ಆ್ಯಪ್ನಗರ

ರಕ್ತದಾನಕ್ಕೆ ಮುಂದಾದರೆ ಕೊರತೆ ನಿವಾರಣೆ

ಸಮಾಜದ ಆಳಕ್ಕೆ ಹೋಗಿ ಜಾಗೃತಿ ಮೂಡಿಸುವುದರ ಮೂಲಕ ದೇಶ ಕಟ್ಟುವ ಶಕ್ತಿ ರಾಷ್ಟ್ರೀಯ ಸೇವಾ ಯೋಜನೆಗೆ ಇದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಡಿ.ಎಸ್‌.ಅರುಣ್‌ ಹೇಳಿದರು.

Vijaya Karnataka 20 Jun 2019, 5:00 am
ಶಿವಮೊಗ್ಗ: ಸಮಾಜದ ಆಳಕ್ಕೆ ಹೋಗಿ ಜಾಗೃತಿ ಮೂಡಿಸುವುದರ ಮೂಲಕ ದೇಶ ಕಟ್ಟುವ ಶಕ್ತಿ ರಾಷ್ಟ್ರೀಯ ಸೇವಾ ಯೋಜನೆಗೆ ಇದೆ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಡಿ.ಎಸ್‌.ಅರುಣ್‌ ಹೇಳಿದರು.
Vijaya Karnataka Web SMR-19GANESH3


ನಗರದ ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಎನ್‌ಎಸ್‌ಎಸ್‌, ರೆಡ್‌ ರಿಬ್ಬನ್‌ ಘಟಕ, ರೆಡ್‌ ಕ್ರಾಸ್‌ ಸಂಜೀವಿನಿ ರಕ್ತ ನಿಧಿ ಕೇಂದ್ರಗಳ ಸಹಯೋಗದಲ್ಲಿ ಬುಧವಾರ ಏರ್ಪಡಿಸಿದ್ದ ರಕ್ತ ಗುಂಪು ವರ್ಗೀಕರಣ ಶಿಬಿರ ಮತ್ತು ಸ್ವಚ್ಛ ಭಾರತ-ಸಮ್ಮರ್‌ ಇಂಟರ್ನ್‌ಷಿಪ್‌ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿನ ಓರೆ ಕೋರೆ ತಿದ್ದುವ ಶಕ್ತಿ ಎನ್‌ಎಸ್‌ಎಸ್‌ಗೆ ಇದೆ. ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಅವಕಾಶ ಇರುವುದು ಎನ್‌ಎಸ್‌ಎಸ್‌ ಸ್ವಯಂಸೇವಕಿಯರಿಗೆ ಮಾತ್ರ. ಕಾಲೇಜಿನಲ್ಲಿ ಪ್ರತಿಯೊಬ್ಬರೂ ಎನ್‌ಎಸ್‌ಎಸ್‌ ಸೇರಿ ದೇಶದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದರು.

ಸ್ವಚ್ಛ ಭಾರತ-ಸಮ್ಮರ್‌ ಇಂಟರ್ನ್‌ಷಿಪ್‌ನಲ್ಲಿ ಸ್ವಯಂಸೇವಕಿಯರು ಸಕ್ರಿಯವಾಗಿ ತೊಡಗಿಕೊಳ್ಳುವ ಮೂಲಕ ದೇಶವನ್ನು ಸ್ವಚ್ಛಗೊಳಿಸುವಲ್ಲಿ ಕೈಜೋಡಿಸಬೇಕೆಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಟಿ.ಪಾರ್ವತಮ್ಮ ಅಧ್ಯಕ್ಷ ತೆ ವಹಿಸಿದ್ದರು. ಕಾರ್ಯಕ್ರಮಾಧಿಕಾರಿ ಡಾ.ಬಾಲಕೃಷ್ಣ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ವಿದ್ವಾನ್‌ ಮಂಜುನಾಥ ಭಟ್‌, ಎನ್‌.ಮಂಜುಳಾ, ವಿದ್ಯಾ, ತೇಜಸ್ವಿನಿ, ಕೆ.ಎಸ್‌.ಪೂಜಾ ಮತ್ತಿತರರು ಇದ್ದರು.

--------
ಮನುಷ್ಯನಿಗೆ ಉಸಿರು ಹೇಗೆ ಅವಶ್ಯಕತೆಯೋ ರಕ್ತವೂ ಅಷ್ಟೇ ಅವಶ್ಯಕ. ಇನ್ನೊಬ್ಬರ ಜೀವ ಉಳಿಸಲು ರಕ್ತ ಗುಂಪಿನ ತಿಳುವಳಿಕೆ ಮಹತ್ವದ ಪಾತ್ರ ವಹಿಸುತ್ತದೆ. ಯುವಜನತೆ ಹೆಚ್ಚಾಗಿ ರಕ್ತದಾನಕ್ಕೆ ಮುಂದಾದರೆ ಮಾತ್ರ ರಕ್ತದ ಕೊರತೆ ನೀಗಿಸಬಹುದು.
- ಧರಣೇಂದ್ರ ದಿನಕರ, ಸಂಜೀವಿನಿ ರಕ್ತ ನಿಧಿ ಕೇಂದ್ರ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ