ಆ್ಯಪ್ನಗರ

ಮಕ್ಕಳಿಗೆ ಶಿಕ್ಷಣ ಜತೆ ವೃತ್ತಿಪರ ಕೌಶಲ ಅಗತ್ಯ

ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ವೃತ್ತಿಪರ ಕೌಶಲ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಪರಿಪೂರ್ಣ ಜ್ಞಾನ ಹೊಂದಲು ಸಾಧ್ಯ ಎಂದು ತರಬೇತುದಾರ ಎಸ್‌.ಕ್ಯೂಬ್‌ನ ಸಂತೋಷ್‌ ಹೇಳಿದರು.

Vijaya Karnataka 14 Feb 2019, 5:00 am
ಶಿವಮೊಗ್ಗ: ಮಕ್ಕಳಿಗೆ ವಿದ್ಯಾಭ್ಯಾಸದ ಜತೆಗೆ ವೃತ್ತಿಪರ ಕೌಶಲ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಪರಿಪೂರ್ಣ ಜ್ಞಾನ ಹೊಂದಲು ಸಾಧ್ಯ ಎಂದು ತರಬೇತುದಾರ ಎಸ್‌.ಕ್ಯೂಬ್‌ನ ಸಂತೋಷ್‌ ಹೇಳಿದರು.
Vijaya Karnataka Web SMR-13GANESH4


ನಗರದ ಜೆಎನ್‌ಎನ್‌ಸಿ ಕಾಲೇಜಿನ ಪಾಲಿಟೆಕ್ನಿಕ್‌ ಡಿಪ್ಲೊಮಾ ಕಾಲೇಜಿನಲ್ಲಿ ಮಂಗಳವಾರ ಯೂತ್‌ ಹಾಸ್ಟೆಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ತರುಣೋದಯ ಘಟಕ ಏರ್ಪಡಿಸಿದ್ದ ವಿದ್ಯಾರ್ಥಿಗಳಿಗೆ ವೃತ್ತಿಮಾರ್ಗದರ್ಶನ, ಏಕಾಗ್ರತೆ, ಜೀವನಕೌಶಲ ಕುರಿತ ಕಾರಾರ‍ಯಗಾರದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕೇವಲ ಅಂಕಗಳಿಗೋಸ್ಕರ ಓದುವುದನ್ನು ಬಿಟ್ಟು ಕೌಶಲ ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಬೇಕು. ಯಾವುದೇ ವಿಷಯದ ಮೂಲ ವಿಷಯ ತಿಳಿದುಕೊಳ್ಳುವುದು ಬಹಳ ಅವಶ್ಯಕ. ಕೌಶಲ ಬೆಳೆಸಿಕೊಳ್ಳಲು ಇಂಗ್ಲಿಷ್‌ ಟಿ.ವಿ. ಮಾಧ್ಯಮಗಳಲ್ಲಿ ಬರುವ ಚರ್ಚೆ, ವಾರ್ತೆ, ಇಂಗ್ಲಿಷ್‌ ದಿನಪತ್ರಿಕೆ ಓದುವ ಮುಖಾಂತರ ಇಂಗ್ಲೀಷ್‌ನಲ್ಲಿ ಬರೆಯುವ, ಮಾತನಾಡುವ, ಕೌಶಲ ಬೆಳೆಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.

ಪ್ರತಿ ದಿನ 5ರಿಂದ 10 ನಿಮಿಷ ಧ್ಯಾನ ಮಾಡಿದರೆ ಅವರ ಏಕಾಗ್ರತೆ ಮಟ್ಟ ಹೆಚ್ಚುತ್ತದೆ. ಇದು ವಿದ್ಯಾರ್ಥಿ ಜೀವನದಲ್ಲಿ ಮಾತ್ರವಲ್ಲದೇ ಉದ್ಯೋಗ ಕ್ಷೇತ್ರದಲ್ಲೂ, ಜೀವನದಲ್ಲೂ ಲವಲವಿಕೆಯಿಂದ ಇರಲು ಸಹಕಾರಿಯಾಗಿದೆ. ಅಧ್ಯಾತ್ಮ ಪುಸ್ತಕ ಓದುವುದು, ಜನಬಳಕೆ, ಒಳ್ಳೆ ಪರಿಸರದಲ್ಲಿ ಜೀವನ ಮಾಡಿದರೆ ಸಂಸ್ಕಾರಯುತ ಜೀವನ ನಡೆಸಬಹುದು ಎಂದರು. ಯೂತ್‌ ಹಾಸ್ಟೆಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ರಾಜ್ಯಘಟಕದ ಉಪಾಧ್ಯಕ್ಷ ಜಿ.ವಿಜಯಕುಮಾರ್‌ ಮಾತನಾಡಿದರು. ಸಮಾರಂಭದಲ್ಲಿ ಪಾಲಿಟೆಕ್ನಿಕ್‌ ಕಾಲೇಜಿನ ಪ್ರಾಂಶುಪಾಲ ಚಿದಂಬರ್‌ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ