ಆ್ಯಪ್ನಗರ

ಆಕ್ರಮಿಸಿದ ಜಮೀನು ಬಿಟ್ಟುಕೊಡಲು ಆಗ್ರಹ

ಲಂಬಾಣಿ ಜನಾಂಗದವರಿಗೆ ಸೇರಿದ ಜಮೀನನ್ನು ಅಕ್ರಮವಾಗಿ ಪ್ರಭಾವಿಗಳು ತಮ್ಮ ಖಾತೆಗೆ ಮಾಡಿಸಿಕೊಂಡಿದ್ದು, ಕೂಡಲೇ ಬಿಟ್ಟುಕೊಡುವಂತೆ ಆಗ್ರಹಿಸಿ ಕದಂಬ ಕನ್ನಡ ವೇದಿಕೆಯವರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

Vijaya Karnataka 22 Aug 2019, 5:00 am
ಶಿವಮೊಗ್ಗ : ಲಂಬಾಣಿ ಜನಾಂಗದವರಿಗೆ ಸೇರಿದ ಜಮೀನನ್ನು ಅಕ್ರಮವಾಗಿ ಪ್ರಭಾವಿಗಳು ತಮ್ಮ ಖಾತೆಗೆ ಮಾಡಿಸಿಕೊಂಡಿದ್ದು, ಕೂಡಲೇ ಬಿಟ್ಟುಕೊಡುವಂತೆ ಆಗ್ರಹಿಸಿ ಕದಂಬ ಕನ್ನಡ ವೇದಿಕೆಯವರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
Vijaya Karnataka Web SMR-21ganesh2


ನಗರ ವ್ಯಾಪ್ತಿಗೊಳಪಡುವ ಮಲ್ಲಿಗೇನಹಳ್ಳಿ ಗ್ರಾಮದ ವಿವಿಧ ಸ.ನಂ.ಗಳಲ್ಲಿ 163.37 ಎಕರೆ ಮಂಜೂರಾತಿ ಜಮೀನು ಇದ್ದು, ಇದನ್ನು ಕಾನೂನುಬಾಹಿರವಾಗಿ ಪ್ರಭಾವಿಗಳು ಖರೀದಿಸಿ ಖಾತೆ ಮಾಡಿಸಿಕೊಂಡಿದ್ದಾರೆ. ಮಂಜೂರಾದ ಜಮೀನನ್ನು ಯಾರೂ ಖರೀದಿಸುವಂತಿಲ್ಲ. ಆದರೆ, ಪ್ರಭಾವಿಗಳು ಖರೀದಿಸಿ ಕ್ರಯಪತ್ರದ ಮೇರೆಗೆ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಕೃಷಿ ಭೂಮಿ ಹೊಂದಿದವರು ಮಾತ್ರ ಜಮೀನನ್ನು ಖರೀದಿಸಬಹುದು. ಆದರೆ, ಪ್ರಭಾವಿಗಳು ಕೃಷಿ ಭೂಮಿ ಹೊಂದದೇ ಲಂಬಾಣಿ ಜನಾಂಗಕ್ಕೆ ಸೇರಿದ ಜಮೀನನ್ನು ಖರೀದಿಸಿದ್ದಾರೆ. ಈ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ಕೇಸು ದಾಖಲಿಸಲಾಗಿದೆ. ಅಲ್ಲದೇ ಜಿಲ್ಲಾಧಿಕಾರಿಗಳು ಖಾತೆ ಬದಲಾವಣೆಗೆ ಆದೇಶ ನೀಡಿರುತ್ತಾರೆ. ಆದರೂ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆಕ್ರಮಿಸಿದ ಜಮೀನನ್ನು ಕೂಡಲೇ ಜಿಲ್ಲಾಧಿಕಾರಿಯವರು ಮರಳಿ ಲಂಬಾಣಿ ಜನಾಂಗದವರಿಗೆ ಕೊಡಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ವೇದಿಕೆಯ ವಿಶ್ವನಾಥ ಗೌಡ, ನಿರಂಜನ್‌, ಶಿವಣ್ಣ, ಚಂದ್ರು, ನಂಜುಂಡಪ್ಪ, ಸುಂಕಪ್ಪ, ಸುರೇಶ, ರಾಘವೇಂದ್ರ, ಕಿರಣ, ಮಂಜಾನಾಯ್ಕ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ