ಆ್ಯಪ್ನಗರ

ಶಾಸಕ ಹಾಲಪ್ಪರಿಂದ ದ್ವೇಷದ ರಾಜಕಾರಣ: ಆರೋಪ

ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಗಳು ಜಯಶಾಲಿಯಾಗಲಿದ್ದು, ಆಡಳಿತದ ಚುಕ್ಕಾಣಿ ಹಿಡಿಯುವುದರಲ್ಲಿ ಸಂಶಯವಿಲ್ಲ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ಜಿ.ನಾಗರಾಜ ಹೇಳಿದರು.

Vijaya Karnataka 31 May 2019, 5:00 am
ಹೊಸನಗರ : ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಗಳು ಜಯಶಾಲಿಯಾಗಲಿದ್ದು, ಆಡಳಿತದ ಚುಕ್ಕಾಣಿ ಹಿಡಿಯುವುದರಲ್ಲಿ ಸಂಶಯವಿಲ್ಲ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಿ.ಜಿ.ನಾಗರಾಜ ಹೇಳಿದರು.
Vijaya Karnataka Web revange politics from halappa allegation
ಶಾಸಕ ಹಾಲಪ್ಪರಿಂದ ದ್ವೇಷದ ರಾಜಕಾರಣ: ಆರೋಪ


ಇಲ್ಲಿನ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 11 ವಾರ್ಡ್‌ಗಳ ಪೈಕಿ ಎಲ್ಲ ವಾರ್ಡ್‌ಗಳಲ್ಲಿಯೂ ಗೆಲುವು ಸಾಧಿಸುವ ಉದ್ದೇಶದಿಂದ ಶ್ರಮವಹಿಸಲಾಗಿದ್ದು, ಮೈತ್ರಿಕೂಟ ಜಯ ಸಾಧಿಸಲಿದೆ. ಕಾಂಗ್ರೆಸ್‌ನ 6 ಮತ್ತು ಜೆಡಿಎಸ್‌ನ 5 ಅಭ್ಯರ್ಥಿಗಳು ಜಯಶಾಲಿಯಾಗುವ ವಿಶ್ವಾಸವಿದೆ. ಸ್ಪಷ್ಟ ಬಹುಮತದೊಂದಿಗೆ ಪಟ್ಟಣ ಪಂಚಾಯಿತಿ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದ ಅವರು, ಶಾಂತಿಯುತ ಮತದಾನ ನಡೆಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಶಾಸಕ ಹರತಾಳು ಹಾಲಪ್ಪ ಅವರು ಪ್ರಚಾರದ ವೇಳೆ ಮೈತ್ರಿಕೂಟದ ಅಭ್ಯರ್ಥಿಗಳ ವೈಯಕ್ತಿಕ ವಿಷಯಗಳನ್ನು ಟೀಕಿಸಿದ್ದರು. ಪಕ್ಷ ಸಿದ್ಧಾಂತದ ಮೇಲೆ ನಡೆಯುವ ಚುನಾವಣೆಗಳಲ್ಲಿ ಇಂತಹ ದ್ವೇಷಭಾವನೆ ಬಿತ್ತುವುದು ಶಾಸಕರ ಘನತೆಗೆ ಶೋಭೆ ತರುವುದಿಲ್ಲ. ಹೊಸನಗರದಲ್ಲಿ ಎಲ್ಲ ಪಕ್ಷ ದ ಮುಖಂಡರು ಪರಸ್ಪರ ರಾಜಕೀಯ ಹೊರತಾದ ಸೌಹಾರ್ದತೆ ಹೊಂದಿದ್ದಾರೆ. ಇಂತಹ ವಾತಾವರಣವನ್ನು ಹಾಳುಗೆಡವಲು ಶಾಸಕ ಹಾಲಪ್ಪ ಅವರು ಮುಂದಾಗಿದ್ದಾರೆ ಎಂದು ಆಪಾದಿಸಿದರು. ಮೈತ್ರಿಕೂಟದ ಅಭ್ಯರ್ಥಿಗಳು ಯಾರ ವಿರುದ್ಧವೂ ವ್ಯಕ್ತಿಗತ ಟೀಕೆ ಮಾಡದೇ ಅಭಿವೃದ್ಧಿಯ ವಿಷಯಗಳನ್ನು ಮುಂದಿಟ್ಟು ಚುನಾವಣೆ ಎದುರಿಸಿದ್ದಾರೆ. ಜನತೆ ಇವರನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.

ಗೋಷ್ಠಿಯಲ್ಲಿ ಪಕ್ಷ ದ ಪ್ರಧಾನ ಕಾರ್ಯದರ್ಶಿ ಡಿ.ಎಂ.ಸದಾಶಿವ, ಮುಖಂಡರಾದ ಶ್ರೀನಿವಾಸ ಕಾಮತ್‌, ಎಚ್‌. ಮಹಾಬಲರಾವ್‌, ತಾ.ಪಂ ಸದಸ್ಯ ಏರಿಗೆ ಉಮೇಶ್‌, ಎಂ.ಪಿ.ಸುರೇಶ್‌, ಕಟ್ಟೆ ಸುರೇಶ್‌, ಅಶ್ವಿನಿಕುಮಾರ್‌, ನಾಸೀರ್‌, ಜಯನಗರ ಗುರು, ಸಿಂಥಿಯಾ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ