ಆ್ಯಪ್ನಗರ

ಪಿಯು ಕಾಲೇಜು ನೂತನ ಕಟ್ಟಡಕ್ಕೆ 1.93 ಕೋಟಿ ರೂ.

ರಾಜ್ಯದಲ್ಲಿಯೇ ಎರಡನೇ ಅತಿ ದೊಡ್ಡ ಪದವಿಪೂರ್ವ ಸರಕಾರಿ ಕಾಲೇಜು ಎಂಬ ಹೆಗ್ಗಳಿಗೆ ಹೊಂದಿರುವ ಇಲ್ಲಿನ ಜ್ಯೂನಿಯರ್‌ ಕಾಲೇಜಿನ ನೂತನ ಕಟ್ಟಡವನ್ನು 1.93 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಉದ್ದೇಶವಿದ್ದು, ಶಾಸಕ ಎಚ್‌.ಹಾಲಪ್ಪ ಶನಿವಾರ ಸ್ಥಳ ಪರಿಶೀಲನೆ ನಡೆಸಿದರು.

Vijaya Karnataka 10 Jun 2019, 5:00 am
ಸಾಗರ : ರಾಜ್ಯದಲ್ಲಿಯೇ ಎರಡನೇ ಅತಿ ದೊಡ್ಡ ಪದವಿಪೂರ್ವ ಸರಕಾರಿ ಕಾಲೇಜು ಎಂಬ ಹೆಗ್ಗಳಿಗೆ ಹೊಂದಿರುವ ಇಲ್ಲಿನ ಜ್ಯೂನಿಯರ್‌ ಕಾಲೇಜಿನ ನೂತನ ಕಟ್ಟಡವನ್ನು 1.93 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಉದ್ದೇಶವಿದ್ದು, ಶಾಸಕ ಎಚ್‌.ಹಾಲಪ್ಪ ಶನಿವಾರ ಸ್ಥಳ ಪರಿಶೀಲನೆ ನಡೆಸಿದರು.
Vijaya Karnataka Web SMR-09sgr2


ನೂತನ ಕಾಲೇಜು ಕಟ್ಟಡದ ನೀಲನಕ್ಷೆಯನ್ನು ಕಾಲೇಜು ಆವರಣದ ಪೂರ್ವ ಹಾಗೂ ಪಶ್ಚಿಮದ ಭಾಗದಲ್ಲಿ ಅಳವಡಿಸುವಂತೆ ಜಿ.ಪಂ.ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಹಾಲೇಶಪ್ಪ ಹಾಗೂ ಜ್ಯೂನಿಯರ್‌ ಕಾಲೇಜಿನ ಪ್ರಾಂಶುಪಾಲ ಶಂಕರಮೂರ್ತಿ ಅವರಿಗೆ ಸೂಚಿಸಿದರು.

ಸರಕಾರಿ ಜ್ಯೂನಿಯರ್‌ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶಿಕ್ಷ ಣ ಇಲಾಖೆಯಿಂದ 1 ಕೋಟಿ ರೂ. ಮಂಜೂರಾಗಿದ್ದು, ನಬಾರ್ಡ್‌ನಿಂದ ರೂ 93 ಲಕ್ಷ ರೂ. ಅನುದಾನ ಲಭಿಸಿದೆ. ಟೆಂಡರ್‌ ಪ್ರಕ್ರಿಯೆ ಮುಗಿದು ಕಾಮಗಾರಿ ಆರಂಭದ ಹಂತದಲ್ಲಿದೆ.

ಸಾಮಗ್ರಿಗಳ ವಿಲೇವಾರಿ ವಿಳಂಬ:

ಜ್ಯೂನಿಯರ್‌ ಕಾಲೇಜಿನ ನೂತನ ಕಟ್ಟಡ ನಿರ್ಮಾಣಕ್ಕಾಗಿ ಹಿಂದಿನ ಕಟ್ಟಡ ತೆರವುಗೊಳಿಸಲಾಗಿದ್ದು, ಹೆಂಚುಗಳು, ಕಿಟಕಿ ಬಾಗಿಲು, ಪಕಾಶಿ ಸೇರಿದಂತೆ ಹಳೆಯ ಸಾಮಗ್ರಿಗಳನ್ನು ಇದುವರೆಗೂ ಟೆಂಡರ್‌ ಪ್ರಕ್ರಿಯೆ ಮಾಡಿ ಹರಾಜು ಹಾಕುವಂತೆ ಸೂಚಿಸಿದ್ದರೂ ಹಾಗೆಯೇ ಬಿಟ್ಟಿರುವುದಕ್ಕೆ ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಾಚಾರ‍್ಯ ಶಂಕರಮೂರ್ತಿ ಅವರು ಪ್ರತಿಕ್ರಿಯಿಸಿ, ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ ವಿಭಾಗಕ್ಕೆ ಮತ್ತು ಅರಣ್ಯ ಇಲಾಖೆಗೆ ಪತ್ರ ಬರೆದು ಇಲ್ಲಿನ ಹಳೆಯ ಕಟ್ಟಡ ಸಾಮಗ್ರಿಗಳ ಟೆಂಡರ್‌ ಪ್ರಕ್ರಿಯೆ ನಡೆಸಲು ಕ್ರಮವಹಿಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಬಿ.ಎಚ್‌.ರಾಘವೇಂದ್ರ, ನಗರಸಭೆ ಸದಸ್ಯ ಟಿ.ಡಿ.ಮೇಘರಾಜ್‌, ಕ್ಷೇತ್ರ ಶಿಕ್ಷ ಣಾಧಿಕಾರಿ ಕೆ.ಆರ್‌.ಬಿಂಬಾ, ಉಪಪ್ರಾಚಾರ್ಯೆ ಶಶಿಕಲಾ, ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಪರಮೇಶ್ವರ, ಕಿರಿಯ ಎಂಜಿನಿಯರ್‌ ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ