ಆ್ಯಪ್ನಗರ

ಸಹಕಾರಿ ಕ್ಷೇತ್ರದಲ್ಲಿ ರಾಜಕೀಯ ಹಸ್ತಕ್ಷೇಪ ಸಲ್ಲದು

ಸಹಕಾರಿ ಕ್ಷೇತ್ರ ಒಟ್ಟಾಗಿ ಹೋಗುವುದೇ ಪ್ರಗತಿಯಾಗಿದೆ, ಸಹಕಾರಿ ಕ್ಷೇತ್ರದಲ್ಲಿ ಜಾತಿ-ರಾಜಕೀಯ ಹಸ್ತಕ್ಷೇಪವಿರಬಾರದು ಎಂದು ಜಿಲ್ಲಾ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ. ಆರ್‌.ಎಂ ಮಂಜುನಾಥ್‌ ಗೌಡ ಹೇಳಿದರು.

Vijaya Karnataka 12 Jun 2019, 5:00 am
ಶಿರಾಳಕೊಪ್ಪ: ಸಹಕಾರಿ ಕ್ಷೇತ್ರ ಒಟ್ಟಾಗಿ ಹೋಗುವುದೇ ಪ್ರಗತಿಯಾಗಿದೆ, ಸಹಕಾರಿ ಕ್ಷೇತ್ರದಲ್ಲಿ ಜಾತಿ-ರಾಜಕೀಯ ಹಸ್ತಕ್ಷೇಪವಿರಬಾರದು ಎಂದು ಜಿಲ್ಲಾ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಡಾ. ಆರ್‌.ಎಂ ಮಂಜುನಾಥ್‌ ಗೌಡ ಹೇಳಿದರು.
Vijaya Karnataka Web SMR-11SLKP01 PHOTO 01


ಪಟ್ಟಣದ ಅಗಡಿ ಅಶೋಕ್‌ ಅವರ ತೋಟದ ಆವರಣದಲ್ಲಿ ಸೋಮವಾರ ತಾಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಒಕ್ಕೂಟ ಆಯೋಜಿಸಿದ್ದ ನೂತನ ಅಧ್ಯಕ್ಷ ರಿಗೆ ಮತ್ತು ನಿರ್ದೇಶಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

70-80ರ ದಶಕದಲ್ಲಿ ರೈತರಿಗೆ ಆರ್ಥಿಕ ನೆರವು ನೀಡುವ ವ್ಯವಸ್ಥೆಯಲ್ಲಿ ಶೇ.65ರಿಂದ 70ರಷ್ಟು ರೈತರನ್ನು ತಲುಪಿದ್ದೆವು. ಆದರೆ, ಇಂದು ರೈತರ ಬೇಡಿಕೆಯನ್ನು ಶೇ. 24 ಪೂರೈಸುತ್ತಿದ್ದೇವೆ. ಇದಕ್ಕೆ ಸರಕಾರದ ನೀತಿ ನಿಯಮಗಳೇ ಕಾರಣ ಎಂದರು.

ಶಿಕಾರಿಪುರ ತಾಲೂಕಿನ 36 ಸಹಕಾರ ಸಂಘಗಳಿಗೆ 50ಕೋಟಿ ಸಾಲ ನೀಡಿದ್ದೇವೆ. ಕಳೆದ ವರ್ಷ 365 ಕೋಟಿ ಬೆಳೆಸಾಲ ಕೊಟ್ಟಿರುವುದು ಇತಿಹಾಸ. ಕೇಂದ್ರ ಸರಕಾರ ಜುಲೈನಲ್ಲಿ ಮಂಡಿಸುವ ಬಜೆಟ್‌ನಲ್ಲಿ ನಬಾರ್ಡ್‌ ಮತ್ತು ಸಹಕಾರಿ ಬ್ಯಾಂಕುಗಳಿಗೆ ಹೆಚ್ಚಿನ ಸಾಲ ಕೊಡುವ ತೀರ್ಮಾನವಾಗಬೇಕು ಎಂದರು.

ಅಗಡಿ ಅಶೋಕ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ನೌಕರರ ತಪ್ಪಿನಿಂದ ಇಡೀ ಬ್ಯಾಂಕ್‌ ನಷ್ಟದಲ್ಲಿತ್ತು. ಡಿಪಾಜಿಟ್‌ ಹೊಂದಿದ್ದ ಗ್ರಾಹಕರು ವಾಪಸ್‌ ಪಡೆಯಲು ಪ್ರಾರಂಭಿಸಿದರು. ಆ ಸಮಯದಲ್ಲಿ ಮಂಜುನಾಥ್‌ ಗೌಡರು ತೆಗೆದುಕೊಂಡ ನಿರ್ಧಾರ ಬ್ಯಾಂಕ್‌ ಮತ್ತೆ ಚೇತರಿಸಿಕೊಳ್ಳಲು ಕಾರಣವಾಯಿತು ಎಂದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಚನ್ನವೀರಪ್ಪ ಪ್ರಾಸ್ತಾವಿಕ ಮಾತನಾಡಿದರು. ಬಿ.ಡಿ. ಭೂಕಾಂತ್‌, ಷಡಾಕ್ಷ ರಿ ಮಾತನಾಡಿದರು. ಬ್ಯಾಂಕ್‌ ನಿರ್ದೇಶಕರಾದ ದಿನೇಶ್‌, ಯೋಗೇಶ್‌, ವೆಂಕಟೇಶ್‌, ವಿಜಯ ದೇವರು, ಪರಮೇಶ್‌, ಸುಧೀರ್‌, ರಾಜಣ್ಣ ರೆಡ್ಡಿ, ತಿಪ್ಪೇಸ್ವಾಮಿ ಇದ್ದರು.

ಆಶಾ ಪ್ರಾರ್ಥಿಸಿ, ಬಿ.ಕೆ. ಸುರೇಶ್‌ ನಿರೂಪಿಸಿ, ಕೆ. ಶೇಖರಪ್ಪ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ