ಆ್ಯಪ್ನಗರ

ಕಾರ್ಮಿಕ ಕಾನೂನು ನೀತಿ ಜಾರಿಗೆ ಆಗ್ರಹ

ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ಆಡಳಿತ ಖಂಡಿಸಿ ಜಿಲ್ಲಾಅಸಂಘಟಿತ ಕಾರ್ಮಿಕ ಕಾಂಗ್ರೆಸ್‌ ಸಮಿತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

Vijaya Karnataka 26 Nov 2019, 5:00 am
ಶಿವಮೊಗ್ಗ: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ಆಡಳಿತ ಖಂಡಿಸಿ ಜಿಲ್ಲಾಅಸಂಘಟಿತ ಕಾರ್ಮಿಕ ಕಾಂಗ್ರೆಸ್‌ ಸಮಿತಿಯಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
Vijaya Karnataka Web request for enforcement of labor law policy
ಕಾರ್ಮಿಕ ಕಾನೂನು ನೀತಿ ಜಾರಿಗೆ ಆಗ್ರಹ


ಅಸಂಘಟಿತ ಕಾರ್ಮಿಕರಿಗೆ ನೀಡಿರುವ ಭರವಸೆ ಈಡೇರಿಸುವಲ್ಲಿಪ್ರಧಾನಿ ನರೇಂದ್ರ ಮೋದಿ ವಿಫಲರಾಗಿದ್ದಾರೆ. ಕಾರ್ಮಿಕರ ಪ್ರಗತಿಗೆ ಶ್ರಮಿಸುವುದಾಗಿ ಸುಳ್ಳು ಭರವಸೆ ನೀಡಿರುವ ಪ್ರಧಾನಿ ಇಲ್ಲಿಯವರೆಗೆ ಏನನ್ನು ಮಾಡದೇ ಅಸಂಘಟಿತ ಕಾರ್ಮಿಕರಿಗೆ ಮೋಸಮಾಡಿದ್ದಾರೆ ಎಂದು ಆರೋಪಿಸಿದರು.

ಮೇಕ್‌ ಇನ್‌ ಇಂಡಿಯಾ ಹಾಗೂ ಕೌಶಲ್ಯಧಾರಿತ ಯೋಜನೆಗಳು ಯುವಕರಿಗೆ ಉದ್ಯೋಗ ನೀಡುವಲ್ಲಿವಿಫಲವಾಗಿವೆ. ಕೂಲಿ ಕಾರ್ಮಿಕರು ಗುಳೆಹೋಗುವುದು ಇನ್ನೂ ನಿಂತಿಲ್ಲ. ಹೀಗಾಗಿ, ಕಾರ್ಮಿಕ ಮಂಡಳಿ ಮಾದರಿಯಲ್ಲಿಅಸಂಘಟಿತ ಕಾರ್ಮಿಕರ ಮಂಡಳಿ ಸ್ಥಾಪಿಸಿ 1 ಸಾವಿರ ಕೋಟಿ ರೂ. ಮಂಡಳಿಗೆ ನೀಡಬೇಕು. ಅಸಂಘಟಿತ ಕಾರ್ಮಿಕರಿಗೆ ಅನುಕೂಲವಾಗುವ ಕಾರ್ಮಿಕ ಕಾನೂನು ಜಾರಿಗೆ ತರುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿಪ್ರಮುಖರಾದ ಎಂ.ಮುಕುಂದನ್‌, ರಾಜ್ಯ ಕಾರ್ಯದರ್ಶಿ ಬಿ.ಸಿ.ನಾಗರಾಜು, ನಾಗಭೂಷನ್‌, ನಿರಂಜನ್‌, ಕಿರಣ್‌ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ