ಆ್ಯಪ್ನಗರ

‘ಸರಳ ಮದುವೆಗೆ ಆದ್ಯತೆ ಅಗತ್ಯ’

ಭಾರತೀಯ ಕೌಟುಂಬಿಕ ವ್ಯವಸ್ಥೆ ಜಗತ್ತಿನಲ್ಲೆ ಅತಿ ವಿಶಿಷ್ಟ. ಮದುವೆ ಮೂಲಕ ಸತಿಪತಿ ಜೀವನಪೂರ್ತಿ ಅರಿತು ಬದುಕುವ ವ್ಯವಸ್ಥೆ ಉಳಿಸಿ ಬೆಳೆಸುವ ನಮ್ಮ ಪರಂಪರೆ ಪೋಷಿಸಬೇಕಿದೆ ಎಂದು ವಿಶ್ವ ಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ ರಮೇಶ್‌ಬಾಬು ಹೇಳಿದರು.

Vijaya Karnataka 5 May 2019, 5:00 am
ಶಿಕಾರಿಪುರ: ಭಾರತೀಯ ಕೌಟುಂಬಿಕ ವ್ಯವಸ್ಥೆ ಜಗತ್ತಿನಲ್ಲೆ ಅತಿ ವಿಶಿಷ್ಟ. ಮದುವೆ ಮೂಲಕ ಸತಿಪತಿ ಜೀವನಪೂರ್ತಿ ಅರಿತು ಬದುಕುವ ವ್ಯವಸ್ಥೆ ಉಳಿಸಿ ಬೆಳೆಸುವ ನಮ್ಮ ಪರಂಪರೆ ಪೋಷಿಸಬೇಕಿದೆ ಎಂದು ವಿಶ್ವ ಹಿಂದೂ ಪರಿಷತ್‌ ಜಿಲ್ಲಾಧ್ಯಕ್ಷ ರಮೇಶ್‌ಬಾಬು ಹೇಳಿದರು.
Vijaya Karnataka Web SMR-2SKP3


ಪಟ್ಟಣದಲ್ಲಿ ಗುರುವಾರ ವಿಶ್ವಹಿಂದೂ ಪರಿಷತ್‌, ಬಜರಂಗದಳ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು. ಆಧುನಿಕತೆ, ನಗರೀಕರಣ ಪರಿಣಾಮ ಕೂಡು ಕುಟುಂಬ ಒಡೆದು ಹೋಗುತ್ತಿವೆ, ಅದು ನಿಲ್ಲಬೇಕು. ಮದುವೆ ದುಂದು ವೆಚ್ಚಕ್ಕೆ ಕಾರಣವಾಗುವ ಬದಲಿಗೆ ಎರಡು ಕುಟುಂಬ, ಪತಿ ಪತ್ನಿ ಪರಸ್ಪರ ಅರಿತುಕೊಳ್ಳುವುದಕ್ಕೆ ಅವಕಾಶ ಆಗಬೇಕು. ಎಲ್ಲೆಡೆ ಸಾಮೂಹಿಕ ವಿವಾಹ ಹೆಚ್ಚಾಗಬೇಕೆಂದರು.

ವಿಶ್ವ ಹಿಂದೂ ಪರಿಷತ್‌ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಮಾತನಾಡಿ, ವಿವಾಹ ಕೇವಲ ದೈಹಿಕ ಸುಖಕ್ಕೆ ಮಾತ್ರವಲ್ಲ. ವಿವಾಹ ಬಂಧನದ ಮೂಲಕ ಬಲಿಷ್ಠ ಸಮಾಜ ನಿರ್ಮಾಣ, ಪ್ರತಿಯೊಬ್ಬರ ಉತ್ತರೋತ್ತರ ಅಭಿವೃದ್ಧಿಯ ಜತೆಗೆ ಸಂಸ್ಕಾರವನ್ನೂ ಮದುವೆ ಮನುಷ್ಯನಿಗೆ ನೀಡಲಿದೆ ಎಂದರು.

ಕಾಳೇನಹಳ್ಳಿ ಶಿವಯೋಗಾಶ್ರಮದ ಶ್ರೀರೇವಣಸಿದ್ಧ ಸ್ವಾಮೀಜಿ ಮಾತನಾಡಿ, ಸರಳ ಮದುವೆಗೆ ಆದ್ಯತೆ ನೀಡಲು ಎಲ್ಲರೂ ಮುಂದಾಗಬೇಕೆಂದರು. ತಾಲೂಕು ವಿಹಿಂಪ ಅಧ್ಯಕ್ಷ ಎಸ್‌.ವಿ.ಕೆ. ಮೂರ್ತಿ, ಉಪಾಧ್ಯಕ್ಷ ಪ್ರಕಾಶ್‌, ಗಿರೀಶ್‌ರಾವ್‌ ಘೋರ್ಪಡೆ, ಮುಖಂಡರಾದ ನಟರಾಜ್‌, ಜಗದೀಶ್‌, ಸಂಚಾಲಕ ಶಿವರಂಜಿನಿ ಸುದರ್ಶನ್‌, ಭವರ್‌ಸಿಂಗ್‌, ಬಿ.ವಿ.ಮಂಜುನಾಥ್‌, ರವಿಸಿಂಗ್‌, ವಿಜಯರಾಜ್‌, ಮಾಲತೇಶ್‌, ವಾಸುದೇವಚಾರ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ