ಆ್ಯಪ್ನಗರ

ಶ್ರೀಲಕ್ಷ್ಮಿನಾರಾಯಣ ದೇವರ ಪುನರ್‌ ಪ್ರತಿಷ್ಠಾಪನೆ

ತಾಲೂಕಿನ ನಿಟ್ಟೂರು ಸಮೀಪದ ಮಂಜಗಳಲೆ ಗ್ರಾಮದ ಹೊಸಮನೆ ಶ್ರೀ ಲಕ್ಷ್ಮಿನಾರಾಯಣ ದೇವಾಲಯದ ಪುನರ್‌ಪ್ರತಿಷ್ಠಾಪನಾ ಕಾರ‍್ಯಕ್ರಮ ವಿಜೃಂಭಣೆಯಿಂದ ನಡೆಯಿತು.

Vijaya Karnataka 9 Feb 2019, 5:00 am
ಹೊಸನಗರ: ತಾಲೂಕಿನ ನಿಟ್ಟೂರು ಸಮೀಪದ ಮಂಜಗಳಲೆ ಗ್ರಾಮದ ಹೊಸಮನೆ ಶ್ರೀ ಲಕ್ಷ್ಮಿನಾರಾಯಣ ದೇವಾಲಯದ ಪುನರ್‌ಪ್ರತಿಷ್ಠಾಪನಾ ಕಾರ‍್ಯಕ್ರಮ ವಿಜೃಂಭಣೆಯಿಂದ ನಡೆಯಿತು.
Vijaya Karnataka Web SMR-7HOSP6


ಉತ್ಸವದ ಅಂಗವಾಗಿ ಗುರುವಾರ ಶ್ರೀ ಲಕ್ಷ್ಮಿನಾರಾಯಣ ದೇವರ ಪ್ರತಿಷ್ಠಾಪನೆ, ಗ್ರಹಮುಖ ಪೂರ್ವ ಪ್ರತಿಷ್ಠಾ ಹವನ, ನಿರೀಕ್ಷೆ ತತ್ವ ಕಲಾಹೋಮ, ಪೂರ್ಣಾಹುತಿ, ಮಹಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ‍್ಯಕ್ರಮ ನಡೆದವು. ಪ್ರಧಾನ ಅರ್ಚಕ ಲಕ್ಷ್ಮಿನಾರಾಯಣಭಟ್‌ ಪೌರೋಹಿತ್ಯ ವಹಿಸಿದ್ದು, ಸುತ್ತಮುತ್ತಲ ಗ್ರಾಮಸ್ಥರು ಕಾರ‍್ಯಕ್ರಮದಲ್ಲಿ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡರು. ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ಕಿಮ್ಮನೆ ಭೇಟಿ:
ಮಾಜಿ ಸಚಿವ ಕಿಮ್ಮನೆ ರತ್ನಾಕರ ಈ ಧಾರ್ಮಿಕ ಉತ್ಸವದಲ್ಲಿ ಪಾಲ್ಗೊಂಡು ದೇವಾಲಯ ಅಭಿವೃದ್ಧಿಗೆ ಸಹಕರಿಸುವುದಾಗಿ ತಿಳಿಸಿದರು. ದೇವಾಲಯ ಸಮಿತಿಯಿಂದ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಈ ವೇಳೆ ಸಮಿತಿ ಪದಾಧಿಕಾರಿಗಳಾದ ಎಂ.ಎಸ್‌.ಕೃಷ್ಣಮೂರ್ತಿ, ಎಸ್‌.ಎನ್‌.ರವೀಶ್‌, ಗಿರಿರಾಜ ಕಾಶಿ, ಪ್ರಮುಖರಾದ ರಾಮಚಂದ್ರ ಶಂಭು, ಚಂದ್ರಶೇಖರ, ರಾಘವೇಂದ್ರ ಆಚಾರ್‌, ಸತ್ಯನಾರಾಯಣ, ಮೂಕಾಂಬಿಕ, ಕೊಲ್ಲೂರಪ್ಪ, ಶಿವರಾಮ ಶೆಟ್ಟಿ, ಎಚ್‌.ವಿ.ರವೀಂದ್ರ, ದೊಡ್ಮನೆ ಲಕ್ಷ್ಮಿನಾರಾಯಣ, ಎ.ಒ.ರಾಮಚಂದ್ರ, ಗಿರೀಶ್‌ ಕಟ್ಟಿನಹೊಳೆ, ಗೋಪಾಲ, ಚಂದ್ರಶೇಖರ ಶೆಟ್ಟಿ, ಮೋಹನಶೆಟ್ಟಿ, ಗೋಪಾಲಶೆಟ್ಟಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ