ಆ್ಯಪ್ನಗರ

ಜಿಲ್ಲಾಡಳಿತ ನಿರ್ಧಾರದಿಂದ ಪಾದಯಾತ್ರೆ ಇಲ್ಲ

ಜನತೆಯ ಒತ್ತಾಯದ ಮೇರೆಗೆ ಜಿಲ್ಲಾಡಳಿತವು ಹೋರಿ ಓಟ ಮತ್ತು ಎತ್ತಿನಗಾಡಿ ಸ್ಪರ್ಧೆಗೆ ಅವಕಾಶ ನೀಡಿರುವುದರಿಂದ ಶಿರಾಳಕೊಪ್ಪದಿಂದ ಶಿವಮೊಗ್ಗದ ವರೆಗೆ ನಡೆಸಲು ಉದ್ದೇಶಿಸಿದ್ದ ಪಾದಯಾತ್ರೆಯನ್ನು ಹೋರಿ ಹಬ್ಬ ಹೋರಾಟ ಸಮಿತಿಯು ಕೈ ಬಿಟ್ಟಿದೆ. ಈ ಸಂಬಂಧ ಪಟ್ಟಣದ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ವಿಷಯ ಪ್ರಕಟಿಸಲಾಯಿತು.

Vijaya Karnataka 12 Nov 2018, 5:00 am
ಶಿರಾಳಕೊಪ್ಪ: ಜನತೆಯ ಒತ್ತಾಯದ ಮೇರೆಗೆ ಜಿಲ್ಲಾಡಳಿತವು ಹೋರಿ ಓಟ ಮತ್ತು ಎತ್ತಿನಗಾಡಿ ಸ್ಪರ್ಧೆಗೆ ಅವಕಾಶ ನೀಡಿರುವುದರಿಂದ ಶಿರಾಳಕೊಪ್ಪದಿಂದ ಶಿವಮೊಗ್ಗದ ವರೆಗೆ ನಡೆಸಲು ಉದ್ದೇಶಿಸಿದ್ದ ಪಾದಯಾತ್ರೆಯನ್ನು ಹೋರಿ ಹಬ್ಬ ಹೋರಾಟ ಸಮಿತಿಯು ಕೈ ಬಿಟ್ಟಿದೆ. ಈ ಸಂಬಂಧ ಪಟ್ಟಣದ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸಭೆಯಲ್ಲಿ ವಿಷಯ ಪ್ರಕಟಿಸಲಾಯಿತು.
Vijaya Karnataka Web SMR-11SLKP01 photo 01


ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ದಾನೇರ್‌ ರುದ್ರಣ್ಣ ಮಾತನಾಡಿ, ಯಾವುದೇ ಅಪಾಯ , ತೊಂದರೆ ಆಗದ ಹಾಗೆ ಹಬ್ಬ ಮಾಡುತ್ತೇವೆ. ಇದಕ್ಕೆ ಅಧಿಕಾರಿಗಳು ತಿರುಗಿ ಬಿದ್ದರೆ ಎಲ್ಲರೂ ಸೇರಿ ಮುಂದಿನ ಹೋರಾಟ ನಡೆಸುವುದಾಗಿ ತಿಳಿಸಿದರು. ಶಿಕಾರಿಪುರ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಜಿ.ಪಿ.ಶಿವರಾಜ್‌ ಮಾತನಾಡಿ, ಹಬ್ಬ ನಿಷೇಧಿಸುವುದು ಶಾಸಕಾಂಗ. ಬುಲ್‌ ರೇಸ್‌ಗೆ ಅವಕಾಶವಿದ್ದರೂ ಅನಧಿಕೃತವಾಗಿ ತೊಂದರೆ ಮಾಡುತ್ತಿದ್ದಾರೆ. ಇದರ ಪರಿಣಾಮ ನಾವು ಸಂಘರ್ಷದ ಹಾದಿ ಹಿಡಿಯಬೇಕಾಗುತ್ತದೆ. ಇದನ್ನು ಸರಕಾರ ಗಮನಿಸಬೇಕು. ಇಂದು ಶಾಸಕಾಂಗ, ಕಾರ್ಯಾಂಗ , ನ್ಯಾಯಾಂಗಗಳು ತೀರ್ಪು ಕೊಡುವ ಮುನ್ನ ಜನರ ಭಾವನೆ ಅರ್ಥಮಾಡಿಕೊಳ್ಳಬೇಕು. ನಂತರ ತೀರ್ಪು ನೀಡಿದರೆ ಅಧಿಕಾರಿಗಳು ಪಾಲಿಸಬೇಕು. ಇದನ್ನು ಮರೆತರೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಂತಾಗುತ್ತದೆ ಎಂದರು.

ತಾಲೂಕು ಪಂಚಾಯಿತಿ ಸದಸ್ಯ ಶಂಭು ಮಾತನಾಡಿ, ಶಿಕಾರಿಪುರ, ಸೊರಬ, ಹಿರೇಕೇರೂರು, ಹಾವೇರಿ ಮತ್ತು ಇತರೆ ಯಾವುದೇ ಭಾಗದಲ್ಲಿ ಹೋರಿ ಹಬ್ಬ ನಡೆದರೂ ಹೋರಾಟ ಸಮಿತಿ ಬೆಂಬಲಿಸಲಿದೆ. ಹಬ್ಬ ಬಂದ್‌ ಆಗಲು ಬಿಡುವುದಿಲ್ಲ ಎಂದು ಹೇಳಿದರು. ಮಾಜಿ ಶಾಸಕ ಮಹಾಲಿಂಗಪ್ಪ ಇತರರು ಇದ್ದರು. ಸುತ್ತ ಮುತ್ತಲಿನ ತಾಲೂಕು, ಜಿಲ್ಲೆಗಳಿಂದ ಹೋರಿ ಹಬ್ಬದ ಅಭಿಮಾನಿಗಳು, ರೈತ ಮಹಿಳೆ ಮಂಜಮ್ಮ ಬೆಟಗೇರಿ ಹಾಜರಿದ್ದರು.

ತಡಸನಹಳ್ಳಿಯಲ್ಲಿ ಹೋರಿ ಹಬ್ಬ

ಇದೇ ತಿಂಗಳಲ್ಲಿ ತಡಸನಹಳ್ಳಿಯಲ್ಲಿ ಹೋರಿ ಹಬ್ಬ ನಡೆಸುತ್ತೇವೆ, ಸ್ಪರ್ಧೆಯಲ್ಲಿ ಬಹುಮಾನವೂ ಇರುತ್ತದೆ. ಅಲ್ಲಿ ಹೋರಿ ಹಿಡಿಯುತ್ತಾರೆ. ಇದಕ್ಕೆ ನಮ್ಮ ಹೋರಾಟ ಸಮಿತಿ ಬೆಂಬಲವಿದೆ. ಹಬ್ಬದ ಆಚರಣೆಯಲ್ಲಿ ಯಾರಾದರೂ ಒಬ್ಬಿಬ್ಬರನ್ನು ಬಂಧಿಸಿದರೆ ನಾವು ಜೈಲ್‌ ಭರೋ ಚಳುವಳಿ ಮಾಡಬೇಕಾಗುತ್ತದೆ.

-ಜಿ.ಪಿ.ಶಿವರಾಜ್‌, ಶಿಕಾರಿಪುರ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ .



ಅವಘಡ ನಡೆಯದಂತೆ ಮುನ್ನೆಚ್ಚರಿಕೆ

ಶಿರಾಳಕೊಪ್ಪದಿಂದ ಹಮ್ಮಿಕೊಂಡ ಪಾದಯಾತ್ರೆ ನಿಲ್ಲಿಸುತ್ತಿದ್ದೇವೆ. ಬರುವ ದಿನದಲ್ಲಿ ಶಿರಾಳಕೊಪ್ಪದಲ್ಲಿ ಹಬ್ಬ ಮಾಡುತ್ತೇವೆ. ಯಾವುದೇ ಅವಘಡ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು.

-ಪಿ.ಶಂಭುಲಿಂಗಪ್ಪ , ಹೋರಿ ಹಬ್ಬ ಹೋರಾಟ ಸಮಿತಿ ಅಧ್ಯಕ್ಷ .




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ