ಆ್ಯಪ್ನಗರ

ರಾಮಾಯಣ ನಮ್ಮೆಲ್ಲರಿಗೂ ಮಾರ್ಗದರ್ಶಕ

ಜಗತ್ತಿನಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬ ಮಾನವನ ಆತ್ಮದಲ್ಲಿ ಶ್ರೀರಾಮನ ಸಾಕ್ಷಾತ್ಕಾರವಿದೆ. ಈಗಿನ ಯುಗದಲ್ಲಿ ಭೂಮಿಯು ಭೂಕಂಪ, ಜಲಪ್ರಳಯಗಳಿಂದ ತನ್ನ ಮೇಲಿನ ನಿಯಂತ್ರಣ ಕಳೆದುಕೊಳ್ಳುತ್ತಿದೆ. ಈ ಎಲ್ಲ ಪ್ರಕೃತಿ ವಿಕೋಪ ತಡೆಯಲು ಶ್ರೀರಾಮ ಮಂತ್ರವೊಂದೇ ಮಾರ್ಗ ಎಂದು ವೇದ ಬ್ರಹ್ಮ ಅನಿಲ್‌ ಹೊಳ್ಳ ಹೇಳಿದರು.

Vijaya Karnataka 28 Apr 2019, 5:00 am
ಸಾಗರ: ಜಗತ್ತಿನಲ್ಲಿ ಜೀವಿಸುತ್ತಿರುವ ಪ್ರತಿಯೊಬ್ಬ ಮಾನವನ ಆತ್ಮದಲ್ಲಿ ಶ್ರೀರಾಮನ ಸಾಕ್ಷಾತ್ಕಾರವಿದೆ. ಈಗಿನ ಯುಗದಲ್ಲಿ ಭೂಮಿಯು ಭೂಕಂಪ, ಜಲಪ್ರಳಯಗಳಿಂದ ತನ್ನ ಮೇಲಿನ ನಿಯಂತ್ರಣ ಕಳೆದುಕೊಳ್ಳುತ್ತಿದೆ. ಈ ಎಲ್ಲ ಪ್ರಕೃತಿ ವಿಕೋಪ ತಡೆಯಲು ಶ್ರೀರಾಮ ಮಂತ್ರವೊಂದೇ ಮಾರ್ಗ ಎಂದು ವೇದ ಬ್ರಹ್ಮ ಅನಿಲ್‌ ಹೊಳ್ಳ ಹೇಳಿದರು.
Vijaya Karnataka Web ramayana is the guide to all of us
ರಾಮಾಯಣ ನಮ್ಮೆಲ್ಲರಿಗೂ ಮಾರ್ಗದರ್ಶಕ


ಇಲ್ಲಿನ ಅಗ್ರಹಾರ ಕೋದಂಡರಾಮದೇವಸ್ಥಾನದಲ್ಲಿ ಶ್ರೀರಾಮ ಸೇವಾಸಮಿತಿ ಇತ್ತೀಚೆಗೆ ಏರ್ಪಡಿಸಿದ್ದ ಶ್ರೀರಾಮ ತಾರಕ ಹವನ ನೆರವೇರಿಸಿ, ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿದರು.

ರಾಮಾಯಣ ಮಹಾಕಾವ್ಯವು ಧರ್ಮಶಾಸ್ತ್ರ. ಸಾಧಕರಿಗೆ ನಿತ್ಯವೂ ಎದುರಾಗುವ ಅನೇಕ ಸಮಸ್ಯೆಗಳಿಗೆ ಸೂಕ್ತವಾದ ಸಮಾಧಾನ ರಾಮಾಯಣ ಪಠಣದಿಂದ ದೊರಕುತ್ತದೆ. ಅಧ್ಯಾತ್ಮಿಕ, ಲೌಕಿಕ ಹಾಗೂ ವ್ಯವಹಾರಿಕ ಜೀವನದಲ್ಲಿ ಸತತವಾಗಿ ನಮ್ಮೆಲ್ಲರಿಗೂ ಮಾರ್ಗದರ್ಶಕವಾಗಿದೆ ಎಂದರು.

ಅನಿಲ್‌ ಬಾಪಟ್‌ ಮಾತನಾಡಿ, ಆತ್ಮಶುದ್ಧಿಗಾಗಿ ಶ್ರೀರಾಮನ ಧ್ಯಾನ ಮಾಡಿದಂತೆ ದೇಶದ ಕಂಟಕಗಳು ದೂರವಾಗಲು ಯಜ್ಞ-ಯಾಗಾದಿ ಅವಶ್ಯಕ. ಪ್ರಕೃತಿಯನ್ನು ಮನುಷ್ಯ ಹಾಳುಗೆಡವುತ್ತಿದ್ದು, ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯ ಎಂದರು.

ಸೇವಾ ಸಮಿತಿ ಸಂಚಾಲಕ ಎಂ.ಎನ್‌.ಗೋಪಾಲಕೃಷ್ಣ ದೀಕ್ಷಿತ್‌ ಮಾತನಾಡಿದರು. ಪುರೋಹಿತ ಸುಬ್ರಹ್ಮಣ್ಯ ಕುಲಕರ್ಣಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ವಕ್ತಾರ ಮ.ಸ.ನಂಜುಂಡಸ್ವಾಮಿ, ಕೆಪಿಸಿ ನಿವೃತ್ತ ಉಪ ಪ್ರಧಾನ ಪ್ರಬಂಧಕ ಎಂ.ಎಸ್‌. ಸತೀಶ್‌ , ಸೇವಾಸಮಿತಿಯ ರವಿ ಭಟ್‌,ಡಿ.ಶ್ರೀಧರ ಇತರರು ಇದ್ದರು. ಧನ್ವಿ ಸ್ವಾಗತಿಸಿ, ದತ್ತಾತ್ರೇಯ ಜೋಯ್ಸ್‌ ವಂದಿಸಿ, ಚಿದಂಬರ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ