ಆ್ಯಪ್ನಗರ

ಅರಣ್ಯ ಕಚೇರಿ ಏರಿ ಪ್ರತಿಭಟಿಸಿದ ಗ್ರಾ.ಪಂ. ಉಪಾಧ್ಯಕ್ಷ!

94ಸಿ ಕಾಯಿದೆಯಡಿ ಹಕ್ಕುಪತ್ರ ಪಡೆಯಲು ಅರಣ್ಯ ಇಲಾಖೆ ನಿರಾಕ್ಷೇಪಣ ಪತ್ರ ನೀಡುತ್ತಿಲ್ಲಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಲಯ ಅರಣ್ಯಾಧಿಕಾರಿ ಕಚೇರಿಯ ಚಾವಣಿ ಏರಿ ಕುಳಿತು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಮೂಡುಗೊಪ್ಪ ನಗರದಲ್ಲಿಬುಧವಾರ ನಡೆದಿದೆ.

Vijaya Karnataka 5 Dec 2019, 5:00 am
ಹೊಸನಗರ (ಶಿವಮೊಗ್ಗ) : 94ಸಿ ಕಾಯಿದೆಯಡಿ ಹಕ್ಕುಪತ್ರ ಪಡೆಯಲು ಅರಣ್ಯ ಇಲಾಖೆ ನಿರಾಕ್ಷೇಪಣ ಪತ್ರ ನೀಡುತ್ತಿಲ್ಲಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವಲಯ ಅರಣ್ಯಾಧಿಕಾರಿ ಕಚೇರಿಯ ಚಾವಣಿ ಏರಿ ಕುಳಿತು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಮೂಡುಗೊಪ್ಪ ನಗರದಲ್ಲಿಬುಧವಾರ ನಡೆದಿದೆ.
Vijaya Karnataka Web 4HOSP1_46
ವಾಸದ ಮನೆ ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಹೊಸನಗರ ತಾಲೂಕು ನಗರ ವಲಯ ಅರಣ್ಯ ಕಚೇರಿ ಏರಿದ ಗ್ರಾಪಂ ಉಪಾಧ್ಯಕ್ಷ ಕರುಣಾಕರ ಶೆಟ್ಟಿ.


ಇಲ್ಲಿನ ಸರ್ವೆ ನಂ. 220ರಲ್ಲಿಸುಮಾರು 128 ಕುಟುಂಬಗಳು ಹಲವು ವರ್ಷಗಳಿಂದ ವಾಸವಾಗಿದ್ದು, ಹಕ್ಕುಪತ್ರಕ್ಕಾಗಿ 94ಸಿ ಅಡಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ವಾಸದ ಮನೆ ಹಕ್ಕುಪತ್ರ ಪಡೆಯಲು ಅಗತ್ಯವಿರುವ ನಿರಾಕ್ಷೇಪಣ ಪತ್ರ ನೀಡಲು ಅರಣ್ಯ ಇಲಾಖೆ ಅಧಿಕಾರಿಗಳು ಒಪ್ಪುತ್ತಿಲ್ಲ. ಇದರಿಂದ ಹಕ್ಕುಪತ್ರ ದೊರೆಯದೆ ಅತಂತ್ರ ಸ್ಥಿತಿಯಲ್ಲಿದ್ದಾರೆ. ಈ ಬಗ್ಗೆ ನಿರಂತರ ಹೋರಾಟ ಪ್ರತಿಭಟನೆಗಳು ನಡೆಯುತ್ತಿದ್ದರೂ ಕೂಡ ಫಲ ನೀಡಿಲ್ಲಎಂದು ಆರೋಪಿಸಿದ ಗ್ರಾ.ಪಂ. ಉಪಾಧ್ಯಕ್ಷ ಕರುಣಾಕರ ಶೆಟ್ಟಿ, ಮೂಡುಗೊಪ್ಪ ಗ್ರಾ.ಪಂ. ವ್ಯಾಪ್ತಿಯ ಚಿಕ್ಕಪೇಟೆಯಲ್ಲಿರುವ ವಲಯ ಅರಣ್ಯಾಧಿಕಾರಿ ಕಚೇರಿ ಕಟ್ಟಡ ಏರಿ ಪ್ರತಿಭಟನೆ ನಡೆಸಿದರು.

ಈ ವೇಳೆ ಎಸಿಎಫ್‌ ವಿಜಯಕುಮಾರ್‌, ಆರ್‌ಎಫ್‌ಒ ಆದರ್ಶ, ತಹಸೀಲ್ದಾರ್‌ ಶ್ರೀಧರಮೂರ್ತಿ, ಸಿಪಿಐ ಗುರಣ್ಣ ಹೆಬ್ಬಾಳ್‌, ಪಿಎಸ್‌ಐ ಸಿ.ಆರ್‌.ಕೊಪ್ಪದ್‌, ಕರಿಮನೆ ಗ್ರಾಪಂ ಅಧ್ಯಕ್ಷ ಹಲಸಿನಹಳ್ಳಿ ರಮೇಶ್‌, ಸದಸ್ಯರಾದ ಸತೀಶ್‌ ಪಟೇಲ್‌, ಹಿಲ್ಕುಂಜಿ ಕುಮಾರ್‌ ಮತ್ತಿತರರು ಇದ್ದರು.

======
ಸರ್ವೆ ಕಾರ‍್ಯ ನಡೆಸುವ ಭರವಸೆ
ಕಚೇರಿ ಆರಂಭಗೊಳ್ಳುತ್ತಿದ್ದಂತೆ ಚಾವಣಿ ಏರಿದ ಕರುಣಾಕರಶೆಟ್ಟಿ ಅವರನ್ನು ಕೆಳಗಿಳಿಯುವಂತೆ ಮನವೊಲಿಸುವಲ್ಲಿವಲಯ ಅರಣ್ಯಾಧಿಕಾರಿ ಆದರ್ಶ ಅವರು ಮಾಡಿದ ಪ್ರಯತ್ನ ವಿಫಲವಾಯಿತು. ಅಂತಿಮವಾಗಿ ಸಾಗರ ಡಿಎಫ್‌ಒ ಮತ್ತು ತಹಸೀಲ್ದಾರ್‌ ಸ್ಥಳಕ್ಕೆ ಬಂದು ಮಾತುಕತೆಗೆ ಆಹ್ವಾನಿಸಿದ ನಂತರ ಪ್ರತಿಭಟನೆ ಅಂತ್ಯಗೊಂಡಿತು. ಸರ್ವೆ ನಂ. 220ರ ಜಾಗದ ಸರ್ವೆ ಕಾರ‍್ಯ ಪ್ರಗತಿಯಲ್ಲಿದೆ. ನಮ್ಮ ಇಲಾಖೆಯಿಂದ ವಿಳಂಬ ಮಾಡುವುದಿಲ್ಲ. ಅರಣ್ಯ ಮತ್ತು ಕಂದಾಯ ಇಲಾಖೆಯ ಜಂಟಿ ಸರ್ವೆ ಕಾರ್ಯ ಚುರುಕುಗೊಳಿಸಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮಕೈಗೊಳ್ಳಗುವುದು ಎಂದು ಡಿಎಫ್‌ಒ ಮೋಹನ್‌ಕುಮಾರ್‌ ಭರವಸೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ