ಆ್ಯಪ್ನಗರ

‘ಬಿಎಸ್‌ಎನ್‌ಎಲ್‌ ಬಲವರ್ಧನೆಗೆ ಸೌಲಭ್ಯ ಕೊಡಿ’

ಬಿಎಸ್‌ಎನ್‌ಎಲ್‌ ಸಂಸ್ಥೆ ಖಾಸಗೀಕರಣಗೊಳಿಸುವ ಕೇಂದ್ರದ ಕ್ರಮ ಖಂಡಿಸಿ ಬಿಎಸ್‌ಎನ್‌ಎಲ್‌ ಆಲ್‌ ಯೂನಿಯನ್ಸ್‌ ಮತ್ತು ಅಸೋಸಿಯೇಷನ್‌ ನೇತೃತ್ವದಲ್ಲಿ ನೌಕರರು ಸೋಮವಾರ ಕಚೇರಿಗೆ ಗೈರಾಗುವ ಮೂಲಕ ಧರಣಿಗೆ ಹಾಜರಾದರು.

Vijaya Karnataka 19 Feb 2019, 5:00 am
ಶಿವಮೊಗ್ಗ: ಬಿಎಸ್‌ಎನ್‌ಎಲ್‌ ಸಂಸ್ಥೆ ಖಾಸಗೀಕರಣಗೊಳಿಸುವ ಕೇಂದ್ರದ ಕ್ರಮ ಖಂಡಿಸಿ ಬಿಎಸ್‌ಎನ್‌ಎಲ್‌ ಆಲ್‌ ಯೂನಿಯನ್ಸ್‌ ಮತ್ತು ಅಸೋಸಿಯೇಷನ್‌ ನೇತೃತ್ವದಲ್ಲಿ ನೌಕರರು ಸೋಮವಾರ ಕಚೇರಿಗೆ ಗೈರಾಗುವ ಮೂಲಕ ಧರಣಿಗೆ ಹಾಜರಾದರು.
Vijaya Karnataka Web SMR-18GANESH4


ಬಿಎಸ್‌ಎನ್‌ಎಲ್‌ ಕೇಂದ್ರ ಸರಕಾರಿ ಸ್ವಾಮ್ಯದ ಸಾರ್ವಜನಿಕ ದೂರ ಸಂಪರ್ಕ ಇಲಾಖೆಯಾಗಿದೆ. ಸರಕಾರ ಖಾಸಗಿ ಸಂಸ್ಥೆಗಳಿಗೆ ಮಣೆ ಹಾಕುತ್ತಾ ಬಿಎಸ್‌ಎನ್‌ಎಲ್‌ನ್ನೇ ಮುಚ್ಚಿಹಾಕುವ ಹುನ್ನಾರ ಮಾಡುತ್ತಿದೆ. ಇದನ್ನು ತಪ್ಪಿಸಲು ಮತ್ತು ಬಿಎಸ್‌ಎನ್‌ಎಲ್‌ ಮತ್ತಷ್ಟು ಬಲಪಡಿಸಲು ಸೌಲಭ್ಯ ಒದಗಿಸುವಂತೆ ಆಗ್ರಹಿಸಿದರು.

ಈಗಾಗಲೇ ಕೇಂದ್ರ ಸರಕಾರ ಎಲ್ಲ ಖಾಸಗಿ ಕಂಪೆನಿಗಳಿಗೂ 4ಜಿ ಸೇವೆ ನೀಡಿದೆ. ಆದರೆ, ಬಿಎಸ್‌ಎನ್‌ಎಲ್‌ನ್ನು ಮಾತ್ರ ಕಡೆಗಣಿಸಿದೆ. ಇದರಿಂದ ಅತ್ಯುತ್ತಮ ಸೇವೆ ನೀಡಲು ಮತ್ತು ಇತರ ಖಾಸಗೀ ಕ್ಷೇತ್ರದ ಸಂಸ್ಥೆಗಳ ಜತೆ ಪೈಪೋಟಿ ನಡೆಸಲು ಸಾಧ್ಯವಾಗುತ್ತಿಲ್ಲ. ತಕ್ಷಣವೇ 4ಜಿ ಸ್ಪೆಕ್ಟ್ರ್ಯಮ್‌ನ್ನು ವಿಸ್ತರಿಸಬೇಕು. ಬಿಎಸ್‌ಎನ್‌ಎಲ್‌ ಒಡೆತನದ ಭೂಮಿಯ ನಿರ್ವಹಣಾ ನೀತಿಗೆ ಅನುಮೋದನೆ ನೀಡಬೇಕೆಂದು ಒತ್ತಾಯಿಸಿದರು.

ಎಲ್ಲ ಸ್ಥಿರ ಆಸ್ತಿ ಖಾತೆಗಳನ್ನು ಸಂಸ್ಥೆಗೆ ವರ್ಗಾಯಿಸಬೇಕು. ಆರ್ಥಿಕ ಸುಭದ್ರತೆ ನೀಡಬೇಕು, ಬಿಎಸ್‌ಎನ್‌ಎಲ್‌ ಸಂಸ್ಥೆಯು ಬ್ಯಾಂಕ್‌ಗಳಿಂದ ಸಾಲ ಪಡೆಯಲು ಅನುಮತಿ ನೀಡಬೇಕು, ಎಲ್ಲ ನಿರ್ದೇಶಕರ ಸ್ಥಾನ ತುಂಬಬೇಕು, ಬಿಎಸ್‌ಎನ್‌ಎಲ್‌ ಟವರ್‌ಗಳ ಖಾಸಗೀಕರಣ ರದ್ದುಮಾಡಬೇಕು, ವೇತನ ಪರಿಷ್ಕರಣೆ ಮಾಡಬೇಕು, ನಿವೃತ್ತಿ ವೇತನ ಪರಿಷ್ಕರಿಸಬೇಕೆಂದು ಆಗ್ರಹಿಸಿದರು.

ಇತ್ತೀಚೆಗೆ ಜಿಯೋ ಬಂದು ಬಿಎಸ್‌ಎನ್‌ಎಲ್‌ನ್ನೆ ನುಂಗಿ ಹಾಕಿದೆ. ಆ ಖಾಸಗಿ ಸಂಸ್ಥೆಗೆ ಕೊಡುವ ಸೌಲಭ್ಯವನ್ನು ನಮಗೆ ಕೊಟ್ಟಿಲ್ಲ. ಒಳ್ಳೆಯ ಸೇವೆ ಸಲ್ಲಿಸಿದ್ದರೂ ಕೇಂದ್ರ ಸರಕಾರ ಖಾಸಗಿಗೆ ಮಣೆ ಹಾಕುತ್ತಿದೆ ಹೊರತು ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ಗೆ ಸಹಾಯ ಮಾಡುತ್ತಿಲ್ಲ ಎಂದು ದೂರಿದರು.

ಬಿಎಸ್‌ಎನ್‌ಎಲ್‌ನಲ್ಲಿ ಲಕ್ಷಾಂತರ ಜನರು ಕೆಲಸ ಮಾಡುತ್ತಿದ್ದಾರೆ. ಈಗ ವೇತನ ನೀಡುವುದು ಕಷ್ಟ ಎನ್ನುವಂತಹ ಸ್ಥಿತಿಗೆ ಬಂದಿದೆ. ಬಿಎಸ್‌ಎನ್‌ಎಲ್‌ ಸಂಸ್ಥೆಯ ಹೆಸರಿನಲ್ಲಿ ಇದ್ದ ಹಣವೂ ಕೂಡ ಕರಗಿ ಹೋಗಿದೆ. ಬಿಎಸ್‌ಎನ್‌ಎಲ್‌ ಕಂಪನಿಯನ್ನು ಖಾಸಗೀಕರಿಸುವ, ಇಲ್ಲ ಮುಚ್ಚುವಹುನ್ನಾರ ಕೇಂದ್ರ ಸರಕಾರ ಹೊಂದಿದೆ ಎಂದು ಆರೋಪಿಸಿದರು.

ಮುಷ್ಕರದಲ್ಲಿ ಸಂಘಟನೆಯ ಮುಖ್ಯಸ್ಥ ವೈ.ಆರ್‌.ನಾಗರಾಜ್‌, ಸುಬ್ರಮಣ್ಯ, ಚನ್ನಬಸಪ್ಪ, ದತ್ತಾತ್ರಿ, ಸಣ್ಣತಿಮ್ಮಪ್ಪ, ಸುನಿಲ್‌ ಕುಮಾರ್‌, ಪ್ರಸಾದ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ