ಆ್ಯಪ್ನಗರ

ಟ್ಯಾಕ್ಸಿ ಚಾಲಕರಿಂದ ಹತ ಯೋಧರಿಗೆ ಶ್ರದ್ಧಾಂಜಲಿ

ಭದ್ರಾವತಿ-ಶಿವಮೊಗ್ಗ ಮೀಟರ್‌ ಟ್ಯಾಕ್ಸಿ ಮಾಲೀಕರ ಮತ್ತು ಚಾಲಕರ ಸಂಘದಿಂದ ಮಂಗಳವಾರ ಹುತಾತ್ಮ ಯೋಧರರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಮೆರವಣಿಗೆ ನಡೆಸಲಾಯಿತು.

Vijaya Karnataka 20 Feb 2019, 5:00 am
ಭದ್ರಾವತಿ: ಭದ್ರಾವತಿ-ಶಿವಮೊಗ್ಗ ಮೀಟರ್‌ ಟ್ಯಾಕ್ಸಿ ಮಾಲೀಕರ ಮತ್ತು ಚಾಲಕರ ಸಂಘದಿಂದ ಮಂಗಳವಾರ ಹುತಾತ್ಮ ಯೋಧರರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಮೆರವಣಿಗೆ ನಡೆಸಲಾಯಿತು.
Vijaya Karnataka Web SMR-19BDVT2


ಪಾಕಿಸ್ತಾನದ ಉಗ್ರರು ಭಾರತ ದೇಶ ಕಾಯುವ ವೀರ ಯೋಧರರ ಮೇಲೆ ಮಾನವ ಬಾಂಬ್‌ಗಳನ್ನು ಅಳವಡಿಸಿದ ವಾಹನವನ್ನು ಮಿಲಿಟರಿ ಮೇಲೆ ಏಕಾಏಕಿ ನುಗ್ಗಿಸಿ 45 ಕ್ಕೂ ಹೆಚ್ಚು ಯೋಧರರನ್ನು ಹತ್ಯೆಗೈದ ಘಟನೆಯನ್ನು ಸಂಘವು ಖಂಡಿಸುತ್ತದೆ. ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯಾವುದೇ ಮುಲಾಜಿಗೊಳಗಾಗದೆ ಪ್ರತೀಕಾರ ತೀರಿಸಿಕೊಂಡು ದೇಶದ ಭದ್ರತೆ ಕಾಪಾಡಬೇಕಿದೆ. ಪಾಕಿಸ್ತಾನದಿಂದ ಸಕಲ ಸಂಪರ್ಕವನ್ನು ಕಡಿದುಕೊಂಡು ತಕ್ಕ ಪಾಠ ಕಲಿಸಬೇಕು ಎಂದರು.

ಭದ್ರಾವತಿ-ಶಿವಮೊಗ್ಗ ಅವಳಿ ನಗರಗಳ ಮಧ್ಯೆ ನಿತ್ಯ ಸಂಚರಿಸುವ ನೂರಾರು ಟ್ಯಾಕ್ಸಿಗಳ ಚಾಲಕರು ಮತ್ತು ಮಾಲೀಕರು ಮುಖ್ಯ ಬಸ್‌ ನಿಲ್ದಾಣದಿಂದ ಟ್ಯಾಕ್ಸಿಗಳ ಸಾಲು ಮೆರವಣಿಗೆ ಮೂಲಕ ನಗರದ ರಂಗಪ್ಪವೃತ್ತ, ಸಿ.ಎನ್‌.ರಸ್ತೆ, ಮಾಧವಚಾರ್‌ ವೃತ್ತ, ಬಿ.ಎಚ್‌.ರಸ್ತೆ, ಡಾ.ರಾಜಕುಮಾರ್‌ ರಸ್ತೆ, ಹಾಲಪ್ಪವೃತ್ತ, ಅಂಬೇಡ್ಕರ್‌ ವೃತ್ತ ಮೂಲಕ ಮೈಲುದ್ದ ದೂರದ ವಾಹನಗಳ ಮೆರವಣಿಗೆಯು ಶಿವಮೊಗ್ಗದ ಮುಖ್ಯ ಬಸ್‌ ನಿಲ್ದಾಣ ಬಳಿಯ ವೃತ್ತಕ್ಕೆ ತೆರಳಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ