ಆ್ಯಪ್ನಗರ

15ರಂದು ತೆರೆಗೆ ‘ಅಮ್ಮ ಐ ಲವ್‌ ಯು’

ದ್ವಾರಕೀಶ್‌ ಪ್ರೊಡಕ್ಷನ್ಸ್‌ 51ನೇ ಅಮ್ಮ ಐ ಲವ್‌ ಯು ಚಿತ್ರ ಜೂ.15ರಂದು ರಾಜ್ಯಾದ್ಯಂತ 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಚಿತ್ರದ ನಿರ್ದೇಶಕ ಕೆ.ಎಂ.ಚೈತನ್ಯ ಹೇಳಿದರು.

Vijaya Karnataka 7 Jun 2018, 5:00 am
ಶಿವಮೊಗ್ಗ: ದ್ವಾರಕೀಶ್‌ ಪ್ರೊಡಕ್ಷನ್ಸ್‌ 51ನೇ ಅಮ್ಮ ಐ ಲವ್‌ ಯು ಚಿತ್ರ ಜೂ.15ರಂದು ರಾಜ್ಯಾದ್ಯಂತ 150 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಚಿತ್ರದ ನಿರ್ದೇಶಕ ಕೆ.ಎಂ.ಚೈತನ್ಯ ಹೇಳಿದರು.
Vijaya Karnataka Web releasing film mother i love you on 15th
15ರಂದು ತೆರೆಗೆ ‘ಅಮ್ಮ ಐ ಲವ್‌ ಯು’


ಸುದ್ದಿಗೋಷ್ಠಿಯಲ್ಲಿ ಬುಧವಾರ ಅವರು ಮಾತನಾಡಿ, ಇದೊಂದು ಕಮರ್ಷಿಯಲ್‌ ಹಾಗೂ ತಾಯಿ ಮಗುವಿನ ಮಹತ್ವ ಸಾರುವ ಚಿತ್ರವಾಗಿದ್ದು, ಕುಟುಂಬ ಸಮೇತರಾಗಿ ನೋಡಬಹುದು ಎಂದರು.

ಚಿತ್ರದ ನಾಯಕ ನಟನಾಗಿ ಚಿರಂಜೀವಿ ಸರ್ಜ, ನಾಯಕಿಯಾಗಿ ನಿಶ್ವಿಕಾ ನಾಯ್ಡು, ತಾಯಿ ಪಾತ್ರದಲ್ಲಿ ನಟಿ ಸಿತಾರಾ ನಟಿಸಿದ್ದಾರೆ. ಗುರುಕಿರಣ್‌ ಸಂಗೀತ ನೀಡಿದ್ದು, 5 ಹಾಡುಗಳು ಚಿತ್ರದಲ್ಲಿವೆ. ಅಮ್ಮನ ಕುರಿತ ಹಾಡು ಈಗಾಗಲೇ ಪ್ರಸಿದ್ಧವಾಗಿದೆ ಎಂದರು.

ದ್ವಾರಕೀಶ್‌ ಚಿತ್ರದಲ್ಲಿ ತಾವು, ಚಿರು ಹಾಗೂ ದ್ವಾರಕೀಶ್‌ ಮಗ ಯೋಗೀಶ್‌ ಸೇರಿ ರಚಿಸಿದ ಮೂರನೇ ಚಿತ್ರ ಇದಾಗಿದೆ. ಆಟಗಾರ, ಆಕೆ ಹಾಗೂ ಅಮ್ಮ ಐ ಲವ್‌ ಯು ಈ ಮೂರು ಚಿತ್ರಗಳು ಇದೇ ಬ್ಯಾನರ್‌ ಅಡಿ ಬಿಡುಗಡೆ ಆಗಿದ್ದವು. ಪ್ರೇಕ್ಷ ಕರು ಸಿನಿಮಾ ನೋಡುವ ಮೂಲಕ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು. ಚಿತ್ರಕ್ಕೆ ಶೇಖರ್‌ ಚಂದ್ರು ಅವರ ಛಾಯಾಗ್ರಹಣ, ಎಂ.ಎನ್‌. ವಿಶ್ವ ಚಿತ್ರದ ಸಂಕಲನ ಮಾಡಿದ್ದಾರೆ. ಉಳಿದಂತೆ ಪ್ರಕಾಶ್‌ ಬೆಳವಾಡಿ, ಗಿರಿ ದ್ವಾರಕೀಶ್‌, ಚಿಕ್ಕಣ್ಣ, ಬಿರಾದಾರ್‌, ರವಿಕಾಳೆ ತಾರಾಗಣದಲ್ಲಿದ್ದಾರೆ ಎಂದರು. ಗೋಷ್ಠಿಯಲ್ಲಿ ಚಿರಂಜೀವಿ ಸರ್ಜಾ ಹಾಗೂ ನಾಯಕಿ ನಿಶ್ವಿಕಾ ನಾಯ್ಡು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ