ಆ್ಯಪ್ನಗರ

ಶಿಕ್ಷ ಕರ ವರ್ಗಾವಣೆ ಖಂಡಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ಶಿಕ್ಷ ಕರನ್ನು ವರ್ಗಾವಣೆ ಮಾಡಿದರೆ ಟಿಸಿ ಪಡೆದು ಹೋಗುತ್ತೇವೆ ಎಂದು ತಾಲೂಕಿನ ಅರಳಿಹಳ್ಳಿ ಸರಕಾರಿ ಪ್ರೌಢಶಾಲೆಯ ನೂರಾರು ವಿದ್ಯಾರ್ಥಿಗಳು ಗುರುವಾರ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

Vijaya Karnataka 19 Jul 2019, 5:00 am
ಭದ್ರಾವತಿ: ಶಿಕ್ಷ ಕರನ್ನು ವರ್ಗಾವಣೆ ಮಾಡಿದರೆ ಟಿಸಿ ಪಡೆದು ಹೋಗುತ್ತೇವೆ ಎಂದು ತಾಲೂಕಿನ ಅರಳಿಹಳ್ಳಿ ಸರಕಾರಿ ಪ್ರೌಢಶಾಲೆಯ ನೂರಾರು ವಿದ್ಯಾರ್ಥಿಗಳು ಗುರುವಾರ ಶಾಲಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
Vijaya Karnataka Web SMR-18BDVT2


ಶಿಕ್ಷಕರ ವರ್ಗಾವಣೆ ಮಾಡದಂತೆ ಗ್ರಾಮದ ಚುನಾಯಿತ ಸದಸ್ಯರು, ಎಸ್‌ಡಿಎಂಸಿ ಸದಸ್ಯರು ಇತ್ತೀಚೆಗೆ ಡಿಡಿಪಿಐಗೆ ಮನವಿ ಮಾಡಿದ್ದಾಗ ಸಕಾರಾತ್ಮಕವಾಗಿ ಸ್ಪಂದಿಸಿದ್ದರು. ಆದರೆ, ಇಬ್ಬರು ಶಿಕ್ಷ ಕರನ್ನು ವರ್ಗಾವಣೆ ಮಾಡಿ ಆದೇಶಿಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟವನ್ನು ಮಾಡದೇ ಬಿಸಿಲಿನಲ್ಲಿ ಪ್ರತಿಭಟನೆ ನಡೆಸಿದರು.

ಕಳೆದ ಹತ್ತು ವರ್ಷಗಳಿಂದ ಈ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಲ್ಲದ ದಿನಗಳಲ್ಲಿ 15 ಶಿಕ್ಷ ಕರು ಕರ್ತವ್ಯ ನಿರ್ವಹಿಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಶಾಲಾಭಿವೃದ್ಧಿ ಸಮಿತಿ, ಜನಪ್ರತಿನಿಧಿಗಳು, ಗ್ರಾಮಸ್ಥರ ಸಹಕಾರ ಹಾಗು ಶಿಕ್ಷ ಕರ ಶ್ರಮದಿಂದಾಗಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. 2019-20ನೇ ಶೈಕ್ಷ ಣಿಕ ವರ್ಷದಲ್ಲಿ ಪ್ರಾಥಮಿಕ ಆಂಗ್ಲ ಮಾಧ್ಯಮದ ತರಗತಿಯೂ ಸೇರಿದಂತೆ ಒಟ್ಟು 20 ತರಗತಿಗಳಲ್ಲಿ ಸುಮಾರು 500ಕ್ಕು ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ತಾಲೂಕಿನ ಅತ್ಯುನ್ನತ ಶಾಲೆಯಾಗಿದೆ. ಇಲ್ಲಿ ಮತ್ತಷ್ಟು ಶಿಕ್ಷ ಕರ ಕೊರತೆ ಇದ್ದರೂ ನಾಲ್ವರು ಹೆಚ್ಚುವರಿ ಶಿಕ್ಷ ಕರಿದ್ದಾರೆಂದು ಬೇರೆಡೆ ವರ್ಗಾವಣೆ ಮಾಡಲು ಡಿಡಿಪಿಐ ಮುಂದಾಗಿದ್ದಾರೆ ಎಂದು ಆರೋಪಿಸಿದರು. ಜಿ.ಪಂ. ಸದಸ್ಯ ಮಣಿಶೇಖರ್‌, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಮೂರ್ತಿ ಶಾಲೆಗೆ ಆಗಮಿಸಿ ಮುಖ್ಯಶಿಕ್ಷಕರೊಂದಿಗೆ ಚರ್ಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ