ಆ್ಯಪ್ನಗರ

ಸದ್ದಿಲ್ಲದ ಕಾರ‍್ಯ ನಿಜವಾದ ಸೇವೆ

ಸದ್ದಿಲ್ಲದೆ ಮಾಡುವ ಕಾರ‍್ಯಗಳೇ ಸಮಾಜಮುಖಿಯ ನಿಜವಾದ ಸೇವೆ. ಸಂಕಷ್ಟದಲ್ಲಿರುವವರಿಗೆ ಸಕಾಲದಲ್ಲಿ ಸಹಾಯ ಹಸ್ತ ನೀಡಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ರೋಟರಿ ಕ್ಲಬ್‌ ನೂತನ ಅಧ್ಯಕ್ಷ ಟಿ.ಎಚ್‌.ತೀರ್ಥಪ್ಪ ಹೇಳಿದರು.

Vijaya Karnataka 9 Jul 2019, 5:00 am
ಭದ್ರಾವತಿ: ಸದ್ದಿಲ್ಲದೆ ಮಾಡುವ ಕಾರ‍್ಯಗಳೇ ಸಮಾಜಮುಖಿಯ ನಿಜವಾದ ಸೇವೆ. ಸಂಕಷ್ಟದಲ್ಲಿರುವವರಿಗೆ ಸಕಾಲದಲ್ಲಿ ಸಹಾಯ ಹಸ್ತ ನೀಡಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ರೋಟರಿ ಕ್ಲಬ್‌ ನೂತನ ಅಧ್ಯಕ್ಷ ಟಿ.ಎಚ್‌.ತೀರ್ಥಪ್ಪ ಹೇಳಿದರು.
Vijaya Karnataka Web SMR-7BDVT2


ಅವರು ಶನಿವಾರ ಸಂಜೆ ನ್ಯೂಟೌನ್‌ ರೋಟರಿ ಕ್ಲಬ್‌ ಸಭಾಂಗಣದಲ್ಲಿ ಏರ್ಪಡಿಸಿದ್ದ 2019-20ನೇ ಸಾಲಿನ ರೋಟರಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದರು.

ಸಾಮಾಜಿಕ ಸೇವೆ ಸಲ್ಲಿಸಲು ದೊರಕುವ ಅವಕಾಶವನ್ನು ಸಂತಸದಿಂದ ಸ್ವೀಕರಿಸಬೇಕು. ಇದನ್ನು ದೇವರ ಸೇವೆ ಎಂದು ಭಾವಿಸಿ ಕರ್ತವ್ಯ ನಿರ್ವಹಿಸುವ ಮೂಲಕ ಪೋಷಕರು ಮೆಚ್ಚುವ ರೀತಿ ಬದುಕಬೇಕು. ಮರಣಿಸಿದ ನಂತರವೂ ನಾವು ಮಾಡಿದ ಕಾರ‍್ಯ ಶಾಶ್ವತವಾಗಿ ಇರುತ್ತವೆ ಎಂಬುದನ್ನು ಮರೆಯಬಾರದು ಎಂದರು.

2019-20ನೇ ಸಾಲಿನ ರೋಟರಿ ಕ್ಲಬ್‌ ನೂತನ ಪದಾಧಿಕಾರಿಗಳನ್ನು ಜಿಲ್ಲಾ ಗವರ್ನರ್‌ ರಾಮಚಂದ್ರಮೂರ್ತಿ ಅಧ್ಯಕ್ಷ ತೀರ್ಥಯ್ಯ ಅವರಿಗೆ ಅಧ್ಯಕ್ಷ ಪದವಿ ಹಸ್ತಾಂತರ ಮಾಡಿದರು. ಎಂ.ಮುರಳಿ ಅವರು ರೋಟರಿ ಕನೆಕ್ಟ್ದ ವರ್ಲ್ಡ್‌ ಲೋಗೋ ಲಾಂಚನ ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಜಿಲ್ಲಾ ಸಹಾಯಕ ಗವರ್ನರ್‌ ಎಂ.ಮುರಳಿ, ರೋಟರಿ ಜೋನಲ್‌ ಅಧಿಕಾರಿ ಶಿವಶಂಕರ್‌, ಆನ್ಸ್‌ ಕ್ಲಬ್‌ ಅಧ್ಯಕ್ಷೆ ಕುಸುಮ ತೀರ್ಥಯ್ಯ, ಕಾರ‍್ಯದರ್ಶಿಗಳಾದ ಲತಾ ದುಶ್ಯಂತರಾಜ್‌, ಜಾಹ್ನವಿ ವಾದಿರಾಜ್‌ ಇತರರು ಇದ್ದರು. ರಾಷ್ಟ್ರ ಗೀತೆಯೊಂದಿಗೆ ಆರಂಭವಾದ ಕಾರ‍್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಡಿ.ಕೆ.ರಾಘವೇಂದ್ರರಾವ್‌ ಸ್ವಾಗತಿಸಿ, ಕಾರ‍್ಯದರ್ಶಿ ಆದರ್ಶ ವರದಿ ವಾಚಿಸಿದರು. ಪದಾಧಿಕಾರಿಗಳಾದ ಕೆ.ನಾಗರಾಜ್‌, ಕೆ.ಎಸ್‌.ಶೈಲೇಂದ್ರ, ಟಿ.ಎಸ್‌.ದುಶ್ಯಂತರಾಜ್‌, ಲತಾ ದುಶ್ಯಂತರಾಜ್‌ ಅತಿಥಿಗಳನ್ನು ಪರಿಚಯಿಸಿದರು. ಶುಭ ಮತ್ತು ಶ್ರೇಯ ಪ್ರಾರ್ಥಿಸಿ, ಕಾರ‍್ಯದರ್ಶಿ ಎಸ್‌.ಅಡವೀಶಯ್ಯ ವಂದಿಸಿ, ರಾಘವೇಂದ್ರ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ