ಆ್ಯಪ್ನಗರ

’ಶುಚಿತ್ವಕ್ಕೆ ಆದ್ಯತೆ ಅಗತ್ಯ’

ನಿಫಾ ವೈರಸ್‌ ಸೋಂಕಿಗೆ ಈಡಾಗದಂತೆ ತಡೆಯಲು ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕೆಂದು ತಾಲೂಕು ವೈದ್ಯಾಧಿಕಾರಿ ಡಾ.ಶಾಂತರಾಜ್‌ ಹೇಳಿದರು.

Vijaya Karnataka Web 25 May 2018, 5:00 am
ಹೊಸನಗರ: ನಿಫಾ ವೈರಸ್‌ ಸೋಂಕಿಗೆ ಈಡಾಗದಂತೆ ತಡೆಯಲು ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕೆಂದು ತಾಲೂಕು ವೈದ್ಯಾಧಿಕಾರಿ ಡಾ.ಶಾಂತರಾಜ್‌ ಹೇಳಿದರು.
Vijaya Karnataka Web preference required for cleanliness
’ಶುಚಿತ್ವಕ್ಕೆ ಆದ್ಯತೆ ಅಗತ್ಯ’


ಇಲ್ಲಿನ ತಾಲೂಕು ಕಚೇರಿಯಲ್ಲಿ ಗುರುವಾರ ಅಧಿಕಾರಿಗಳ ಮಟ್ಟದ ಸಭೆಯಲ್ಲಿ ನಿಫಾ ವೈರಸ್‌ ಹರಡುವಿಕೆ ಕುರಿತು ಮಾಹಿತಿ ನೀಡಿದರು.

ಜನತೆಗೆ ಅರಿವು ಮೂಡಿಸಲು ಆರೋಗ್ಯ ಇಲಾಖೆ ಹತ್ತಾರು ಕ್ರಮ ಕೈಗೊಳ್ಳಲಿದೆ. ವೈರಸ್‌ಗೆ ಇದುವರೆಗೂ ಔಷಧಿ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಸೋಂಕು ತಗುಲಿದರೆ ಮಾರಣಾಂತಿಕವಾಗಬಹುದು. ಈ ಕಾರಣಕ್ಕೆ ಮುಂಜಾಗ್ರತೆಯೇ ಇದಕ್ಕೆ ಮದ್ದು ಎಂದರು.

ಸೋಂಕು ತಗುಲಿದ ಬಾವಲಿಗಳು ಸಾಯುವುದಿಲ್ಲ. ಆದರೆ ಇವು ಸ್ರವಿಸುವ ದ್ರವಗಳಿಂದ ಬೇರೆ ಪ್ರಾಣಿ ಅಥವಾ ಮನುಷ್ಯರಿಗೆ ಹರಡಬಲ್ಲದು. ಹಣ್ಣು, ತರಕಾರಿ ಬಳಸುವ ವೇಳೆ ಶುಚಿತ್ವಕ್ಕೆ ಗಮನಕೊಡುವ ಅಗತ್ಯವಿದೆ ಎಂದರು.

ತಹಸೀಲ್ದಾರ್‌ ಚಂದ್ರಶೇಖರ ನಾಯ್ಕ್‌ ಮಾತನಾಡಿ, ಮಳೆಗಾಲ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಚರಂಡಿ, ನಿವೇಶನಗಳಲ್ಲಿ ಸ್ವಚ್ಛತೆಗೆ ಕ್ರಮ ವಹಿಸಬೇಕು. ಅಧಿಕಾರಿಗಳು ಕಾರ್ಯೋನ್ಮುಖವಾಗಬೇಕೆಂದು ಸೂಚಿಸಿದರು. ವೈದ್ಯಾಧಿಕಾರಿ ಡಾ.ಲಿಂಗರಾಜ್‌, ಬಿಇಓ ರಾಮಪ್ಪಗೌಡ, ಪ.ಪಂ. ಮುಖ್ಯಾಧಿಕಾರಿ ಜಗದೀಶನಾಯ್ಕ್‌, ಡಾ. ಆತ್ಮ, ಹಿರಿಯ ಆರೋಗ್ಯ ಸಹಾಯಕ ಸತೀಶ್‌, ತಾಲೂಕು ಆರೋಗ್ಯ ಶಿಕ್ಷ ಣಾಧಿಕಾರಿ, ಕರಿಬಸಮ್ಮ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ