ಆ್ಯಪ್ನಗರ

‘ಸಂಸ್ಕೃತಿ ಕಲಿಕೆಯಿಂದ ಉದ್ಧಾರ’

ಪ್ರಾಥಮಿಕ ಶಿಕ್ಷ ಣ ಮಕ್ಕಳ ಭವಿಷ್ಯಕ್ಕೆ ಉತ್ತಮ ಬುನಾದಿ ಆಗುತ್ತದೆ ಎಂದು ಜಿ.ಪಂ. ಸದಸ್ಯೆ ಡಿ.ಆರ್‌.ರೇಖಾ ಉಮೇಶ್‌ ಹೇಳಿದರು.

Vijaya Karnataka 5 Feb 2019, 5:00 am
ಹೊಳೆಹೊನ್ನೂರು: ಪ್ರಾಥಮಿಕ ಶಿಕ್ಷ ಣ ಮಕ್ಕಳ ಭವಿಷ್ಯಕ್ಕೆ ಉತ್ತಮ ಬುನಾದಿ ಆಗುತ್ತದೆ ಎಂದು ಜಿ.ಪಂ. ಸದಸ್ಯೆ ಡಿ.ಆರ್‌.ರೇಖಾ ಉಮೇಶ್‌ ಹೇಳಿದರು.
Vijaya Karnataka Web SMR-3HHR1


ಪಟ್ಟಣದ ಭಗೀರಥ ಸಮುದಾಯ ಭವನದಲ್ಲಿ ಶನಿವಾರ ಏರ್ಪಡಿಸಿದ್ದ ಜ್ಞಾನ ಸಿರಿ ಕಿಡ್ಸ್‌ ಅಕಾಡೆಮಿ ಶಾಲೆಯ 2018-19ನೇ ಸಾಲಿನ ಶಾಲೆ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಾಲೆ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕಾಗಿ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷ ಣ ಕೊಡಿಸಲು ಒಳ್ಳೆಯ ಶಾಲೆ ಹುಡುಕುತ್ತಾರೆ. ಶಿಕ್ಷ ಣ ಸಂಸ್ಥೆಗಳು ಕೇವಲ ಹಣ ಗಳಿಸುವ ಉದ್ದೇಶ ಹೊಂದದೆ ಮಕ್ಕಳಿಗೆ ಉತ್ತಮ ಸಂಸ್ಕೃತಿ, ನೈತಿಕತೆಯೊಂದಿಗೆ ಉತ್ತಮ ಕಲಿಕೆಯಲ್ಲಿ ತೊಡಗಿಸಿಕೊಂಡು ರಾಷ್ಟ್ರಕ್ಕೆ ಉತ್ತಮ ಪ್ರಜೆಗಳನ್ನು ನೀಡÜಬೇಕು ಎಂದರು.

ತಾ.ಪಂ. ಸದಸ್ಯ ಆರ್‌.ತಿಪ್ಪೇಶ್‌ರಾವ್‌ ಮಾತನಾಡಿದರು. ಹರ್ಷವರ್ಧನ ಎಜುಕೇಷನ್‌ ಟ್ರಸ್ಟ್‌ ಅಧ್ಯಕ್ಷ ಎಚ್‌.ಕೆ.ಶಂಕರಪ್ಪ ಅಧ್ಯಕ್ಷ ತೆ ವಹಿಸಿದ್ದರು. ಗ್ರಾ.ಪಂ. ಅಧ್ಯಕ್ಷ ಮಮತ ಮಂಜುನಾಥ್‌, ಸದಸ್ಯ ಯು.ಕೆ.ವೆಂಕಟೇಶ್‌, ಮಾಜಿ ಅಧ್ಯಕ್ಷ ಎಚ್‌.ಕೆ.ಶ್ರೀನಿವಾಸ್‌ ಮಾತನಾಡಿದರು. ಗ್ರಾ.ಪಂ. ಉಪಾಧ್ಯಕ್ಷ ನರಸಿಂಹಮೂರ್ತಿ, ಸದಸ್ಯ ಎಂ.ನಾಗೇಶ್‌, ಟ್ರಸ್ಟಿಗಳಾದ ಮಾಲಾ ರಮೇಶ್‌, ಸಹಶಿಕ್ಷ ಕಿ ಸುಷ್ಮಾ, ಪೋಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಈ ಸಂದರ್ಭ ಶಾಲೆ ವಾರ್ಷಿಕೋತ್ಸವ ಅಂಗವಾಗಿ ಪೋಷಕರು ಹಾಗೂ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಮಕ್ಕಳು ಸಾಂಸ್ಕೃತಿಕ ಕಾರ‍್ಯಕ್ರಮ ನಡೆಸಿಕೊಟ್ಟರು. ಶಿಕ್ಷ ಕಿ ಶಶಿಕಲಾ ಮತ್ತು ಅರ್ಪಿತಾ ಪ್ರಾರ್ಥಿಸಿ, ಸಹಶಿಕ್ಷ ಕ ಬಸವರಾಜ್‌ ಸ್ವಾಗತಿಸಿ, ಎನ್‌.ಚಂದ್ರಪ್ಪ ನಿರೂಪಿಸಿ, ಪ್ರಾಂಶುಪಾಲ ಎಚ್‌.ಸುರೇಶ್‌ ಸಾಗರ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ