ಆ್ಯಪ್ನಗರ

’ಪೂರ್ವಜರು ರಚಿಸಿದ ಜಾನಪದಗೀತೆಯೇ ಪ್ರಸಿದ್ಧಿ’

ನಮ್ಮ ಪೂರ್ವಜರು ಅಕ್ಷರ ಜ್ಞಾನವಿಲ್ಲದೇ ಜಾನಪದ ಗೀತೆ ರಚಿಸಿದ್ದು, ಇಂದಿಗೂ ಆ ಗೀತೆಗಳು ಪ್ರಸಿದ್ಧಿ ಪಡೆಯುತ್ತಿದೆ ಎಂದು ಸ್ವಾಮಿವಿವೇಕಾನಂದ ಪ್ರೌಢಶಾಲೆ ಮುಖ್ಯಶಿಕ್ಷಕ ತೊಳಜಾನಾಯಕ್‌ ಹೇಳಿದರು.

Vijaya Karnataka 7 Nov 2019, 5:00 am
ತ್ಯಾಗರ್ತಿ: ನಮ್ಮ ಪೂರ್ವಜರು ಅಕ್ಷರ ಜ್ಞಾನವಿಲ್ಲದೇ ಜಾನಪದ ಗೀತೆ ರಚಿಸಿದ್ದು, ಇಂದಿಗೂ ಆ ಗೀತೆಗಳು ಪ್ರಸಿದ್ಧಿ ಪಡೆಯುತ್ತಿದೆ ಎಂದು ಸ್ವಾಮಿವಿವೇಕಾನಂದ ಪ್ರೌಢಶಾಲೆ ಮುಖ್ಯಶಿಕ್ಷಕ ತೊಳಜಾನಾಯಕ್‌ ಹೇಳಿದರು.
Vijaya Karnataka Web popular from folklore created by ancestors
’ಪೂರ್ವಜರು ರಚಿಸಿದ ಜಾನಪದಗೀತೆಯೇ ಪ್ರಸಿದ್ಧಿ’


ಸಾಗರ ತಾಲೂಕಿನ ತ್ಯಾಗರ್ತಿಯಲ್ಲಿಜೈಕರ್ನಾಟಕ ಆಟೋಚಾಲಕರ ಹಾಗೂ ಮಾಲೀಕರ ಸಂಘ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿಅವರು ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿಮಾತ್ರ ಹೆಚ್ಚಾಗಿ ಕನ್ನಡ ಭಾಷೆ ಬಳಕೆಯಾಗುತ್ತಿದೆ ಎಂದರು.

ಧ್ವಜಾರೋಹಣ ನೆರವೇರಿಸಿದ ಸಾಗರ ರಕ್ತನಿಧಿ ಕೇಂದ್ರದ ಕಾರ‍್ಯನಿರ್ವಾಹಕ ಅಧಿಕಾರಿ ಪ್ರಸನ್ನಕುಮಾರ್‌ ಮಾತನಾಡಿ, ಸಾಮಾಜಿಕ ಸ್ವಾಸ್ಥತ್ರ್ಯ ರಕ್ಷಣೆಗೆ ಹಿರಿಯರ ಮಾರ್ಗದರ್ಶನ ಅಗತ್ಯ. ವೈಯಕ್ತಿಕ ಕಾರ‍್ಯದೊಂದಿಗೆ ಸಾಮಾಜಿಕ ಸೇವೆಯಲ್ಲೂಪ್ರತಿಯೊಬ್ಬರೂ ತೊಡಗಿಕೊಳ್ಳಬೇಕೆಂದರು. ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ವಿನಾಯಕ್‌ ಅವರನ್ನು ಸನ್ಮಾನಿಸಲಾಯಿತು. ಜೈ ಕರ್ನಾಟಕ ಆಟೋಚಾಲಕರು ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಶಿವು ಬೆಳಂದೂರು ಅಧ್ಯಕ್ಷತೆವಹಿಸಿದ್ದರು. ತ್ಯಾಗರ್ತಿ ಗ್ರಾಮಪಂಚಾಯಿತಿ ಸದಸ್ಯರಾದ ಗೀತಾ ಪರಶುರಾಮ್‌, ಅಂಗಡಿ ಮಾಲೀಕರಾದ ಗೋವಿಂದಶೆಟ್ಟಿ, ಗಿರೀಶ್‌, ಶಿವಕುಮಾರ್‌, ಸಂಘದ ಪ್ರತಿನಿಧಿಗಳು ಇದ್ದರು.
........................
ಕನ್ನಡ ಭಾಷೆ ಮನೆಯ ಹೆಬ್ಬಾಗಿಲು. ಕನ್ನಡದಲ್ಲಿರಚಿಸಿದ ಲಾವಣಿ, ಜಾನಪದ ಗೀತೆಗಳು, ಸುಗ್ಗಿನೃತ್ಯ, ಸೋಬಾನೆಪದ, ಗೀಗಿಪದಗಳಂತಹ ಸಾಹಿತ್ಯಗಳು ಚಿರಸ್ಮರಣೀಯವಾಗಿರಬೇಕು.
- ತೊಳಜಾನಾಯಕ್‌, ಸ್ವಾಮಿವಿವೇಕಾನಂದ ಪ್ರೌಢಶಾಲೆ ಮುಖ್ಯಶಿಕ್ಷಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ