ಆ್ಯಪ್ನಗರ

ವಿಶೇಷಚೇತನ ಮಕ್ಕಳಿಗೆ ಜೀವನ ಶಿಕ್ಷಣ ನೀಡಿ

ವಿಶೇಷಚೇತನ ಮಕ್ಕಳಿಗೆ ಮಾರ್ಗದರ್ಶನ ಮಾಡುವುದು ಸವಾಲಿನ ಕೆಲಸ. ಅಂತಹ ಮಕ್ಕಳು ಮತ್ತು ಪೋಷಕರ ಪಾಲಿಗೆ ಮಾರ್ಗದರ್ಶಕರು ಸಾಕ್ಷಾತ್‌ ದೇವರಿದ್ದಂತೆ ಎಂದು ಶಾಸಕ ಎಚ್‌.ಹಾಲಪ್ಪ ಹೇಳಿದರು.

Vijaya Karnataka 8 Jan 2020, 5:00 am
ಸಾಗರ: ವಿಶೇಷಚೇತನ ಮಕ್ಕಳಿಗೆ ಮಾರ್ಗದರ್ಶನ ಮಾಡುವುದು ಸವಾಲಿನ ಕೆಲಸ. ಅಂತಹ ಮಕ್ಕಳು ಮತ್ತು ಪೋಷಕರ ಪಾಲಿಗೆ ಮಾರ್ಗದರ್ಶಕರು ಸಾಕ್ಷಾತ್‌ ದೇವರಿದ್ದಂತೆ ಎಂದು ಶಾಸಕ ಎಚ್‌.ಹಾಲಪ್ಪ ಹೇಳಿದರು.
Vijaya Karnataka Web 07SGR9_46
ಸಾಗರ ವರದಶ್ರೀ ಸಭಾಂಗಣದಲ್ಲಿಮಂಗಳವಾರ ರಾಜ್ಯಮಟ್ಟದ ವಿಶೇಷ ಶಿಕ್ಷಕರ ಮುಂದುವರಿದ ಪುನರ್ವಸತಿ ಶಿಕ್ಷಣ ತರಬೇತಿ ಕಾರ್ಯಾಗಾರವನ್ನು ಶಾಸಕ ಎಚ್‌.ಹಾಲಪ್ಪ ಉದ್ಘಾಟಿಸಿದರು.


ಇಲ್ಲಿನ ವರದಶ್ರೀ ಸಭಾಂಗಣದಲ್ಲಿಮಂಗಳವಾರ ಭೀಮನಕೋಣೆಯ ಮುಂಗರವಳ್ಳಿ ಚೈತನ್ಯ ವಿಶೇಷ ಶಿಕ್ಷಣ ಟ್ರಸ್ಟ್‌, ದಾವಣಗೆರೆ ಅಂಗವಿಕಲರ ಪುನರ್ವಸತಿ ಮತ್ತು ಸಬಲೀಕರಣ ಸಂಯೋಜಿತ ಪ್ರಾದೇಶಿಕ ಕೇಂದ್ರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ವಿಶೇಷ ಶಿಕ್ಷಕರ ಮುಂದುವರಿದ ಪುನರ್ವಸತಿ ಶಿಕ್ಷಣ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಳೆದ 7 ವರ್ಷಗಳಿಂದ ಚೈತನ್ಯ ವಿಶೇಷ ಶಿಕ್ಷಣ ಶಾಲೆಯಲ್ಲಿಶಾಂತಲಾ ಸುರೇಶ್‌ ನೇತೃತ್ವದ ತಂಡ ನ್ಯೂನತೆಯ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಿದೆ. ಖಾಸಗಿಯಾಗಿ, ಯಾವುದೇ ನೇರ ಅನುದಾನವನ್ನೂ ಪಡೆಯದೆ ಇಂತಹ ಮಹತ್ಕಾರ‍್ಯವನ್ನು ಚೇತನ್ಯ ವಿಶೇಷ ಶಿಕ್ಷಣ ಟ್ರಸ್ಟ್‌ ಮಾಡುತ್ತಿರುವುದು ಶ್ಲಾಘನೀಯ. ಸಮಾಜ, ಸರಕಾರ ಇಂತಹ ಯತ್ನಗಳನ್ನು ಬೆಂಬಲಿಸಬೇಕು ಎಂದರು.

ಸಂಸ್ಥೆ ಮುಖ್ಯಸ್ಥೆ ಶಾಂತಲಾ ಸುರೇಶ್‌ ಮಾತನಾಡಿ, ಮಾನಸಿಕವಾಗಿ, ಬೌದ್ಧಿಕವಾಗಿ ಭಿನ್ನಶಕ್ತಿ ಇರುವ ಮಕ್ಕಳಿಗೆ ಜೀವನೋತ್ಸಾಹ ತುಂಬಲು ಜೀವನ ಶಿಕ್ಷಣ ಅಗತ್ಯ. ಅಂತಹ ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿಪುನರ್ವಸತಿ ಶಿಕ್ಷಣ ನೀಡುವವರಿಗೆ ಸೂಕ್ತ ತರಬೇತಿ ನೀಡುವ ಉದ್ದೇಶದಿಂದ ಕಾರಾರ‍ಯಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಚೈತನ್ಯ ವಿಶೇಷ ಶಿಕ್ಷಣ ಟ್ರಸ್ಟಿ ಎಂ.ನಾಗರಾಜ್‌ ಮುಂಗರವಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಟೂರಿಸಂ ಟಾಸ್ಕ್‌ಫೋರ್ಸ್‌ ಸದಸ್ಯ ಲಕ್ಷಿತ್ರ್ಮೕನಾರಾಯಣ ಕಾಶಿ, ಜಿ.ವಿ.ಹೆಗಡೆ ಬಿಸಲಕೊಪ್ಪ, ಬೆಂಗಳೂರು ಧರಿತ್ರಿ ಸಂಸ್ಥೆಯ ಉಷಾ ಜಾಗೀರ್‌ದಾರ್‌, ರಾಜು ತಲತೋಟಿ, ತಮರೈ ಸೆಲ್ವಂ ಉಪಸ್ಥಿತರಿದ್ದರು. ಬಿ.ಕೆ.ನಾರಾಯಣಸ್ವಾಮಿ ಸ್ವಾಗತಿಸಿ, ವೆಂಕಟೇಶ್‌ ಮಡಿವಾಳ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ