ಆ್ಯಪ್ನಗರ

24ರಿಂದ ಹೊಂಬುಜದಲ್ಲಿ ಪದ್ಮಾವತಿ ದೇವಿ ಜಾತ್ರಾ ಮಹೋತ್ಸವ

ಜೈನರ ದಕ್ಷಿಣ ಕಾಶಿ ಖ್ಯಾತಿಯ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಮಾ.24ರಿಂದ 29ರವರೆಗೆ ಭಗವಾನ್‌ ಶ್ರೀಪಾಶ್ರ್ವನಾಥ ತೀರ್ಥಂಕರರ ಮತ್ತು ಮಹಾಮಾತೆ ಪದ್ಮಾವತಿ ಅಮ್ಮನವರ ವಾರ್ಷಿಕ ರಥೋತ್ಸವ ಮತ್ತು ಜಾತ್ರಾ ಧಾರ್ಮಿಕ ಸಮಾರಂಭ ನಡೆಯಲಿದೆ.

Vijaya Karnataka 23 Mar 2019, 5:00 am
ರಿಪ್ಪನ್‌ಪೇಟೆ: ಜೈನರ ದಕ್ಷಿಣ ಕಾಶಿ ಖ್ಯಾತಿಯ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಮಾ.24ರಿಂದ 29ರವರೆಗೆ ಭಗವಾನ್‌ ಶ್ರೀಪಾಶ್ರ್ವನಾಥ ತೀರ್ಥಂಕರರ ಮತ್ತು ಮಹಾಮಾತೆ ಪದ್ಮಾವತಿ ಅಮ್ಮನವರ ವಾರ್ಷಿಕ ರಥೋತ್ಸವ ಮತ್ತು ಜಾತ್ರಾ ಧಾರ್ಮಿಕ ಸಮಾರಂಭ ನಡೆಯಲಿದೆ.
Vijaya Karnataka Web padmavati devi jatra from 24th
24ರಿಂದ ಹೊಂಬುಜದಲ್ಲಿ ಪದ್ಮಾವತಿ ದೇವಿ ಜಾತ್ರಾ ಮಹೋತ್ಸವ


24ರಂದು ಇಂದ್ರ ಪ್ರತಿಷ್ಠಾ, ವಿಮಾನ ಶುದ್ಧಿ ಯಕ್ಷ ಪ್ರತಿಷ್ಠಾ ಧ್ವಜಾರೋಹಣ, ನಾಂದಿಮಂಗಲ ವಾಸ್ತು ಶಾಂತಿ, ಮೃತ್ತಿಕಾ ಸಂಗ್ರಹ, ನಾಗವಾಹನೋತ್ಸವ.

25ರಂದು ನಿತ್ಯವಿಧಿ ಸಹಿತ ಶ್ರೀ ಸ್ವಾಮಿ ಮತ್ತು ಅಮ್ಮನವರ ಸನ್ನಿಧಿಯಲ್ಲಿ ಆಭಿಷೇಕ, ಕಲಿಕುಂಡಯಂತ್ರಾರಾಧನೆ, ಸಿಂಹವಾಹನೋತ್ಸವ, ಮಾ.26ರಂದು ನಿತ್ಯವಿಧಿ ಶಾಂತಿ ಚಕ್ರಾರಾಧನೆ ಬಲಿ, ಸಂಜೆ 6ಕ್ಕೆ ಧಾರ್ಮಿಕ ಸಭೆ, ಬೆಳ್ಳಿ ರಥೋತ್ಸವ, ಪುಷ್ಪ ರಥೋತ್ಸವ, 27ರಂದು ನಿತ್ಯವಿಧಿ ಸಹಿತ ಮಹಾನೈವೇದ್ಯ ಪೂಜೆ ಮಧ್ಯಾಹ್ನ 1.35ಕ್ಕೆ ಮೂಲನಕ್ಷ ತ್ರದಲ್ಲಿ ಜಗನ್ಮಾತೆ ಪದ್ಮಾವತಿ ಅಮ್ಮನವರ ಮಹಾರಥೋತ್ಸವ, ಮಾ.28ರಂದು ಭಗವಾನ್‌ ಶ್ರೀಪಾಶ್ರ್ವನಾಥ ಸ್ವಾಮಿಗೆ 108 ಕಲಶಗಳ ಮಹಾಭಿಷೇಕ ಮತ್ತು ಸಂಘ ಪೂಜೆ ನೆರವೇರಲಿದೆ. 29ರಂದು ಕುಂಕುಮಹೋತ್ಸವ, ಧ್ವಜಾರೋಹಣ ಜರುಗಲಿದ್ದು, ಭಕ್ತಾದಿಗಳು ಪಾಲ್ಗೊಳ್ಳುವಂತೆ ದೇವಾಲಯ ಸಮಿತಿ ಕೋರಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ