ಆ್ಯಪ್ನಗರ

ಶರಾವತಿ ತಟದಿಂದ ಜಿಲ್ಲಾ ಕೇಂದ್ರದ ವರೆಗೆ ಬೈಕ್‌ ರಾಲಿ

ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಯೋಜನೆ ಕುರಿತು ಡಿಪಿಆರ್‌ ತಯಾರಿಸಲು ಸರಕಾರ ನೀಡಿರುವ ಆದೇಶ ಕೂಡಲೇ ರದ್ದುಪಡಿಸಬೇಕು ಎಂದು ಮಾಜಿ ಶಾಸಕ ಬಿ.ಸ್ವಾಮಿರಾವ್‌ ಆಗ್ರಹಿಸಿದ್ದಾರೆ.

Vijaya Karnataka 10 Jul 2019, 5:00 am
ಹೊಸನಗರ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಯೋಜನೆ ಕುರಿತು ಡಿಪಿಆರ್‌ ತಯಾರಿಸಲು ಸರಕಾರ ನೀಡಿರುವ ಆದೇಶ ಕೂಡಲೇ ರದ್ದುಪಡಿಸಬೇಕು ಎಂದು ಮಾಜಿ ಶಾಸಕ ಬಿ.ಸ್ವಾಮಿರಾವ್‌ ಆಗ್ರಹಿಸಿದ್ದಾರೆ.
Vijaya Karnataka Web BNG-SMR-9HOSP1


ಶರಾವತಿ ಯೋಜನೆ ವಿರೋಧಿಸಿ ಹೊಸನಗರ ಹಿತರಕ್ಷ ಣಾ ವೇದಿಕೆ ಹಾಗೂ ಇನ್ನಿತರ ಸಂಘಸಂಸ್ಥೆಯ ಯುವ ಕಾರ‍್ಯಕರ್ತರು ಮಂಗಳವಾರ ಜಯನಗರ ಸಮೀಪದ ಶರಾವತಿ ತಟದಿಂದ ಶಿವಮೊಗ್ಗದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಏರ್ಪಡಿಸಿದ್ದ ಬೈಕ್‌ ರಾರ‍ಯಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕಾರ‍್ಯಸಾಧುವಲ್ಲದ ಯೋಜನೆ ಜಾರಿಗೊಳಿಸಿ ಮಲೆನಾಡಿನ ಜನತೆಯನ್ನು ಮತ್ತೊಮ್ಮೆ ಸಂತ್ರಸ್ತರನ್ನಾಗಿಸಲು ಸರಕಾರ ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾರ‍ಯಲಿ ನೇತೃತ್ವ ವಹಿಸಿದ್ದ ಮೂಲೆಗದ್ದೆ ಮಠದ ಶ್ರೀಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿ, ಶರಾವತಿ ನೀರನ್ನು ಹರಿಸಲು ಯಾವ ಕಾರಣಕ್ಕೂ ಬಿಡುವುದಿಲ್ಲ. ಮುಂದಿನ ದಿನಗಳಲ್ಲಿ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ. ಈ ವಿಷಯದಲ್ಲಿ ಮಲೆನಾಡಿನ ಜನತೆ ಒಗ್ಗಟ್ಟಾಗಿದ್ದಾರೆ ಎಂದರು.

ಗರ್ತಿಕೆರೆ ಮಠದ ಶ್ರೀರೇಣುಕಾನಂದ ಸ್ವಾಮೀಜಿ ರಾರ‍ಯಲಿಗೆ ಶುಭ ಕೋರಿದರು. ಪ್ರಮುಖರಾದ ಎಂ.ವಿ.ಜಯರಾಂ, ಬಿ.ಎಸ್‌.ಸುರೇಶ್‌, ಅಂಬ್ರಯಮಠ, ಮಾರ್ಷಲ್‌ ಷರಾಂ, ಎನ್‌.ಆರ್‌.ದೇವಾನಂದ, ಎ.ವಿ.ಮಲ್ಲಿಕಾರ್ಜುನ, ಸುಧೀಂದ್ರ ಭಂಡಾರ್ಕರ್‌, ಏಸು ಪ್ರಕಾಶ್‌, ನಾರಾಯಣ ಕಾಮತ್‌, ಗಿರೀಶ್‌, ಪೂರ್ಣೇಶಗೌಡ, ವೇದಿಕೆ ಅಧ್ಯಕ್ಷ ಪ್ರಶಾಂತ ಹಳಗುಂದ, ಪದಾಧಿಕಾರಿಗಳಾದ ಅಭಿಲಾಷ್‌, ಕಚ್ಚಿಗೆಬೈಲು ಶಾಬುದ್ದೀನ್‌, ಮಹೇಶ್‌ ಜೋಗಿ, ಮುರಳಿಧರ್‌, ವಿನಯ್‌, ಅಶೋಕ ಮುಂಬಾರು, ಅನ್ವರ್‌ ಸಿದ್ದಿಕ್‌, ದೀಪಕ್‌ ಸ್ವರೂಪ್‌, ಹರ್ಷ ಮತ್ತಿತರರು ಪಾಲ್ಗೊಂಡಿದ್ದರು. ಸುಮಾರು 150ಕ್ಕೂ ಹೆಚ್ಚು ಬೈಕ್‌ ಸವಾರರು ರಾರ‍ಯಲಿಯಲ್ಲಿ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ