ಆ್ಯಪ್ನಗರ

ಜನರ ಆರೋಗ್ಯ ಸುರಕ್ಷತೆಗೆ ಯೋಜನೆ

ಕೇಂದ್ರ ಸರಕಾರ ಆರೋಗ್ಯ ಸುರಕ್ಷತೆಗಾಗಿ ಅನೇಕ ಜನಪರ ಕಾರ‍್ಯಕ್ರಮ ಜಾರಿಗೆ ತಂದಿದೆ. ಆಯುಷ್ಮಾನ್‌ ಭಾರತ್‌- ಆರೋಗ್ಯ ಕರ್ನಾಟಕ ಯೋಜನೆ ಬಡವರ ಆರೋಗ್ಯ ಸುರಕ್ಷತೆಗೆ ಸಂಜೀವಿನಿ ಆಗಿದೆ ಎಂದು ಶಿವಮೊಗ್ಗ ಜಿ.ಪಂ. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಸರವಳ್ಳಿ ಶ್ರೀನಿವಾಸ್‌ ಹೇಳಿದರು.

Vijaya Karnataka 17 Sep 2019, 5:00 am
ತೀರ್ಥಹಳ್ಳಿ: ಕೇಂದ್ರ ಸರಕಾರ ಆರೋಗ್ಯ ಸುರಕ್ಷತೆಗಾಗಿ ಅನೇಕ ಜನಪರ ಕಾರ‍್ಯಕ್ರಮ ಜಾರಿಗೆ ತಂದಿದೆ. ಆಯುಷ್ಮಾನ್‌ ಭಾರತ್‌- ಆರೋಗ್ಯ ಕರ್ನಾಟಕ ಯೋಜನೆ ಬಡವರ ಆರೋಗ್ಯ ಸುರಕ್ಷತೆಗೆ ಸಂಜೀವಿನಿ ಆಗಿದೆ ಎಂದು ಶಿವಮೊಗ್ಗ ಜಿ.ಪಂ. ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಕಾಸರವಳ್ಳಿ ಶ್ರೀನಿವಾಸ್‌ ಹೇಳಿದರು.
Vijaya Karnataka Web planning for peoples health safety
ಜನರ ಆರೋಗ್ಯ ಸುರಕ್ಷತೆಗೆ ಯೋಜನೆ


ಸೋಮವಾರ ತಾಲೂಕು ಕಚೇರಿ ಮುಂಭಾಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಆಯುಷ್ಮಾನ್‌ ಭಾರತ್‌ - ಆರೋಗ್ಯ ಕರ್ನಾಟಕ ಯೋಜನೆಯ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದುಬಾರಿ ದರದ ಚಿಕಿತ್ಸೆ ಪಡೆದು ಬಡವರು ಜೀವ ಉಳಿಸಿಕೊಳ್ಳುವುದು ಕಷ್ಟ ಎಂಬ ಸಂಗತಿ ತಿಳಿದು ಸರಕಾರ ಮಹತ್ವದ ಯೋಜನೆ ಜಾರಿಗೆ ತಂದಿದೆ. ಪ್ರತಿ ವರ್ಷ ಬಿಪಿಎಲ್‌ ಕುಟುಂಬಕ್ಕೆ 5ಲಕ್ಷ, ಎಪಿಎಲ್‌ ಕುಟುಂಬಕ್ಕೆ 1,50 ಲಕ್ಷ ರೂ ಗಳನ್ನು ಚಿಕಿತ್ಸೆಗೆ ಸರಕಾರ ಭರಿಸುತ್ತದೆ. ಚಿಕಿತ್ಸೆ, ಶಸ್ತ್ರ ಚಿಕಿತ್ಸೆಗೆ ಸಹಕಾರಿ ಆಗಿರುವ ಈ ಯೋಜನೆಯನ್ನು ಜನರು ಬಳಸಿಕೊಳ್ಳಬೇಕೆಂದರು.

ಈ ಸಂದರ್ಭ ತಾ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಚಂದವಳ್ಳಿ ಸೋಮಶೇಖರ್‌, ಸದಸ್ಯ ಪ್ರಶಾಂತ್‌ಕುಕ್ಕೆ, ತಾಲೂಕು ವೈದ್ಯಾಧಿಕಾರಿ ಡಾ.ಅಶೋಕ್‌, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗೇಂದ್ರಕುಮಾರ್‌, ಜೆಸಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ನಟರಾಜ್‌, ಶಿರಸ್ತೇದಾರ್‌ ಅರವಿಂದ್‌, ಜೆಸಿ ಆಸ್ಪತ್ರೆ ವೈದ್ಯ ಡಾ.ಗುರುರಾಜ್‌, ಹಿರಿಯ ಆರೋಗ್ಯ ಪರಿವೀಕ್ಷಕ ಎ.ಎಂ.ಜಗದೀಶ್‌, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಜಯಶ್ರೀ, ಆರೋಗ್ಯ ಮಿತ್ರ ಕಾರ‍್ಯಕರ್ತರಾದ ರಾಮು, ಅಭಿಲಾಷ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ