ಆ್ಯಪ್ನಗರ

ಸಂಘಟಿತ ಹೋರಾಟದಿಂದ ಬೆಳೆಗಾರರ ರಕ್ಷಣೆ

ಅಡಕೆ ಬೆಳೆಗೆ ಅನೇಕ ಆರ್ಥಿಕ ಸಂಕಷ್ಟ ಎದುರಾಗಿದ್ದು ಮಲೆನಾಡು ಭಾಗದಲ್ಲಿ ಸಣ್ಣ ಮತ್ತು ಅತಿಸಣ್ಣ ಅಡಕೆ ಬೆಳೆಗಾರರ ಹಿತರಕ್ಷ ಣೆಗೆ ಪೂರಕ ಯೋಜನೆ ಅಗತ್ಯ ಎಂದು ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್‌.ಜಯಂತ್‌ ಹೇಳಿದರು.

Vijaya Karnataka 20 Jun 2019, 5:00 am
ಸಾಗರ : ಅಡಕೆ ಬೆಳೆಗೆ ಅನೇಕ ಆರ್ಥಿಕ ಸಂಕಷ್ಟ ಎದುರಾಗಿದ್ದು ಮಲೆನಾಡು ಭಾಗದಲ್ಲಿ ಸಣ್ಣ ಮತ್ತು ಅತಿಸಣ್ಣ ಅಡಕೆ ಬೆಳೆಗಾರರ ಹಿತರಕ್ಷ ಣೆಗೆ ಪೂರಕ ಯೋಜನೆ ಅಗತ್ಯ ಎಂದು ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್‌.ಜಯಂತ್‌ ಹೇಳಿದರು.
Vijaya Karnataka Web SMR-19SGR1


ಇಲ್ಲಿನ ಮಲೆನಾಡುಸಿರಿ ಸಭಾಂಗಣದಲ್ಲಿ ಬುಧವಾರ ಆಫ್ಸ್‌ಕೋಸ್‌ ಮತ್ತು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪ್ಲಾಂಟೇಷನ್‌ ಮ್ಯಾನೇಜ್‌ಮೆಂಟ್‌, ಪ್ರೈಸ್‌ ರಿಸ್ಕ್‌ ಮ್ಯಾನೇಜ್‌ಮೆಂಟ್‌ ವತಿಯಿಂದ ಏರ್ಪಡಿಸಿದ್ದ ಅಡಕೆ ಧಾರಣೆ ಮತ್ತು ನಿರ್ವಹಣೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಅಡಕೆ ಬೆಳೆಗಾರರಲ್ಲಿ ಸಂಘಟನೆ ಕೊರತೆ ಇದೆ. ಬೆಲೆ ವೈಪರೀತ್ಯವಾದಾಗ ಪರಿಣಾಮಕಾರಿ ಹೋರಾಟ ರೂಪಿಸಲು ಹಿನ್ನೆಡೆ ಉಂಟಾಗಿದೆ. ಕೇಂದ್ರ ಸರಕಾರ ಅಡಕೆ ಹಾನಿಕಾರಕ ಎಂದು ಹೇಳುತ್ತಿದೆ. ಕೋರ್ಟ್‌ನಲ್ಲೂ ಈ ಬಗ್ಗೆ ಗಂಭೀರವಾಗಿ ಪರ ವಿರೋಧದ ಚರ್ಚೆ ನಡೆಯುತ್ತಿದೆ. ಅಡಕೆ ಬೆಳೆ ಹಾಗೂ ಬೆಳೆಗಾರರ ರಕ್ಷ ಣೆಗಾಗಿ ಸಂಘಟಿತ ಹೋರಾಟದ ಅಗತ್ಯ ಹೆಚ್ಚಿದೆ. ಅಡಕೆ ಬೆಳೆ ಸಮಸ್ಯೆ ಪರಿಹರಿಸಲು ವೈಜ್ಞಾನಿಕ ಚಿಂತನೆ ಜತೆಗೆ ಸಾಂಪ್ರದಾಯಿಕ ಆಲೋಚನೆ ಅಗತ್ಯ ಎಂದರು.

ಅಧ್ಯಕ್ಷ ತೆ ವಹಿಸಿದ್ದ ಆಫ್ಸ್‌ಕೋಸ್‌ ಅಧ್ಯಕ್ಷ ಬಿ.ಎ.ಇಂದೂಧರ್‌ ಮಾತನಾಡಿ, ಅಡಕೆ ಧಾರಣೆ ಕುಸಿತ ತಡೆಗಟ್ಟುವ ಹಾಗೂ ಭವಿಷ್ಯದಲ್ಲಿ ಅಡಕೆ ಬೆಲೆ ಏರಿಳಿತ ನಿಯಂತ್ರಿಸುವ ನಿಟ್ಟಿನಲ್ಲಿ ಸಮಗ್ರ ಪರಿಶೀಲನೆ ನಡೆಸಿ, ಸೂಕ್ತ ವರದಿ ತಯಾರಿಸಬೇಕಾಗಿದೆ. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪ್ಲಾಂಟೇಷನ್‌ ಮ್ಯಾನೇಜ್‌ಮೆಂಟ್‌, ಪ್ರೈಸ್‌ ರಿಸ್ಕ್‌ ಮ್ಯಾನೇಜ್‌ಮೆಂಟ್‌ನಂಥ ಸಂಘಟನೆಗಳು ಈ ಕಾರ‍್ಯ ಮಾಡಬೇಕು ಎಂದರು. ಇಂಡಿಯನ್‌ ಇನ್‌ಸ್ಟ್ಯೂಟ್‌ ಆಫ್‌ ಪ್ಲಾಂಟೇಷನ್‌ ಮ್ಯಾನೇಜ್‌ಮೆಂಟ್‌ನ ಡಾ. ಎ.ಎನ್‌.ವಿಜಯಕುಮಾರ್‌, ಪ್ರೈಸ್‌ ರಿಸ್ಕ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ಅನೂಪ್‌ ರಿಜ್ವಾನಿ ಉಪನ್ಯಾಸ ನೀಡಿದರು. ಕೆ.ಎಂ.ಸೂರ್ಯನಾರಾಯಣ್‌ ಸ್ವಾಗತಿಸಿ, ಆಫ್ಸ್‌ಕೋಸ್‌ ಕಾರ್ಯದರ್ಶಿ ಶಶಿಧರ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ