ಆ್ಯಪ್ನಗರ

ಬಂಟು ಮನೆ ಸೇತುವೆಯ ಎರಡೂ ಕಡೆ ರಸ್ತೆ ಕುಸಿತ

ಧಾರಾಕಾರ ಮಳೆಗೆ ಎಲ್ಲ ಹೊಳೆ, ಹಳ್ಳ ಉಕ್ಕಿ ಹರಿದು ಸಾಕಷ್ಟು ಅನಾಹುತ ಸೃಷ್ಟಿಸಿದೆ. ಸಮೀಪದ ಯಡೇಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಬಂಟುಮನೆ ಗ್ರಾಮದ ಹೊಳೆ ಸೇತುವೆಯ ಎರಡೂ ಕಡೆ ರಸ್ತೆ ಸಂಪರ್ಕ ಕುಸಿತವಾಗಿದೆ.

Vijaya Karnataka 13 Aug 2019, 5:00 am
ಆನಂದಪುರಂ: ಧಾರಾಕಾರ ಮಳೆಗೆ ಎಲ್ಲ ಹೊಳೆ, ಹಳ್ಳ ಉಕ್ಕಿ ಹರಿದು ಸಾಕಷ್ಟು ಅನಾಹುತ ಸೃಷ್ಟಿಸಿದೆ. ಸಮೀಪದ ಯಡೇಹಳ್ಳಿ ಗ್ರಾ.ಪಂ.ವ್ಯಾಪ್ತಿಯ ಬಂಟುಮನೆ ಗ್ರಾಮದ ಹೊಳೆ ಸೇತುವೆಯ ಎರಡೂ ಕಡೆ ರಸ್ತೆ ಸಂಪರ್ಕ ಕುಸಿತವಾಗಿದೆ.
Vijaya Karnataka Web SMR-12ANPP6 BANTUMANE

ನವಟೂರು ಹೊಳೆ ಬಂಟು ಮನೆ ಮೂಲಕ ಇರುವಕ್ಕಿ ಕಡೆಗೆ ಸಾಗಿ ನಂದಿಹೊಳೆ ಸೇರುತ್ತದೆ. ಈ ಹೊಳೆ ಪ್ರವಾಹದ ಜತೆಗೆ ಹೊಳೆ ದಡದ ಮರ ಬುಡ ಸಹಿತ ತೇಲಿ ಹೋಗಿದ್ದು ಸೇತುವೆಗೆ ಅಪ್ಪಳಿಸಿದೆ. ಸೇತುವೆ ಮೇಲೆ ಸುಮಾರು 4 ಅಡಿಯಷ್ಟು ಎತ್ತರಕ್ಕೆ ಪ್ರವಾಹ ಹರಿದಿದೆ. 2018ರಲ್ಲಿ ಯಡೇಹಳ್ಳಿಯ ಶಿಮೂಲ್‌ ಹಾಲಿನ ಶಿಥಲೀಕರಣ ಘಟಕದ ತಿರುವಿನಿಂದ ಬಂಟುಮನೆ, ಕರಡಿಮನೆ ಮೂಲಕ ಇರುವಕ್ಕಿ ವರ್ತುಲ ರಸ್ತೆಗೆ ಡಾಂಬರೀಕರಣ ಮಾಡಲಾಗಿತ್ತು. ರಸ್ತೆ ನಿರ್ಮಾಣವಾದ ಒಂದೇ ವರ್ಷದಲ್ಲೇ ಈ ರಸ್ತೆಯ ಡಾಂಬರು ಕಿತ್ತು ಹೋಗಿದೆ. ಗೇರುಬೀಸು, ಬಂಟುಮನೆ, ತೋಳಿಕಲ್ಲು ಇತರ ಗ್ರಾಮಗಳ ಜನರ ನಿತ್ಯದ ಓಡಾಟಕ್ಕೆ ತೊಂದರೆ ಉಂಟಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ