ಆ್ಯಪ್ನಗರ

ವಿಐಎಸ್‌ಎಲ್‌ ಖಾಸಗಿ ವ್ಯಕ್ತಿಗಳಿಗೆ ಹಸ್ತಾಂತರಿಸಲು ವಿರೋಧ

ವಿಐಎಸ್‌ಎಲ್‌ ಕಾರ್ಖಾನೆ ಖಾಸಗೀಕರಣ ಹಾಗು 1 ಸಾವಿರ ಎಕರೆ ನಗರ ಪ್ರದೇಶವನ್ನು ಕೇಂದ್ರ ಸರಕಾರ ಖಾಸಗಿ ವ್ಯಕ್ತಿಗಳಿಗೆ ನೀಡಲು ಮುಂದಾಗಿರುವುದನ್ನು ಖಂಡಿಸಿ ವಿಐಎಸ್‌ಎಲ್‌ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರ ಸದಸ್ಯರು ಕಾರ್ಖಾನೆ ಮುಖ್ಯದ್ವಾರದ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.

Vijaya Karnataka 24 Jul 2019, 5:00 am
ಭದ್ರಾವತಿ: ವಿಐಎಸ್‌ಎಲ್‌ ಕಾರ್ಖಾನೆ ಖಾಸಗೀಕರಣ ಹಾಗು 1 ಸಾವಿರ ಎಕರೆ ನಗರ ಪ್ರದೇಶವನ್ನು ಕೇಂದ್ರ ಸರಕಾರ ಖಾಸಗಿ ವ್ಯಕ್ತಿಗಳಿಗೆ ನೀಡಲು ಮುಂದಾಗಿರುವುದನ್ನು ಖಂಡಿಸಿ ವಿಐಎಸ್‌ಎಲ್‌ ನಿವೃತ್ತ ಕಾರ್ಮಿಕರ ಕಲ್ಯಾಣ ಕೇಂದ್ರ ಸದಸ್ಯರು ಕಾರ್ಖಾನೆ ಮುಖ್ಯದ್ವಾರದ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.
Vijaya Karnataka Web SMR-23BDVT1


ಕೇಂದ್ರದ ಅಧ್ಯಕ್ಷ ಜೆ.ಎಸ್‌.ನಾಗಭೂಷಣ್‌ ಅಧ್ಯಕ್ಷ ತೆಯಲ್ಲಿ ಸಭೆ ಸೇರಿ, ನಂತರ ಕಾರ್ಖಾನೆ ಮುಂಭಾಗ ಪ್ರತಿಭಟಿಸಿದ ನಿವೃತ್ತ ಕಾರ್ಮಿಕರು ಕಾರ್ಖಾನೆ ದುಸ್ಥಿತಿಗೆ ಸೈಲ್‌ ಅಧಿಕಾರಿಗಳೆ ಕಾರಣಕರ್ತರಾಗಿದ್ದಾರೆ ಎಂದು ಟೀಕಿಸಿದರು.

ಕಾರ್ಖಾನೆಗೆ ಅಗತ್ಯ ಬಂಡವಾಳ ತೊಡಗಿಸುವುದನ್ನು ಬಿಟ್ಟು ಖಾಸಗೀಕರಣಗೊಳಿಸಲು ಜಾಗತಿಕ ಟೆಂಡರ್‌ ಕರೆದಿರುವುದು ಖಂಡನೀಯ. ಕೂಡಲೆ ಖಾಸಗೀಕರಣ ಕೈಬಿಟ್ಟು ಸೂಕ್ತ ಬಂಡವಾಳ ತೊಡಗಿಸಿ ನೂತನ ತಂತ್ರಜ್ಞಾನದಿಂದ ಕಾರ್ಖಾನೆಯನ್ನು ಅಭಿವೃದ್ಧಿ ಪಡಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.

ನಗರ ಪ್ರದೇಶ ಹಸ್ತಾಂತರಕ್ಕೆ ವಿರೋಧ :
ಕಾರ್ಖಾನೆಯ ಜತೆಗೆ ಕೋಟ್ಯಂತರ ಬೆಲೆ ಬಾಳುವ ನಗರ ಪ್ರದೇಶ, ಪ್ರತಿಷ್ಠಿತ ಅತಿಥಿಗೃಹ, ಸ್ಟೇಡಿಯಂ, ಶಾಲಾ ಕಾಲೇಜುಗಳು, ದೇವಸ್ಥಾನ, ಚರ್ಚ್‌ ಮಸೀದಿ ಹಾಗು ವಸತಿಗೃಹಗಳ ಜತೆಗೆ ಖಾಲಿ ಜಾಗವನ್ನು ಖಾಸಗೀ ವ್ಯಕ್ತಿಗಳಿಗೆ ವಹಿಸಲು ಸಿದ್ಧತೆ ನಡೆದಿದೆ. ಖಾಸಗಿ ವ್ಯಕ್ತಿಗಳಿಗೆ ವಹಿಸಲು ಉದ್ದೇಶಿಸಿರುವ ನಗರ ಪ್ರದೇಶವನ್ನು ದೀರ್ಘಾವಧಿ ಆಧಾರದಡಿ ಹಾಗು ಪರವಾನಗಿ ಆಧಾರದಡಿ ವಾಸವಿರುವ ಸುಮಾರು 2500 ನಿವೃತ್ತ ಕಾರ್ಮಿಕರ ಮನೆಗಳನ್ನು ರಕ್ಷಿಸಿಕೊಳ್ಳಬೇಕಿದೆ ಎಂದರು.

ಪ್ರತಿಭಟನೆಯಲ್ಲಿ ನಿವೃತ್ತ ಕಾರ್ಮಿಕ ಸಂಘದ ಪದಾಧಿಕಾರಿಗಳಾದ ಬಿ.ಮಂಜುನಾಥ್‌, ಎಸ್‌.ಎಚ್‌.ಹನುಮಂತರಾವ್‌, ಜಿ.ಕೆ.ರವೀಂದ್ರರೆಡ್ಡಿ, ಕೆಂಪಯ್ಯ, ಎಲ್‌.ಬಸವರಾಜ್‌, ಮುಖಂಡರಾದ ಕಬಡ್ಡಿ ಕೃಷ್ಣೇಗೌಡ, ಬಿ.ಜಿ.ರಾಮಲಿಂಗಯ್ಯ, ಕೆ.ಎನ್‌.ಭೈರಪ್ಪಗೌಡ, ಹಾ.ರಾಮಪ್ಪ, ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್‌ ಮತ್ತಿತರರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ