ಆ್ಯಪ್ನಗರ

‘ಮಕ್ಕಳ ಸೈಕಲ್‌ ಪೋಷಕರು ಬಳಸಬೇಡಿ’

ಪ್ರತಿಯೊಬ್ಬ ಮಕ್ಕಳಿಗೂ ಶಿಕ್ಷ ಣ ಸಿಗಬೇಕೆಂಬ ಉದ್ದೇಶಕ್ಕೆ ಸರಕಾರ ಹಲವು ಸೌಲಭ್ಯ ನೀಡುತ್ತಿದೆ. ಅದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜ ಕಾಟಣ್ಣನವರ್‌ ಹೇಳಿದರು.

Vijaya Karnataka 2 Mar 2019, 5:00 am
ಶಿಕಾರಿಪುರ: ಪ್ರತಿಯೊಬ್ಬ ಮಕ್ಕಳಿಗೂ ಶಿಕ್ಷ ಣ ಸಿಗಬೇಕೆಂಬ ಉದ್ದೇಶಕ್ಕೆ ಸರಕಾರ ಹಲವು ಸೌಲಭ್ಯ ನೀಡುತ್ತಿದೆ. ಅದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜ ಕಾಟಣ್ಣನವರ್‌ ಹೇಳಿದರು.
Vijaya Karnataka Web SMR-28SKP2


ತಾಲೂಕಿನ ಗಾಮ ಗ್ರಾಮದಲ್ಲಿ ಸೋಮವಾರ ಸೈಕಲ್‌ ವಿತರಣೆ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿ, ಸರಕಾರಿ ಶಾಲೆಯಲ್ಲಿ ಪ್ರತಿಭಾವಂತ ಶಿಕ್ಷ ಕರು ಇರುತ್ತಾರೆ. ಮಕ್ಕಳಿಗೆ ಶಿಕ್ಷ ಣ ಸರಳವಾಗಿ ಹೇಳುವ ವಿಧಾನ ಇಲ್ಲಿರುತ್ತದೆ. ಉಚಿತ ಬಟ್ಟೆ, ಪುಸ್ತಕ, ಶೂ, ಬಿಸಿಯೂಟ ನೀಡಲಾಗುತ್ತದೆ. ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಸೈಕಲ್‌ ಹೀಗೆ ಹಲವು ಸೌಲಭ್ಯ ನೀಡುತ್ತಿದ್ದು ಅವುಗಳ ಸದ್ಬಳಕೆ ಆಗಬೇಕು. ಇಂದಿಗೂ ಶಾಲೆಯಿಂದ ದೂರ ಇರುವ ಮಕ್ಕಳಿದ್ದು ಅವರನ್ನು ಶಾಲೆಗೆ ಕರೆತರುವ ಪ್ರಯತ್ನ ಇಡೀ ಸಮುದಾಯ ಮಾಡಬೇಕು ಎಂದರು. ಶಾಲಾಭಿವೃದ್ಧಿ ಸಮಿತಿ ಸದಸ್ಯ ಎಚ್‌.ಎಂ.ಆನಂದಸ್ವಾಮಿ ಮಾತನಾಡಿ, ಶಾಲೆ ಆರಂಭದಲ್ಲೆ ಸರಕಾರ ಸೈಕಲ್‌ ನೀಡಿದರೆ ಉತ್ತಮ. ಮಕ್ಕಳು ತಮ್ಮ ಸೈಕಲ್‌ ಪೋಷಕರ ಬಳಕೆಗೆ ನೀಡದೆ ತಾವೇ ಬಳಸಬೇಕೆಂದರು. ಗ್ರಾ.ಪಂ.ಅಧ್ಯಕ್ಷೆ ಫಾತಿಮಾ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಸಿ.ಮಂಜುನಾಥ, ಕೆ.ರವಿ, ಮುಖ್ಯ ಶಿಕ್ಷ ಕ ನಾಗಪ್ಪ, ಎಲ್ಲ ಶಿಕ್ಷ ಕರು, ವಿದ್ಯಾರ್ಥಿಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ