ಆ್ಯಪ್ನಗರ

ಅರ್ಹತಾ ಪತ್ರವಿಲ್ಲದ ವಾಹನ ವಶಕ್ಕೆ

ತಾಲೂಕಿನಲ್ಲಿ ಸೂಕ್ತ ಅರ್ಹತಾಪತ್ರಗಳಿಲ್ಲದ ಎರಡು ವಾಹನಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಬುಧವಾರ ವಶಕ್ಕೆ ಪಡೆದಿದ್ದಾರೆ.

Vijaya Karnataka 28 Jun 2019, 5:00 am
ಸಾಗರ : ತಾಲೂಕಿನಲ್ಲಿ ಸೂಕ್ತ ಅರ್ಹತಾಪತ್ರಗಳಿಲ್ಲದ ಎರಡು ವಾಹನಗಳನ್ನು ಸಾರಿಗೆ ಇಲಾಖೆ ಅಧಿಕಾರಿಗಳು ಬುಧವಾರ ವಶಕ್ಕೆ ಪಡೆದಿದ್ದಾರೆ.
Vijaya Karnataka Web non rc dl vehicle seized
ಅರ್ಹತಾ ಪತ್ರವಿಲ್ಲದ ವಾಹನ ವಶಕ್ಕೆ


ಕಚೇರಿಯಲ್ಲಿ ನೋಂದಾವಣೆ ಮಾಡಿಸದೇ, ತೆರಿಗೆ ಪಾವತಿಸದೇ, ಆರ್‌ಟಿಓ ಇಲಾಖೆಯಿಂದ ಅರ್ಹತಾ ಪತ್ರ ಪಡೆಯದೆ ಚಲಾಯಿಸುತ್ತಿದ್ದ ಜೆಸಿಬಿಯನ್ನು ಬುಧವಾರ ಸಹಾಯಕ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳು ವಶಕ್ಕೆ ಪಡೆದು ರೂ.2.10 ಲಕ್ಷ ರೂ. ದಂಡ ವಿಧಿಸಿದ್ದಾರೆ.

ಎರಡು ವರ್ಷದ ಹಿಂದೆ ಜೆಸಿಬಿ ಖರೀದಿಸಿದ್ದ , ಜೆಸಿಬಿಯೊಂದರ ಚಾಲನೆಗೆ ಸಾರಿಗೆ ಇಲಾಖೆಯಿಂದ ಯಾವುದೇ ಪರವಾನಗಿ, ನೋಂದಾವಣೆಯಾಗಲಿ ಮಾಡಿಸಿರಲಿಲ್ಲ. ಈ ಕುರಿತು ಖಚಿತ ಮಾಹಿತಿ ಮೇರೆಗೆ ಬುಧವಾರ ದಾಳಿ ಮಾಡಿದ ಸಾರಿಗೆ ಅಧಿಕಾರಿಗಳು ಜೆಸಿಬಿ ವಶಪಡಿಸಿಕೊಂಡು, ಮಾಲೀಕನಿಗೆ ದಂಡ ವಿಧಿಸಿದ್ದಾರೆ.

ತೆರಿಗೆ ಪಾವತಿಸದ ಹಾಗೂ ಸೂಕ್ತ ಅರ್ಹತಾ ಪತ್ರ ಹೊಂದಿರದ ವಾಹನವೊಂದರಲ್ಲಿ ಶಾಲಾಮಕ್ಕಳನ್ನು ಸಾಗಿಸುತ್ತಿದ್ದ ಹಿನ್ನೆಲೆಯಲ್ಲಿ ಬುಧವಾರ ಸಾರಿಗೆ ಅಧಿಕಾರಿಗಳು ವಶಪಡಿಸಿಕೊಂಡು, ಪೊಲೀಸ್‌ ಠಾಣೆಗೆ ನೀಡಿದ್ದಾರೆ.

ಸಾರಿಗೆ ನಿಯಮ ಪಾಲಿಸದ, ಹೆಚ್ಚು ವಿದ್ಯಾರ್ಥಿಗಳನ್ನು ಸಾಗಣೆ ಮಾಡುತ್ತಿದ್ದ 10ಕ್ಕೂ ಶಾಲಾ ವಾಹನಗಳ ಮೇಲೆ ಬುಧವಾರ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಮೋಟಾರ್‌ ವಾಹನ ನಿರೀಕ್ಷ ಕ ವಾಸುದೇವ್‌, ಸಿಬ್ಬಂದಿ ಉಮೇಶ್‌, ನಿಂಗಪ್ಪ, ಗೃಹರಕ್ಷ ಕ ಸಿಬ್ಬಂದಿ ಮಣಿಕಂಠ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ