ಆ್ಯಪ್ನಗರ

ಗ್ರಾ.ಪಂ. ಕರ ವಸೂಲಿಗಾರರ ನೇಮಕ ಅನ್ಯಾಯ ಸರಿಪಡಿಸಲು ಆಗ್ರಹ

ಕರ ವಸೂಲಿಗಾರರ ನೇಮಕದಲ್ಲಿ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿ ಭದ್ರಾವತಿ ತಾಲೂಕಿನ ನೊಂದ ಅಭ್ಯರ್ಥಿ ಹಾಗೂ ಗ್ರಾಮಸ್ಥರು ಸೋಮವಾರ ಜಿ.ಪಂ. ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

Vijaya Karnataka 18 Dec 2018, 5:00 am
ಶಿವಮೊಗ್ಗ : ಕರ ವಸೂಲಿಗಾರರ ನೇಮಕದಲ್ಲಿ ಭ್ರಷ್ಟಾಚಾರವಾಗಿದೆ ಎಂದು ಆರೋಪಿಸಿ ಭದ್ರಾವತಿ ತಾಲೂಕಿನ ನೊಂದ ಅಭ್ಯರ್ಥಿ ಹಾಗೂ ಗ್ರಾಮಸ್ಥರು ಸೋಮವಾರ ಜಿ.ಪಂ. ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
Vijaya Karnataka Web 17ganesh2


ಅಭ್ಯರ್ಥಿ ಕೂಡ್ಲಿಗೆರೆ ಅಂಬಿಕಾ ಮಾತನಾಡಿ, 2016ರಲ್ಲಿ ಕೂಡ್ಲಿಗೆರೆ ಗ್ರಾ.ಪಂ.ನಲ್ಲಿ ಖಾಲಿ ಇದ್ದ ಕರ ವಸೂಲಿಗಾರರ ಹುದ್ದೆಗೆ ಸಲ್ಲಿಸಿದ್ದ 21 ಅಭ್ಯರ್ಥಿಗಳ ಪೈಕಿ ಪಿಯುಸಿಯಲ್ಲಿ ಅತಿಹೆಚ್ಚು( ಶೇ.73) ಅಂಕ ಗಳಿಸಿದ ಅಭ್ಯರ್ಥಿಯಾಗಿದ್ದೇನೆ. ಕಂಪ್ಯೂಟರ್‌ ತರಬೇತಿ ಪ್ರಮಾಣ ಪತ್ರ, ಎಟಿಎಸ್‌ ಪ್ರಮಾಣ ಪತ್ರವನ್ನೂ ಸಲ್ಲಿಸಿದ್ದೇನೆ. ಆದರೂ ನನ್ನ ಅರ್ಜಿ ಪರಿಗಣಿಸದೆ ಶೇ.40 ಅಂಕ ಹೊಂದಿರುವ ಹಾಗೂ ಕ್ಯೂನಿಕ್ಸ್‌ನಿಂದ ತರಬೇತಿ ಪ್ರಮಾಣ ಪತ್ರ ಪಡೆದಿರುವವರಿಗೆ ಆ ಹುದ್ದೆ ನೀಡಿ ಹೆಚ್ಚು ಅಂಕ ಪಡೆದ ನನಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪಿಸಿದರು.

ಈ ಹುದ್ದೆಗೆ ನೇಮಕ ಮಾಡಿಕೊಳ್ಳುವ ಮುನ್ನ ಜಾಹೀರಾತು ಮೂಲಕ ಪಿಯುಸಿ ಉತ್ತೀರ್ಣರಾದ, ಕೇಂದ್ರ ಮತ್ತು ರಾಜ್ಯ ಸರಕಾರದ ಮಾನ್ಯತೆ ಪಡೆದ ಸಂಸ್ಥೆಯಿಂದ ಕಂಪ್ಯೂಟರ್‌ ತರಬೇತಿ ಪ್ರಮಾಣ ಪತ್ರ ಹೊಂದಿದ ಸ್ಥಳೀಯ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುವುದು, ಯಾವುದೇ ಮೀಸಲಾತಿ ಅನ್ವಯಿಸುವುದಿಲ್ಲ ಎಂದು ತಿಳಿಸಲಾಗಿತ್ತು . ಆದರೆ, ನೇಮಕದಲ್ಲಿ ಇದ್ಯಾವುದನ್ನೂ ಪಾಲಿಸಿಲ್ಲ ಎಂದು ದೂರಿದರು.

ಕಮಿಷನ್‌ ಆಧಾರದ ಮೇಲೆ ನೇಮಕಗೊಂಡವರಿಗೆ ಪದೋನ್ನತಿ ನೀಡಲು ಅವಕಾಶವಿಲ್ಲ ಎಂಬ ಸರಕಾರದ ನಿರ್ದೇಶನ ಪತ್ರ ಕಳುಹಿಸಿರುವ ಜಿ.ಪಂ. ಕಾರ್ಯಾಲಯ, ಈಗ ಅದೇ ರೀತಿಯ ವ್ಯಕ್ತಿಯನ್ನೇ ಹುದ್ದೆಗೆ ಅನುಮೋದಿಸಿದ್ದು, ಎಲ್ಲ ಅರ್ಹತೆ ಇದ್ದರೂ ನನಗೆ ಹುದ್ದೆ ನೀಡದೆ ಒತ್ತಡಕ್ಕೆ ಮಣಿದು ಬೇರೆ ಅನರ್ಹ ವ್ಯಕ್ತಿಯನ್ನು ಆಯ್ಕೆ ಮಾಡಲಾಗಿದೆ. ಇದನ್ನು ಸಿಇಒ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ