ಆ್ಯಪ್ನಗರ

ಬಹು ಭಾಷೆ ಕಲಿಕೆಯಿಂದ ವ್ಯಕ್ತಿತ್ವ ವಿಕಸನ

ಏಕಭಾಷೆಗಿಂತಲೂ ಬಹುಭಾಷೆಗಳ ಕಲಿಕೆಯಿಂದ ನಮ್ಮ ವ್ಯಕ್ತಿತ್ವ ವಿಕಸನವಾಗುತ್ತದೆ. ಶಿಕ್ಷ ಕರು ಬಹುಭಾಷಾ ಕಲಿಕೆಯ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ತಾಳೆಗರಿ ಅಧ್ಯಯನ ತಜ್ಞ ಗಣಪತಿ ಹುಲೀಮನೆ ಹೇಳಿದರು.

Vijaya Karnataka 24 Jul 2019, 5:00 am
ಸಾಗರ : ಏಕಭಾಷೆಗಿಂತಲೂ ಬಹುಭಾಷೆಗಳ ಕಲಿಕೆಯಿಂದ ನಮ್ಮ ವ್ಯಕ್ತಿತ್ವ ವಿಕಸನವಾಗುತ್ತದೆ. ಶಿಕ್ಷ ಕರು ಬಹುಭಾಷಾ ಕಲಿಕೆಯ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ತಾಳೆಗರಿ ಅಧ್ಯಯನ ತಜ್ಞ ಗಣಪತಿ ಹುಲೀಮನೆ ಹೇಳಿದರು.
Vijaya Karnataka Web SMR-23sgr7


ತಾಲೂಕಿನ ಕೆಳದಿಯಲ್ಲಿ ಜಿಲ್ಲಾ ಶಿಕ್ಷ ಣ ವåತ್ತು ತರಬೇತಿ ಸಂಸ್ಥೆ, ಕುವೆಂಪು ವಿಶ್ವವಿದ್ಯಾಲಯ, ಕೆಳದಿ ವಸ್ತು ಸಂಗ್ರಹಾಲಯ, ಸಂಸ್ಕಾರ ಭಾರತಿ ಹಾಗೂ ಕೆಳದಿ ರಿಸರ್ಚ್‌ ಫೌಂಡೇಶನ್‌ ಏರ್ಪಡಿಸಿರುವ 5 ದಿನಗಳ ಮೋಡಿ ಮತ್ತು ತಿಗಳಾರಿ ಲಿಪಿ ಓದುವ ಕಾರ್ಯಾಗಾರದಲ್ಲಿ ಮಂಗಳವಾರ ಓದುವ ಬಗೆಯನ್ನು ತರಬೇತಿ ನೀಡಿ ಅವರು ಮಾತನಾಡಿದರು.

ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಪಾಠ ಮಾಡುವ ಶಿಕ್ಷ ಕರಲ್ಲಿ ಪೂರಕ ಮಾಹಿತಿಗಳಿದ್ದಾಗ ಪಾಠ ಪ್ರವಚನ ಪರಿಣಾಮಕಾರಿಯಾಗುತ್ತದೆ. ತಿಗಳಾರಿ ಮತ್ತು ಮೋಡಿ ಲಿಪಿ ಅಧ್ಯಯನದಿಂದ ನಮ್ಮ ಆಲೋಚನಾ ಕ್ರಮ ವಿಭಿನ್ನವಾಗುತ್ತದೆ. ಸ್ಥಳೀಯ ಇತಿಹಾಸದ ಬಗ್ಗೆ ನಮ್ಮ ದೃಷ್ಟಿಕೋನ ಬದಲಾಗುತ್ತದೆ. ಮೋಡಿ ಲಿಪಿ ಓದುವ ತರಬೇತಿ ಶಿಕ್ಷ ಕರಿಗೆ ಅಗತ್ಯ ಎಂದು ಹೇಳಿದರು.

ಮೋಡಿ, ತಿಗಳಾರಿ ಲಿಪಿಗಳ ಓದುವಿಕೆ ಬಹಳ ಸುಲಭ. ಒಂದಿಷ್ಟು ಪೂರಕ ತರಬೇತಿಯಿಂದ ತಾಳೆಗರಿ ಓದುವ,ಅಧ್ಯಯನ ಮಾಡುವ ಕಾರ‍್ಯ ಸುಲಭ. ಶಿಕ್ಷ ಕರು ಈ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು. ಸ್ಥಳೀಯವಾಗಿ ಇಕ್ಕೇರಿ, ಕೆಳದಿ ಇತಿಹಾಸಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಿದ್ಯಾರ್ಥಿ ಸಮೂಹಕ್ಕೆ ಪರಿಚಯಿಸಬೇಕು. ಆ ಬಗ್ಗೆ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸಬೇಕು ಎಂದರು.

ಹಿರಿಯ ಇತಿಹಾಸ ಸಂಶೋಧಕ ಡಾ. ಕೆಳದಿ ಗುಂಡಾಜೋಯಿಸ್‌ , ಶಿಬಿರ ನಿರ್ದೇಶಕ ಡಾ. ಜಿ.ವಿ.ರವಿಪ್ರಸಾದ್‌ ಸ್ವಾಗತಿಸಿದರು. ಶಿಬಿರದ ಸಂಚಾಲಕ ಡಾ. ಕೆಳದಿ ವೆಂಕಟೇಶ್‌ ಜೋಯ್ಸ್‌ ನಿರೂಪಿಸಿದರು. ಕೆ.ವಿ.ಜ್ಯೋತಿ ಕುಮಾರಿ , ಮೀನಾಕುಮಾರಿ, ವಿ.ಟಿ.ಸ್ವಾಮಿ, ವಿವಿಧ ಪ್ರೌಢಶಾಲೆಗಳ, ಪ್ರಾಥಮಿಕ ಶಾಲೆಗಳ ಶಿಕ್ಷ ಕರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ