ಆ್ಯಪ್ನಗರ

ಬಾಣಂತಿ ಸಾವು, ಪ್ರತಿಭಟನೆ, ಲಾಠಿ ಚಾರ್ಜ್‌

ನಗರದ ನಿರ್ಮಲ ಆಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ ್ಯವೇ ಸಾವಿಗೆ ಕಾರಣ ಎಂದು ಆರೋಪಿಸಿ ಸಂಬಂಧಿಕರು, ಗ್ರಾಮಸ್ಥರು ಮಂಗಳವಾರ ಶವ ಇಟ್ಟು ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದಲ್ಲದೆ, ಪ್ರತಿಭಟನಾ ನಿರತ ಹಲವರನ್ನು ವಶಕ್ಕೆ ಪಡೆದರು.

Vijaya Karnataka 30 Jan 2019, 5:00 am
ಭದ್ರಾವತಿ : ನಗರದ ನಿರ್ಮಲ ಆಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ ್ಯವೇ ಸಾವಿಗೆ ಕಾರಣ ಎಂದು ಆರೋಪಿಸಿ ಸಂಬಂಧಿಕರು, ಗ್ರಾಮಸ್ಥರು ಮಂಗಳವಾರ ಶವ ಇಟ್ಟು ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಪೊಲೀಸರು ಲಾಠಿ ಚಾರ್ಜ್‌ ನಡೆಸಿದ್ದಲ್ಲದೆ, ಪ್ರತಿಭಟನಾ ನಿರತ ಹಲವರನ್ನು ವಶಕ್ಕೆ ಪಡೆದರು.
Vijaya Karnataka Web SMR-IMG_20190129_183929


ತಾಲೂಕಿನ ಬಾರಂದೂರು ನಿವಾಸಿ ರಾಧಾಬಾಯಿ (29) ಮೃತಪಟ್ಟವರು. ಮಾರುತಿರಾವ್‌ ಅವರ ಪತ್ನಿ ರಾಧಾಬಾಯಿ ಮೂವರು ಹೆಣ್ಣು ಮಕ್ಕಳ ನಂತರ ನಾಲ್ಕನೆಯ ಹೆರಿಗೆಗೆ ನಿರ್ಮಲಾ ಆಸ್ಪತ್ರೆಗೆ ಕಳೆದ ಭಾನುವಾರ ಬೆಳಗ್ಗೆ ದಾಖಲಾಗಿದ್ದರು. ಅಂದು ಸಂಜೆಯೇ ಗಂಡು ಮಗುವಿಗೆ ಜನ್ಮನೀಡಿದ್ದರು. ಮಗು ಆರೋಗ್ಯವಾಗಿತ್ತಾದರೂ ಹೆರಿಗೆ ಬಳಿಕ ಬಾಣಂತಿಗೆ ರಕ್ತಶ್ರಾವ ನಿಂತಿರಲಿಲ್ಲ. ಕೂಡಲೇ ಎರಡು ಬಾಟಲ್‌ ರಕ್ತ ತರಬೇಕೆಂದು ಪತಿ ಮಾರುತಿರಾವ್‌ ಅವರಿಗೆ ತಿಳಿಸಿದ್ದ ವೈದ್ಯರು, ಶಿವಮೊಗ್ಗಕ್ಕೆ ಕಳಿಸಿದ್ದರು. ಕೆಲ ಹೊತ್ತಲ್ಲೇ ನಿರ್ಧಾರ ಬದಲಿಸಿದ್ದ ವೈದ್ಯರು, ಆಂಬ್ಯುಲೆನ್ಸ್‌ ವ್ಯವಸ್ಥೆ ಮಾಡಿ ಶಿವಮೊಗ್ಗದ ನಾರಾಯಣ ಆಸ್ಪತ್ರೆಗೆ ಬಾಣಂತಿ ರಾಧಾಬಾಯಿ ಅವರನ್ನು ಕಳಿಸಿಕೊಟ್ಟಿದ್ದರು. ನಾರಾಯಣ ಆಸ್ಪತ್ರೆಯ ವೈದ್ಯರು ಸುಮಾರು 40 ಬಾಟಲಿಯಷ್ಟು ರಕ್ತ ತರಿಸಿಕೊಂಡು ಚಿಕಿತ್ಸೆ ನೀಡಿದರೂ ಫಲಕಾರಿಯಾಗದ ಕಾರಣ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದರು ಎನ್ನಲಾಗಿದೆ. ಅದರಂತೆ ರಾಧಾಬಾಯಿ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತ ಪಟ್ಟಿದ್ದಾರೆ.

ಪರಿಹಾರಕ್ಕೆ ಒತ್ತಾಯ:
ನಿರ್ಮಲ ಆಸ್ಪತ್ರೆ ವೈದ್ಯರಿಂದ ಆದ ನಿರ್ಲಕ್ಷ ್ಯಕ್ಕೆ ಬಡ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕೆಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್‌. ಕುಮಾರ್‌ ನೇತೃತ್ವದಲ್ಲಿ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ತಾಲೂಕು ವೈದ್ಯರ ಸಂಘದ ಅಧ್ಯಕ್ಷ ಡಾ.ರಾಜು ಈ ಸಂದರ್ಭ ಮಾತನಾಡಿ, ವೈದ್ಯರು ಕುಳಿತು ಚರ್ಚಿಸಬೇಕಾಗಿರುವುದರಿಂದ ಎರಡು ದಿನ ಕಾಲಾವಕಾಶ ನೀಡಬೇಕೆಂದು ಕೋರಿದರು.

ನಿರ್ಮಲ ಆಸ್ಪತ್ರೆಯ ವೈದ್ಯಾಧಿಕಾರಿ ಮೇರಿ ''ನಮ್ಮದು ಚಾರಿಟಬಲ್‌ ಟ್ರಸ್ಟ್‌ ಆಗಿರುವುದರಿಂದ ಪರಿಹಾರ ನೀಡಲು ನಮಗೆ ಅಧಿಕಾರವಿಲ್ಲ. ಮೇಲಧಿಕಾರಿಗಳ ಬಳಿ ಚರ್ಚಿಸಬೇಕಿದೆ,'' ಎಂದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಸಮಸ್ಯೆ ಪರಿಹರಿಸುವವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಸಿದರು.

ನಗರಸಭೆ ಸದಸ್ಯರಾದ ಆರ್‌.ಕರುಣಾಮೂರ್ತಿ, ಫ್ರಾನ್ಸಿಸ್‌, ಟಿಪ್ಪು ಸುಲ್ತಾನ್‌, ಮಾಜಿ ಸದಸ್ಯ ಸಿ.ರಾಮಕೃಷ್ಣೇಗೌಡ, ಶಾಸಕರ ಪುತ್ರ ಬಿ.ಎಸ್‌.ಗಣೇಶ್‌, ಮೃತ ಕುಟುಂಬದ ಸದಸ್ಯರು ಹಾಗೂ ವೈದ್ಯರುಗಳಾದ ಡಾ.ಸೆಲ್ವರಾಜ್‌, ಡಾ.ರಾಮಕೃಷ್ಣ, ಡಾ.ಬೆಂಗಳೂರಿ, ಡಾ.ವೀಣಾಭಟ್‌ ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು. ಡಿವೈಎಸ್‌ಪಿ ಓಂಕಾರನಾಯ್ಕ ನೇತೃತ್ವದಲ್ಲಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ