ಆ್ಯಪ್ನಗರ

ಪದವೀಧರ ಶಿಕ್ಷಕರ ಹಿಂಬಡ್ತಿಗೆ ವಿರೋಧ

ಅನುಭವಿ ಹಾಗೂ ಅರ್ಹ ಪದವೀಧರ ಶಿಕ್ಷ ಕರ ಹಿಂಬಡ್ತಿ ವಿರೋಧಿಸಿ ಶನಿವಾರ ಸರಕಾರಿ ಪ್ರಾಥಮಿಕ ಶಾಲಾ ಸೇವಾನಿರತ ಪದವೀಧರ ಶಿಕ್ಷ ಕರ ಸಂಘದ ಸಾಗರ ಘಟಕದಿಂದ ಕ್ಷೇತ್ರಶಿಕ್ಷ ಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

Vijaya Karnataka 2 Jun 2019, 5:00 am
ಸಾಗರ: ಅನುಭವಿ ಹಾಗೂ ಅರ್ಹ ಪದವೀಧರ ಶಿಕ್ಷ ಕರ ಹಿಂಬಡ್ತಿ ವಿರೋಧಿಸಿ ಶನಿವಾರ ಸರಕಾರಿ ಪ್ರಾಥಮಿಕ ಶಾಲಾ ಸೇವಾನಿರತ ಪದವೀಧರ ಶಿಕ್ಷ ಕರ ಸಂಘದ ಸಾಗರ ಘಟಕದಿಂದ ಕ್ಷೇತ್ರಶಿಕ್ಷ ಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
Vijaya Karnataka Web SMR-01SGR1


1ರಿಂದ 7ನೇ ತರಗತಿವರೆಗೆ ಪಾಠ ಮಾಡಲು ನೇಮಕವಾದ ಶಿಕ್ಷ ಕರು 2005ರಿಂದ 8ನೇ ತರಗತಿ ಪ್ರಾರಂಭವಾದ ಸಮಯದಿಂದ 6ರಿಂದ 8ನೇ ತರಗತಿಯವರೆಗೂ ಬೋಧಿಸುತ್ತಿದ್ದಾರೆ. ಪದವಿ ಪಡೆದ ಅನುಭವಿ ಶಿಕ್ಷ ಕರು 6ರಿಂದ 8ನೇ ತರಗತಿವರೆಗೆ 14 ವರ್ಷಗಳಿಂದ ಬೋಧಿಸುತ್ತಿದ್ದರೂ ಅವರನ್ನು ಮುಂಬಡ್ತಿಗೆ ಪರಿಗಣಿಸಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.

ಸೇವೆಯಲ್ಲಿರುವ ಅರ್ಹ ಪದವೀಧರ ಶಿಕ್ಷ ಕರನ್ನು ಪ್ರಾಥಮಿಕ ಪದವೀಧರ ಶಿಕ್ಷ ಕರೆಂದು ಪರಿಗಣಿಸಬೇಕು. ಇಲ್ಲವಾದಲ್ಲಿ ಸದರಿ ಶಿಕ್ಷ ಕರು ಹೊಸ ವೃಂದ ನಿಯಮಗಳಂತೆ 1ರಿಂದ 5ನೇ ತರಗತಿಯವರೆಗೆ ಮಾತ್ರ 1 ಜುಲೈ 2019ರಿಂದ ಪಾಠ ಮಾಡುತ್ತಾರೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷ ಣಾಧಿಕಾರಿ ಕೆ.ಆರ್‌.ಬಿಂಬ ಮಾತನಾಡಿ, ಉನ್ನತ ಮಟ್ಟದ ಅಧಿಕಾರಿಗಳ ಜತೆ ನಡೆಯುವ ಸಭೆಗಳಲ್ಲಿ ಸದರಿ ವಿಷಯ ಚರ್ಚೆಗೆ ತರಲಾಗುವುದು ಎಂದರು. ಸತ್ಯನಾರಾಯಣ ಸಿರಿವಂತೆ, ಕೆ.ಜಗನ್ನಾಥ, ಎಂ.ಬಸಪ್ಪ, ಹಾಲಸ್ವಾಮಿ, ಚಂದ್ರಪ್ಪ ಕೆಳದಿ, ಎಂ.ವೈ.ಮೂರ್ತಿ, ಎಲ್‌.ಟಿ.ಗವಿಯಪ್ಪ, ಮನೋಹರಪ್ಪ, ಭುವನೇಶ್ವರಿ, ಶಿವಯೋಗಿ, ಭೂಕೇಶ್ವರಪ್ಪ, ಡಿ.ಗಣಪತಿಯಪ್ಪ, ಕೆ.ಬಿ.ಪಾರ್ವತಿ, ವಿ.ಟಿ.ಸ್ವಾಮಿ, ಮಂಜುನಾಥ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ