ಆ್ಯಪ್ನಗರ

ಅಭಿನಂದನಾ ಸಮಾರಂಭ 30ರಂದು

ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಸಂಗೀತ ವಿದ್ವಾನ್‌ ಹೊಸಹಳ್ಳಿ ಜಿ.ಅನಂತ ಅವಧಾನಿಗಳ ಅಭಿನಂದನಾ ಸಮಿತಿ ವತಿಯಿಂದ ಜೂ.30ರಂದು ಸಂಜೆ 6ಕ್ಕೆ ಇಲ್ಲಿನ ರವೀಂದ್ರ ನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ ಸಭಾಂಗಣದಲ್ಲಿ ಜಿ.ಅನಂತ ಅವದಾನಿಗಳಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಹೊಸಹಳ್ಳಿ ಕೆ.ವೆಂಕಟರಾಮ… ತಿಳಿಸಿದರು.

Vijaya Karnataka 28 Jun 2019, 5:00 am
ಶಿವಮೊಗ್ಗ : ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಸಂಗೀತ ವಿದ್ವಾನ್‌ ಹೊಸಹಳ್ಳಿ ಜಿ.ಅನಂತ ಅವಧಾನಿಗಳ ಅಭಿನಂದನಾ ಸಮಿತಿ ವತಿಯಿಂದ ಜೂ.30ರಂದು ಸಂಜೆ 6ಕ್ಕೆ ಇಲ್ಲಿನ ರವೀಂದ್ರ ನಗರದ ಶ್ರೀ ಪ್ರಸನ್ನ ಗಣಪತಿ ದೇವಸ್ಥಾನ ಸಭಾಂಗಣದಲ್ಲಿ ಜಿ.ಅನಂತ ಅವದಾನಿಗಳಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಹೊಸಹಳ್ಳಿ ಹೊಸಹಳ್ಳಿ ಕೆ.ವೆಂಕಟರಾಮತಿಳಿಸಿದರು.
Vijaya Karnataka Web on 30th honour programme
ಅಭಿನಂದನಾ ಸಮಾರಂಭ 30ರಂದು


ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅವಧಾನಿಗಳು ನಾಲ್ಕು ದಶಕಗಳಿಂದ ರಾಜ್ಯದೆಲ್ಲೆಡೆ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಶಿವಮೊಗ್ಗದಲ್ಲಿ 'ಅನಂತ ಸಂಗೀತ ಸಭಾ' ಹೆಸರಿನಲ್ಲಿ ಶಾಲೆ ಆರಂಭಿಸಿ ಶಾಸ್ತ್ರೀಯ ಸಂಗೀತದ ಶಿP್ಷÜಣವನ್ನು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ಇವರ ಸಾಧನೆ ಮೆಚ್ಚಿ ಸಂಘ ಸಂಸ್ಥೆಗಳು ಗೌರವಿಸಿವೆ ಎಂದು ಹೇಳಿದರು.

ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಶಿ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಂಗಳೂರಿನ ಗಾನ ಕಲಾಭೂಷಣ ಆರ್‌.ಕೆ.ಪದ್ಮನಾಭ ಅಭಿನಂದನಾ ನುಡಿಗಳನ್ನಾಡುವರು. ಸಮಿತಿ ಅಧ್ಯP್ಷÜ ಎಂ.ಭಾರಧ್ವಾಜ್‌ ಅಧ್ಯP್ಷÜತೆ ವಹಿಸುವರು.

ಸಮಾರಂಭದಲ್ಲಿ ಅನಂತ ಅವದಾನಿಗಳ ಬಗ್ಗೆ ರಾಜ್ಯದ 30ಕ್ಕೂ ಹೆಚ್ಚು ಕಲಾವಿದರು ಮಾತನಾಡಿದ್ದು, ಇದರ ವೀಡಿಯೋ ಪ್ರದರ್ಶನವಿದೆ. ಈ ಕಾರ್ಯಕ್ರಮಕ್ಕೆ ವಿವಿಧ ಸಂಘ ಸಂಸ್ಥೆಗಳು ಕೈಜೋಡಿಸಿವೆ ಎಂದು ಮಾಹಿತಿ ನೀಡಿದರು.

ಶೃಂಗೇರಿ ಎಚ್‌.ಎಸ್‌. ನಾಗರಾಜ್‌, ಬಿ.ಆರ್‌.ಮಧುಸೂಧನ್‌, ಡಾ.ಎ.ಜಿ.ಗೋಪಾಲಕೃಷ್ಣ ಕೊಳ್ತಾಯ, ಕುಮಾರಶಾಸ್ತ್ರಿ, ಎ.ಎಚ್‌.ಅಶ್ವಥ್‌, ಸುಭದ್ರ ಉಪಸ್ಥಿತರಿದ್ದರು.

===

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ