್ ಪ್ರಾಬ್ಲಂನಿಂದಾಗಿ ಪಹಣಿ ಮತ್ತಿತರೆ ಪಡೆಯಲು ಹರ ಸಾಹಸ ಪಡುವಂತಾಗಿದೆ. ವಿದ್ಯುತ್‌ ಸಮಸ್ಯೆ ಕೂಡ ಎದುರಾಗಿದ್ದು, ಕೂಡಲೇ ಸಮಸ್ಯೆ ಬಗೆಹರಿಸುವಂತೆ ತಾಪಂ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪೇಶ್‌ರಾವ್‌ ಕಿಡಿಕಾರಿದರು.

ಸೋಮವಾರ ತಾಪಂ ಸಭಾಂಗಣದಲ್ಲಿಅಧ್ಯಕ್ಷೆ ಸಿ.ಆಶಾ ಅಧ್ಯಕ್ಷತೆಯಲ್ಲಿನಡೆದ ಸಾಮಾನ್ಯ ಸಭೆಯಲ್ಲಿಮಾತನಾಡಿದ ಅವರು, ಸೈದರಕಲ್ಲಹಳ್ಳಿ ಗ್ರಾಮಸ್ಥರು ಆನವೇರಿ ನಾಡಕಚೇರಿಯಲ್ಲಿಪಹಣಿ ಪಡೆಯಲು ಮೈಲು ದೂರ ಆಗಮಿಸಬೇಕಾಗಿದೆ. ಆಗಮಿಸಿದರೂ ನೆಟ್‌ವರ್ಕ್ ಪ್ರಾಬ್ಲಂನಿಂದಾಗಿ ಹಿಂದಿರುಗುವಂತಾಗಿದೆ ಎಂದು ಆಪಾದಿಸಿದರು.

ಖಾಸಗಿ ಕಂಪ್ಯೂಟರ್‌ ಸೆಂಟರ್‌ಗಳಲ್ಲಿಹೆಚ್ಚುವರಿ ಹಣ ನೀಡಿದರೆ ಕೇವಲ ಕ್ಷಣಾರ್ಧದಲ್ಲಿಕಾರ‍್ಯರೂಪಕ್ಕೆ ಬರಲಿದೆ. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದಾಗ ಸಮಜಾಯಿಷಿ ನೀಡಿದ ತಹಸೀಲ್ದಾರ್‌ ಸೋಮಶೇಖರ್‌, ಆನವೇರಿ ನಾಡಕಚೇರಿಯಲ್ಲಿಪಹಣಿ ಪಡೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಸೈದರ ಕಲ್ಲಹಳ್ಳಿ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಧಿಕಾರಿ ವರ್ಗಾವಣೆಗೆ ಆಗ್ರಹಿಸಿದಾಗ, ಪಹಣಿ ವ್ಯವಸ್ಥೆಗೆ ಕ್ರಮ ಕೈಗೊಂಡು ಯಾವುದೇ ರೀತಿಯ ಅನಾನುಕೂಲವಾಗದಂತೆ ಸರಿಪಡಿಸುವುದಾಗಿ ತಹಸೀಲ್ದಾರ್‌ ಹೇಳಿದರು.

ತಾಲೂಕು ಆಡಳಿತದಿಂದ ನಡೆಸಲಾಗುವ ರಾಷ್ಟ್ರೀಯ ಹಬ್ಬಕ್ಕೆ ಯಾವೊಬ್ಬ ಸದಸ್ಯರಿಗೂ ಆಹ್ವಾನ ನೀಡುತ್ತಿಲ್ಲಎಂದು ತಾಪಂ ಅಧ್ಯಕ್ಷೆ ಆಶಾ ತಹಸೀಲ್ದಾರ್‌ ಅವರನ್ನು ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಸದಸ್ಯ ತಿಪ್ಪೇಶ್‌ರಾವ್‌, ಸದಸ್ಯರಲ್ಲಿಯಾರನ್ನೂ ಆಹ್ವಾನಿಸದೆ ಕಾರ್ಯಕ್ರಮ ಮಾಡಲಾಗುತ್ತದೆ. ತಹಸೀಲ್ದಾರ್‌ ಕ್ರಮಕ್ಕೆ ಮುಂದಾಗುತ್ತಿಲ್ಲಎಂದು ಆರೋಪಿಸಿದರು. ಯಾವುದೇ ಸಮಸ್ಯೆ ಬಾರದಂತೆ ಕ್ರಮಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್‌ ಹೇಳಿದರು.

ಹೊಳೆಹೊನ್ನೂರು ಹೋಬಳಿಯ ನಾಡಕಚೇರಿಯಲ್ಲಿಗ್ರಾಮ ಲೆಕ್ಕಾಧಿಧಿಕಾರಿ ಹಾಗು ರಾಜಸ್ವ ನಿರೀಕ್ಷಕರು ಲಭ್ಯವಿರುವುದಿಲ್ಲಎಂಬ ಆರೋಪ ಕೇಳಿಬಂತು. ಇದಕ್ಕೆ ಸದಸ್ಯ ದಿನೇಶ್‌ ದನಿಗೂಡಿಸಿದರು. ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ರಾಮಚಂದ್ರಪ್ಪ , ಇನ್ನೊಂದು ವಾರದೊಳಗೆ ಸರಿಪಡಿಸುವ ಭರವಸೆ ನೀಡಿ ಮೇಲಧಿಧಿಕಾರಿಗಳಿಗೆ ಈ ಸಂಬಂಧ ಪತ್ರ ಬರೆಯುವುದಾಗಿ ತಿಳಿಸಿದರು. ಈ ಹಿಂದಿನ ಅಧಿಧಿಕಾರಿಗಳು ಇದೇ ರೀತಿ ಹೇಳುತ್ತಿದ್ದರು ಎಂದು ಸದಸ್ಯರು ಕಿಡಿಕಾರಿದರು.

ಇತ್ತೀಚೆಗೆ ಅತಿವೃಷ್ಟಿಯಿಂದಾಗಿ ರೋಗ ರುಜಿನ ಬರಬಹುದೆಂಬ ಕಾರಣದಿಂದ ನೀರನ್ನು ಕಾಯಿಸಿ, ಆರಿಸಿ ಕುಡಿಯಲು ಅರಿವು ಮೂಡಿಸಲು ಇಲಾಖೆ ಮುಂದಾಗಿದೆ. ಜತೆಗೆ ಆಶಾ ಕಾರ್ಯಕರ್ತೆಯರಿಗೆ ಸ್ವಚ್ಛತೆಯ ಅರಿವು ನೀಡಲಾಗುತ್ತದೆ ಎಂದು ತಾಲೂಕು ವೈದ್ಯಾಧಿಧಿಕಾರಿ ಡಾ.ಗಾಯಿತ್ರಿ ಸಭೆಗೆ ತಿಳಿಸಿದರು. ಸದಸ್ಯರಾದ ಅಣ್ಣಾಮಲೈ, ತಿಪ್ಪೇಶ್‌ರಾವ್‌ ಅವರು, ಮಾಹಿತಿ ಸಾರ್ವಜನಿಕರಿಗೆ ಮುಟ್ಟುವಂತಾಗಬೇಕೆಂದರು.
ಉಪಾಧ್ಯಕ್ಷೆ ಸರೋಜಮ್ಮ ಹಾಜ್ಯನಾಯ್ಕ ಇದ್ದರು. ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

-------
ಸದಸ್ಯೆ ಲಕ್ಷಿತ್ರ್ಮೕದೇವಿ ಮಾತನಾಡಿ, ದೊಡ್ಡೇರಿ ಗ್ರಾಮದ ಸರ್ವೆ ನಂಬರ್‌ 53ರಲ್ಲಿವಿಐಎಸ್‌ಎಲ್‌ಗೆ ಸೇರಿದ ವಸತಿ ಗೃಹಗಳನ್ನು ತೆರವು ಮಾಡಿಸಿ ಬಡವರಿಗೆ ನಿವೇಶನ ಹಂಚಬೇಕೆಂದರು. ಇದಕ್ಕೆ ಉತ್ತರಿಸಿದ ಕಾರ‍್ಯನಿರ್ವಾಹಣಾಧಿಧಿಕಾರಿ ಕೆ.ಜೆ.ತಮ್ಮಣ್ಣಗೌಡ, ಸರಕಾರದ ಪ್ರದೇಶವಾಗಿರುವುದರಿಂದ ಗ್ರಾಮ ಪಂಚಾಯಿತಿಯಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳುವುದಾಗಿ ಸಮಜಾಯಿಷಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ