ಆ್ಯಪ್ನಗರ

ಮಕ್ಕಳಿಗೆ ಕೊಡಿ ಪೌಷ್ಟಿಕ ಆಹಾರ

ಮಕ್ಕಳಿಗೆ ಕುರುಕಲು ತಿಂಡಿ ನೀಡದೇ ಮನೆಯಲ್ಲೇ ತಯಾರಿಸಿದ ಪೌಷ್ಟಿಕ ಆಹಾರ ನೀಡಬೇಕೆಂದು ಬರೂರು ಗ್ರಾ.ಪಂ.ಸದಸ್ಯ ಎಂ.ಸಿ.ಪರಶುರಾಮಪ್ಪ ಹೇಳಿದರು.

Vijaya Karnataka 19 Sep 2019, 5:00 am
ತ್ಯಾಗರ್ತಿ: ಮಕ್ಕಳಿಗೆ ಕುರುಕಲು ತಿಂಡಿ ನೀಡದೇ ಮನೆಯಲ್ಲೇ ತಯಾರಿಸಿದ ಪೌಷ್ಟಿಕ ಆಹಾರ ನೀಡಬೇಕೆಂದು ಬರೂರು ಗ್ರಾ.ಪಂ.ಸದಸ್ಯ ಎಂ.ಸಿ.ಪರಶುರಾಮಪ್ಪ ಹೇಳಿದರು.
Vijaya Karnataka Web 283917TGT1_46


ಸಾಗರ ತಾಲೂಕಿನ ಬರೂರು ಗ್ರಾಮಪಂಚಾಯಿತಿಯಲ್ಲಿಸೋಮವಾರ ಪೋಷಣಾ ಅಭಿಯಾನ ಕಾರ‍್ಯಕ್ರಮದಡಿ ಪೌಷ್ಟಿಕ ಆಹಾರ ಸಪ್ತಾಹ, ಮಹಿಳೆ ಮತ್ತು ಮಕ್ಕಳ ಮಾರಾಟ ನಿಷೇಧ ಕಾಯ್ದೆಯಡಿ ಕಾವಲು ಸಮಿತಿ, ಮಕ್ಕಳ ರಕ್ಷಣಾ ಸಮಿತಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಮನೆಯಲ್ಲೇ ತಯಾರಿಸಿದ ಮೊಳಕೆ ಕಾಳುಗಳು, ಸೊಪ್ಪು ಹಾಗೂ ತರಕಾರಿಗಳನ್ನು ನಿತ್ಯದ ಆಹಾರವಾಗಿ ಬಳಸಬೇಕೆಂದರು.

ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತ್ಯಾಗರ್ತಿ ವೃತ್ತದ ಮೇಲ್ವಿಚಾರಕಿ ಎನ್‌.ಪಿ.ವಿದ್ಯಾ ಮಾತನಾಡಿ, ಅಪೌಷ್ಟಿಕತೆಯಿಂದ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣ ಕೊನೆಗೊಳಿಸಲು ಪೋಷಣಾ ಅಭಿಯಾನ ನಡೆಸಲಾಗುತ್ತಿದೆ ಎಂದರು. ಗ್ರಾಮಪಂಚಾಯಿತಿ ಅಧ್ಯಕ್ಷೆ ಕುಸುಮಾಫಕೀರಪ್ಪ ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷ ಎಲ್‌.ಆರ್‌.ವೀರಪ್ಪ, ತಾಲೂಕು ಪಂಚಾಯಿತಿ ಸದಸ್ಯರಾದ ಸವಿತಾನಟರಾಜ್‌, ಹೇಮಾರಾಜಪ್ಪ, ಪಿಡಿಒ ಹನೀಫ್‌, ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ‍್ಯಕರ್ತೆಯರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ