ಆ್ಯಪ್ನಗರ

ಶರಾವತಿ ಉಳಿಸದಿದ್ದರೆ ಭವಿಷ್ಯದಲ್ಲಿ ಅಪಾಯ

ಆಳುವವರಿಗೆ ವೈಜ್ಞಾನಿಕ ಹಾಗೂ ವಾಸ್ತವ ಸಂಗತಿಗಳ ತಿಳಿವಳಿಕೆ ಅಗತ್ಯ. ಪ್ರಕೃತಿಯಲ್ಲಿ ವ್ಯರ್ಥ ಎನ್ನುವ ಸಂಗತಿಗಳಿಲ್ಲ ಎನ್ನುವ ಪ್ರಾಥಮಿಕ ತಿಳಿವಳಿಕೆ ನಮ್ಮ ಸರಕಾರಕ್ಕೆ ಇಲ್ಲ ಎಂದು ಶರಾವತಿ ಉಳಿಸಿ ಹೋರಾಟ ಒಕ್ಕೂಟದ ಗೌರವಾಧ್ಯಕ್ಷ ಡಾ.ನಾ.ಡಿಸೋಜ ಹೇಳಿದರು.

Vijaya Karnataka 5 Jul 2019, 5:00 am
ಸಾಗರ: ಆಳುವವರಿಗೆ ವೈಜ್ಞಾನಿಕ ಹಾಗೂ ವಾಸ್ತವ ಸಂಗತಿಗಳ ತಿಳಿವಳಿಕೆ ಅಗತ್ಯ. ಪ್ರಕೃತಿಯಲ್ಲಿ ವ್ಯರ್ಥ ಎನ್ನುವ ಸಂಗತಿಗಳಿಲ್ಲ ಎನ್ನುವ ಪ್ರಾಥಮಿಕ ತಿಳಿವಳಿಕೆ ನಮ್ಮ ಸರಕಾರಕ್ಕೆ ಇಲ್ಲ ಎಂದು ಶರಾವತಿ ಉಳಿಸಿ ಹೋರಾಟ ಒಕ್ಕೂಟದ ಗೌರವಾಧ್ಯಕ್ಷ ಡಾ.ನಾ.ಡಿಸೋಜ ಹೇಳಿದರು.
Vijaya Karnataka Web SMR-03SGR10


ತಾಲೂಕಿನ ಹೆಗ್ಗೋಡಿನ ಗ್ರಾ.ಪಂ. ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ಶರಾವತಿ ನದಿ ಮೇಲೆ ನಿರಂತರವಾಗಿ ದಾಳಿಯಾಗುತ್ತಿದೆ. ಅಂಥ ದಾಳಿಗಳನ್ನು ನಿಯಂತ್ರಿಸಿ, ಶರಾವತಿ ನದಿ ಉಳಿಸಿಕೊಳ್ಳದಿದ್ದರೆ ಭವಿಷ್ಯದಲ್ಲಿ ಹತ್ತಾರು ಅಪಾಯಗಳನ್ನು ಎದುರಿಸಬೇಕಾಗುತ್ತದೆ ಎಂದರು.

ರಂಗಕರ್ಮಿ ಕೆ.ವಿ.ಅಕ್ಷ ರ ಮಾತನಾಡಿ, ಯೋಜನೆ ವಿರೋಧದ ಧ್ವನಿ, ಮಾರ್ಗ ಪ್ರಬಲವಾಗಬೇಕು ಎಂದರು.

ಕಿನ್ನರಮೇಳದ ರಂಗಕರ್ಮಿ ಕೆ.ಜಿ.ಕೃಷ್ಣಮೂರ್ತಿ, ರಂಗಕರ್ಮಿ ಚಿದಂಬರರಾವ್‌ ಜಂಬೆ, ಗ್ರಾ.ಪಂ. ಸದಸ್ಯೆ ಸುಮ ರವಿ ಮತ್ತಿತರರು ಮಾತನಾಡಿದರು.

ಗ್ರಾ.ಪಂ. ಅಧ್ಯಕ್ಷ ಶ್ರೀಧರ ಪಟೇಲ್‌, ತಾರಾಮೂರ್ತಿ, ಎಚ್‌.ಬಿ.ರಾಘವೇಂದ್ರ, ಹರ್ಷಕುಮಾರ ಕುಗ್ವೆ ಮತ್ತಿತರರು ಹಾಜರಿದ್ದರು. ಒಕ್ಕೂಟದ ಸಂಚಾಲಕ ಸದಸ್ಯ ಉಮಾಮಹೇಶ್ವರ ಹೆಗಡೆ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ