ಆ್ಯಪ್ನಗರ

28ರಿಂದ ಕಾಲುಬಾಯಿ ರೋಗ ನಿರೋಧಕ ಲಸಿಕೆ

ಜಾನುವಾರುಗಳನ್ನು ಕಾಡುವ ಕಾಲುಬಾಯಿ ರೋಗ ಬರದಂತೆ ತಡೆಗಟ್ಟಲು ವರ್ಷಕ್ಕೆ ಎರಡು ಬಾರಿ ಲಸಿಕೆ ಹಾಕುವುದೇ ಮದ್ದು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಹೇಳಿದರು.

Vijaya Karnataka 26 Jan 2019, 5:00 am
ಶಿವಮೊಗ್ಗ: ಜಾನುವಾರುಗಳನ್ನು ಕಾಡುವ ಕಾಲುಬಾಯಿ ರೋಗ ಬರದಂತೆ ತಡೆಗಟ್ಟಲು ವರ್ಷಕ್ಕೆ ಎರಡು ಬಾರಿ ಲಸಿಕೆ ಹಾಕುವುದೇ ಮದ್ದು ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್‌ ಹೇಳಿದರು.
Vijaya Karnataka Web resistance injection from 28th
28ರಿಂದ ಕಾಲುಬಾಯಿ ರೋಗ ನಿರೋಧಕ ಲಸಿಕೆ


ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಕಾಲುಬಾಯಿ ರೋಗ ತಡೆಗಟ್ಟುವ ಸಲುವಾಗಿ ಜ.28ರಿಂದ ಫೆಬ್ರವರಿ 16ರವರೆಗೆ ಜಾನುವಾರುಗಳಿಗೆ ಕಾಲುಬಾಯಿ ರೋಗ ನಿರೋಧಕ ಲಸಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಜಾನುವಾರು ಗಣತಿ ಪ್ರಕಾರ ಜಿಲ್ಲೆಯಲ್ಲಿ ಅಂದಾಜು 6.65ಲಕ್ಷ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಗುರಿ ಹೊಂದಲಾಗಿದೆ. ಕಳೆದ ವರ್ಷ ಶೇ.95ರಷ್ಟು ಜಾನುವಾರುಗಳಿಗೆ ಲಸಿಕೆ ಹಾಕಿಸಲಾಗಿತ್ತು. ಈ ಬಾರಿಯೂ ಲಸಿಕೆ ಕಾರ್ಯಕ್ರಮ ಮುಂದುವರಿಸಲಾಗಿದೆ. ಕಾಲುಬಾಯಿ ರೋಗ ಬಂದರೆ ಜಾನುವಾರುಗಳಲ್ಲಿ ಹಾಲಿನ ಪ್ರಮಾಣ ಕಡಿತ, ಸೋಂಕು ಇತ್ಯಾದಿ ಕಾಣಿಸಿಕೊಳ್ಳುತ್ತದೆ. ರೋಗ ಹೆಚ್ಚಾದರೆ ಜಾನುವಾರುಗಳು ಸಾವಿಗೀಡಾಗುವ ಸಾಧ್ಯತೆಯೂ ಇರುತ್ತದೆ. ಈ ರೋಗ ಒಂದು ಜಾನುವಾರಿನಿಂದ ಇನ್ನೊಂದಕ್ಕೆ ಹರಡುವ ಸಾಧ್ಯತೆಯೂ ಇದೆ. ಹೀಗಾಗಿ ರೈತರು ತಪ್ಪದೇ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿಕೊಳ್ಳಬೇಕೆಂದರು.

ಈ ಬಾರಿ ಒಟ್ಟು 420 ಸಿಬ್ಬಂದಿ ಒಳಗೊಂಡ ಪಶುವೈದ್ಯರ 43 ತಂಡಗಳನ್ನು ರಚಿಸಲಾಗಿದ್ದು, ಪ್ರತಿ ತಂಡದಲ್ಲಿ 4 ರಿಂದ 5 ಜನ ಲಸಿಕಾದಾರರಿದ್ದು, ಪಶುವೈದ್ಯರು ತಂಡದ ಮುಖ್ಯಸ್ಥರಾಗಿರುತ್ತಾರೆ. ಪಲ್ಸ್‌ ಪೋಲಿಯೊ ಮಾದರಿಯಲ್ಲಿ ಗ್ರಾಮ ಮಟ್ಟದಲ್ಲಿ ಮನೆ ಮನೆ ಭೇಟಿ ಮೂಲಕ ಲಸಿಕೆ ಹಾಕಿಸಲಾಗುವುದು. ಗರ್ಭ ಧರಿಸಿರುವ ಜಾನುವಾರುಗಳು, ತೀರಾ ನಿಶ್ಯಕ್ತವಾಗಿರುವ ಜಾನುವಾರುಗಳನ್ನು ಹೊರತುಪಡಿಸಿ ಇತರೆಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕೆಂದರು.

ರೋಗ ಗ್ರಸ್ತ ರಾಸುಗಳಲ್ಲಿ ಮೊದಲಿಗೆ 104 ರಿಂದ 106 ಎಫ್‌ ಜ್ವರ ಕಾಣಿಸುತ್ತದೆ. ಮೇವು ತಿನ್ನದೆ ಇರುವುದು, ಕುಂಟುವುದು, ಬಾಯಿಯಲ್ಲಿ ಚಿಕ್ಕ ಚಿಕ್ಕ ನೀರುಗುಳ್ಳೆಯಾಗಿ ಮೇಲಿನ ಪದರವೇ ಕಿತ್ತು ಬರುವುದು, ಕಾಲಿನ ಗೊರಸಿನ ಮಧ್ಯೆ ಹುಣ್ಣುಗಳಾಗುವುದು ಹಾಗೂ ಹಾಲು ಕಡಿಮೆಯಾಗುವುದು ರೋಗದ ಲಕ್ಷ ಣಗಳಾಗಿವೆ ಎಂದರು.


ಲಸಿಕಾ ತಂಡವು ಹಳ್ಳಿಗಳಿಗೆ ಭೇಟಿ ನೀಡಲು ಸುಮಾರು 31 ವಾಹನಗಳ ವ್ಯವಸ್ಥೆ ಮಾಡಿದ್ದು, ಲಸಿಕಾ ಕಾರ್ಯಕ್ರಮದ ಬ್ಯಾನರ್‌, ಪೋಸ್ಟರ್ಸ್‌ ಮತ್ತು ಕರಪತ್ರ ಬಳಸಲಾಗುವುದು. ಮಾಧ್ಯಮಗಳ ಮೂಲಕ ಅರಿವು ಮೂಡಿಸಿ ಪ್ರಚಾರ ಮಾಡಲಾಗುವುದು. ಈ ನಿಟ್ಟಿನಲ್ಲಿ ಹಾಲು ಉತ್ಪಾದಕರ ಸಂಘಗಳ ಆಡಳಿತ ಮಂಡಳಿ, ಸಿಬ್ಬಂದಿ, ಗ್ರಾ.ಪಂ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳನ್ನು ತೊಡಗಿಸಿಕೊಳ್ಳಲಾಗುವುದು.

-ಕೆ.ಎ.ದಯಾನಂದ್‌ , ಜಿಲ್ಲಾಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ